ಉದಾನ ಗಾಯಾಳು; ಪುಣೆ ಪಂದ್ಯಕ್ಕಿಲ್ಲ
Team Udayavani, Jan 8, 2020, 11:14 PM IST
ಇಂದೋರ್: ಶ್ರೀಲಂಕಾದ ಎಡಗೈ ವೇಗಿ ಇಸುರು ಉದಾನ ಗಾಯಾಳಾಗಿದ್ದು, ಭಾರತದೆದುರಿನ ಅಂತಿಮ ಟಿ20 ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಇಂದೋರ್ ಪಂದ್ಯಕ್ಕಾಗಿ ಅಭ್ಯಾಸ ನಡೆಸುತ್ತಿದ್ದ ವೇಳೆ ಉದಾನ ಬೆನ್ನುನೋವಿಗೆ ಸಿಲುಕಿದ್ದರು. ಆದರೂ ನೋವನ್ನು ಮುಚ್ಚಿಟ್ಟು ಮಂಗಳವಾರ ಟಿ20 ಪಂದ್ಯ ಆಡಲಿಳಿದಿದ್ದರು. ಅವರ ಸಮಸ್ಯೆ ಕೋಚ್ ಮಿಕ್ಕಿ ಆರ್ಥರ್ ಗಮನಕ್ಕೆ ಬಂತು. ಹೀಗಾಗಿ ಉದಾನ ಅವರಿಗೆ ಇಂದೋರ್ನಲ್ಲಿ ಬೌಲಿಂಗ್ ಅವಕಾಶ ನೀಡಲಿಲ್ಲ.
ಉದಾನ ಲಂಕಾ ಟಿ20ಯ ಪ್ರಮುಖ ಅಸ್ತ್ರವಾಗಿದ್ದು, ಮುಂದಿನ ವಿಶ್ವಕಪ್ಗೆ ಅವರ ಅಗತ್ಯವಿದೆ ಎಂದು ಆರ್ಥರ್ ಹೇಳಿದ್ದಾರೆ.”ನಾನೇನೂ ವೈದ್ಯನಲ್ಲ. ಆದರೂ ನನ್ನ ಹಲವು ವರ್ಷಗಳ ಕ್ರಿಕೆಟ್ ಅನುಭವದಿಂದ ಉದಾನ ಅವರ ಸಮಸ್ಯೆಯನ್ನು ಗುರುತಿಸಿದೆ.
ಆಟಗಾರನೊಬ್ಬ ಗಾಯಗೊಂಡಾಗ ಯಾವ ರೀತಿ ವರ್ತಿಸುತ್ತಾನೆ ಎಂಬುದನ್ನು ನಾನು ಬಲ್ಲೆ’ ಎಂದು ಮಿಕ್ಕಿ ಆರ್ಥರ್ ಹೇಳಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ವೇಳೆ ಉದಾನ ಸಂಪೂರ್ಣ ಗುಣಮುಖರಾಗಿ ತಂಡಕ್ಕೆ ಮರಳಲಿದ್ದಾರೆ ಎಂಬುದು ಆರ್ಥರ್ ಅಭಿಪ್ರಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.