ಆಟದಿಂದ ನಿವೃತ್ತಿಯಾಗಬೇಕೆ? ಧೋನಿ ಬೆಂಬಲಕ್ಕೆ ನಿಂತ ಮಾಕ್ಸ್ ವೆಲ್
Team Udayavani, Feb 26, 2019, 7:46 AM IST
ವಿಶಾಖಪಟ್ಟಣ: ಆಸೀಸ್ ವಿರುದ್ಧದ ಮೊದಲ ಚುಟುಕು ಪಂದ್ಯದಲ್ಲಿ ಭಾರತೀಯ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ನಿಧಾನ ಗತಿಯ ಬ್ಯಾಟಿಂಗ್ ಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಧೋನಿ ತಮ್ಮ ಇತ್ತೀಚೆಗೆ ತಮ್ಮ ಲಯ ಕಳೆದುಕೊಳ್ಳುತ್ತಿದ್ದಾರೆ. ಅವರು ಟಿ-20 ಪಂದ್ಯಕ್ಕೆ ಅನ್ ಫಿಟ್ ಎಂಬ ಮಾತು ಕೇಳಿ ಬರುತ್ತಿರುವ ಸಮಯದಲ್ಲಿ ಮ್ಯಾಕ್ಸ್ ವೆಲ್ ಧೋನಿ ಬೆಂಬಲಕ್ಕೆ ನಿಂತಿದ್ದಾರೆ.
‘ ಈ ಪಿಚ್ ನಲ್ಲಿ ಬ್ಯಾಟಿಂಗ್ ತುಂಬಾ ಕಷ್ಟವಾಗಿತ್ತು. ಧೋನಿಯಂತಹ ವಿಶ್ವದರ್ಜೆಯ ಆಟಗಾರನಿಗೂ ಚೆಂಡನ್ನು ಬೌಂಡರಿ ಗೆರೆ ದಾಟಿಸಲು ಕಷ್ಟವಾಗಿತ್ತು. ಧೋನಿ ಕೊನೆಯ ಓವರ್ ನಲ್ಲಿ ಸಿಕ್ಸರ್ ಬಾರಿಸಿದರೂ ಆ ಓವರ್ ನಲ್ಲಿ ಗಳಿಸಿದ್ದು ಕೇವಲ ಏಳು ರನ್ ಮಾತ್ರ. ಇದರಿಂದ ಪಿಚ್ ನ ಕಠಿಣತೆ ತಿಳಿಯುತ್ತದೆ ಎಂದರು.
ಐದನೇ ಕ್ರಮಾಂಕದಲ್ಲಿ ಆಡಿದ್ದ ಮಹೇಂದ್ರ ಸಿಂಗ್ ಧೋನಿ 37 ಎಸೆತಗಳಿಂದ 29 ರನ್ ಗಳಿಸಿದ್ದರು. ಈ ನಿಧಾನಗತಿಯ ಇನ್ನಿಂಗ್ಸ್ ನಲ್ಲಿ ಧೋನಿ ಕೇವಲ ಒಂದು ಸಿಕ್ಸರ್ ಬಾರಿಸಿದ್ದರು. ಧೋನಿ ಬ್ಯಾಟ್ ನಿಂದ ಯಾವುದೇ ಬೌಂಡರಿ ಬಂದಿರಲಿಲ್ಲ. ಕೊನೆಯ ಓವರ್ ನ ಐದನೇ ಬಾಲ್ ನಲ್ಲಿ ಧೋನಿ ರನ್ ಗಳಿಸುವ ಅವಕಾಶ ಇದ್ದರೂ ರನ್ ಓಡಿರಲಿಲ್ಲ. ಪಂದ್ಯವನ್ನು ಭಾರತ ಕೊನೆಯ ಎಸೆತದಲ್ಲಿ ಸೋತಿತ್ತು.
ಈ ಬಗ್ಗೆ ಸಾಕಷ್ಟು ಟೀಕೆಗಳು ಧೋನಿ ವಿರುದ್ಧ ಕೇಳಿ ಬಂದಿವೆ. ಧೋನಿಯಲ್ಲಿ ಈಗ ಮೊದಲಿನಂತೆ ಬ್ಯಾಟ್ ಬೀಸುವ ಶಕ್ತಿ ಇಲ್ಲ. ವಿಶ್ವದ ಬೆಸ್ಟ್ ಮ್ಯಾಚ್ ಫಿನಿಶರ್ ಎಂಬ ಖ್ಯಾತಿಯ ಧೋನಿ ಈಗ ಬೌಂಡರಿ ಬಾರಿಸಲೂ ಪರದಾಡುತ್ತಿದ್ದಾರೆ. ಹಾಗಾಗಿ ಧೋನಿ ಹೊಡಿಬಡಿ ಆಟದಿಂದ ನಿವೃತ್ತಿ ಪಡೆಯಬೇಕು ಎಂದು ಹಲವರು ಆಗ್ರಹ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.