ಇಟಲಿ ಕೋವಿಡ್ 19 ಸೋಂಕಿತರ ನೆರವಿಗೆ ಧಾವಿಸಿದ ಫುಟ್‌ಬಾಲ್ ಕ್ಲಬ್
Team Udayavani, Mar 22, 2020, 5:41 AM IST
ರೋಮ್: ಕೋವಿಡ್ 19 ವೈರಸ್‌ನಿಂದ ತತ್ತರಿಸಿರುವ ಇಟಲಿಯನ್ನರ ನೆರವಿಗೆ ಇಲ್ಲಿನ ಫುಟ್‌ಬಾಲ್ ಕ್ಲಬ್ ಎ.ಎಸ್. ರೋಮ ಮುಂದಾಗಿದೆ. ನಿಧಿ ಸಂಗ್ರಹ ಅಭಿಯಾನದ ಮೂಲಕ ಅದು 3 ಐಸಿ ವೆಂಟಿಲೇಟರ್ ಮತ್ತು 8 ನೂತನ ಐಸಿ ಹಾಸಿಗೆಗಳನ್ನು ರೋಮ್‌ನ ಆಸ್ಪತ್ರೆಯೊಂದಕ್ಕೆ ನೀಡಿದೆ. ಜತೆಗೆ ಈ ಕ್ಲಬ್‌ನ ಆಟಗಾರರು, ಕೋಚ್ ಹಾಗೂ ಇತರ ಸಿಬಂದಿಗಳೆಲ್ಲ ಒಂದು ದಿನದ ಸಂಬಳವನ್ನು ಆರೋಗ್ಯ ನಿಧಿಗೆ ನೀಡಲು ನಿರ್ಧರಿಸಿದ್ದಾರೆ.
ರೋಮ್‌ನ ಪ್ರಸಿದ್ಧ ಆಸ್ಪತ್ರೆಯಾಗಿರುವ “ಲಝಾರೊ ಸ್ಪಲ್ಲಾಂಝನಿ’ಯ ಆಡಳಿತ ಮಂಡಳಿಯ ಕೋರಿಗೆ ಮೇರೆಗೆ ಎ.ಎಸ್. ರೋಮ ಫುಟ್‌ಬಾಲ್ ಕ್ಲಬ್ ಈ ನಿರ್ಧಾರಕ್ಕೆ ಬಂದಿದೆ. ಕ್ಲಬ್‌ನ ಒಟ್ಟು ಪರಿಹಾರ ಮೊತ್ತವೀಗ 2 ಲಕ್ಷ ಯೂರೋ ಗಡಿ ದಾಟಿದೆ. ಕಳೆದ ವಾರ ನಿಧಿ ಸಂಗ್ರಹ ಅಭಿಯಾನ ಆರಂಭಗೊಂ ಡಿದ್ದು, ಈವರೆಗೆ 4,60,000 ಯೂರೋಸ್ ಒಟ್ಟುಗೂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ
Malpe ಬೀಚ್ ಸ್ವಚ್ಛತೆ: 3 ದಿನದಲ್ಲಿ 26 ಲೋಡ್ ಕಸ ಸಂಗ್ರಹ
Sasthan: ಪಾಂಡೇಶ್ವರ; ಲಿಂಗ ಮುದ್ರೆ ಕಲ್ಲು ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.