Italian Open ಟೆನಿಸ್: ಮೂರನೇ ಪ್ರಶಸ್ತಿ ಗೆದ್ದ ಇಗಾ ಸ್ವಿಯಾಟೆಕ್
Team Udayavani, May 20, 2024, 12:30 AM IST
ರೋಮ್: ಪೋಲೆಂಡ್ನ ಇಗಾ ಸ್ವಿಯಾಟೆಕ್ 3ನೇ ಬಾರಿಗೆ ಇಟಾಲಿಯನ್ ಓಪನ್ ಟೆನಿಸ್ ಪ್ರಶಸ್ತಿ ಜಯಿಸಿದ್ದಾರೆ. ಫೈನಲ್ನಲ್ಲಿ ಅವರು ಅರಿನಾ ಸಬಲೆಂಕಾ ವಿರುದ್ಧ 6-2, 6-3 ಅಂತರದ ಗೆಲುವು ಸಾಧಿಸಿದರು.
ಇದು ವಿಶ್ವದ ನಂ.1 ಮತ್ತು ನಂ.2 ಆಟಗಾರ್ತಿಯರ ನಡುವಿನ ಕದನವಾಗಿತ್ತು. ಒಂದೂವರೆ ಗಂಟೆಯ ಕಾಲ ಇವರ ಸ್ಪರ್ಧೆ ಸಾಗಿತು. 2021 ಮತ್ತು 2022ರಲ್ಲೂ ಸ್ವಿಯಾಟೆಕ್ ರೋಮ್ನಲ್ಲಿ ಚಾಂಪಿಯನ್ ಆಗಿದ್ದರು. ಅರ್ಥಾತ್, 4 ವರ್ಷಗಳಲ್ಲಿ 3 ಸಲ ಪ್ರಶಸ್ತಿ ಗೆದ್ದ ಹಿರಿಮೆ ಪೋಲೆಂಡ್ ಆಟಗಾರ್ತಿಯದ್ದಾಯಿತು. ಇದು ಸಬಲೆಂಕಾ ವಿರುದ್ಧ ಆಡಿದ 11 ಪಂದ್ಯಗಳಲ್ಲಿ ಸ್ವಿಯಾಟೆಕ್ ಸಾಧಿಸಿದ 8ನೇ ಗೆಲುವು.
22 ವರ್ಷದ ಸ್ವಿಯಾಟೆಕ್ಗೆ ಒಲಿದ 21ನೇ ಟೆನಿಸ್ ಪ್ರಶಸ್ತಿ ಇದಾಗಿದೆ. ಅವರೀಗ ಫ್ರೆಂಚ್ ಓಪನ್ ಪಂದ್ಯಾವಳಿಗೆ ಹೊಸ ಸ್ಫೂರ್ತಿ ಪಡೆದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.