ಮುಗಿಯಿತು ಕೊಹ್ಲಿ-ಅನುಷ್ಕಾ ಮದುವೆ ರಹಸ್ಯ: ಇಟಲಿಯಲ್ಲಿ ಕೂಡಿತು ಕಂಕಣ
Team Udayavani, Dec 12, 2017, 6:00 AM IST
ಮಿಲಾನ್ (ಇಟಲಿ): ಹಲವು ದಿನಗಳ ಕಾಲ ಹೌದೋ, ಅಲ್ಲವೋ ಎಂಬ ಗೊಂದಲದಲ್ಲೇ ಎಲ್ಲರನ್ನೂ ಇಟ್ಟಿದ್ದ ಸಂಗತಿ ಈಗ ಖಚಿತವಾಗಿದೆ. ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್ ನಟಿ ಅನುಷ್ಕಾ ಶರ್ಮ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದು ಹೌದೆನ್ನುವುದು ಈಗ ಜಗಜ್ಜಾಹೀರು. ಅದನ್ನು ಕೊಹ್ಲಿಯೇ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. ಈ ಟ್ವೀಟನ್ನು ಕೆಲವೇ ನಿಮಿಷದಲ್ಲಿ 26 ಸಾವಿರ ಮಂದಿ ಲೈಕ್ ಮಾಡಿದ್ದಾರೆ.
ಇಟಲಿಯ ಐತಿಹಾಸಿಕ ರೋಮ್ ನಗರಕ್ಕೆ ಕೇವಲ 2 ಗಂಟೆ ದೂರವಿರುವ ಟಸ್ಕನಿ ಎಂಬ ಹಳ್ಳಿಯ ಬೋರ್ಗೋ ಫಿನೊಶಿಯೆಟೊ ಎಂಬ ರೆಸಾರ್ಟ್‌ನಲ್ಲಿ ಮದುವೆ ಸೋಮವಾರ ಮುಗಿದಿದೆ. ಇಂತಹ ರಸಗಳಿಗೆಯನ್ನು ಕೊಹ್ಲಿ ಟ್ವೀಟ್‌ನಲ್ಲಿ ಹೇಳಿದ್ದು ಹೀಗೆ: “ಇವತ್ತು ನಾವು ಶಾಶ್ವತವಾಗಿ ಪ್ರೀತಿಯಲ್ಲಿ ಒಂದಾಗಿದ್ದೇವೆಂದು ಪರಸ್ಪರ ಭಾಷೆ ನೀಡಿದ್ದೇವೆ. ಇಂತಹ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಿಜಕ್ಕೂ ಸಂಭ್ರಮವಾಗುತ್ತಿದೆ. ಅಭಿಮಾನಿಗಳು, ಹಿತಚಿಂತಕರ ಪ್ರೀತಿ ಮತ್ತು ಬೆಂಬಲದಿಂದ ಇದು ವಿಶೇಷ ಗಳಿಗೆಯಾಗಿ ಪರಿಣಮಿಸಿದೆ. ನಮ್ಮ ಬಾಂಧವ್ಯದ ಮಹತ್ತರ ಹೊತ್ತಿನಲ್ಲಿ ನೀವೂ ಒಂದಾಗಿದ್ದಕ್ಕೆ ಧನ್ಯವಾದಗಳು’.
ಮುಗಿದ ಗೊಂದಲ: ಇಟಲಿಯ ದುಬಾರಿ ರೆಸಾರ್ಟ್‌ನಲ್ಲಿ ಕೊಹ್ಲಿ ಜೋಡಿ ಮದುವೆಯಾಗಲಿದೆ ಎಂದು ಸುದ್ದಿಯಾಗಿದ್ದರೂ ಅದು ಯಾವಾಗ ಎನ್ನುವುದು ಗೊತ್ತಾಗಿರಲಿಲ್ಲ. ಈ ಬಗ್ಗೆ ದಿನಕ್ಕೊಂದು ಸುದ್ದಿ ಹರಡುತ್ತಿತ್ತು. ಕೆಲವು ಮೂಲಗಳು ಮೊನ್ನೆ ಶನಿವಾರವೇ ಮದುವೆ ಮುಗಿದಿದೆ ಘೋಷಣೆಯಷ್ಟೇ ಬಾಕಿ ಎಂದು ಹೇಳಿದ್ದವು. ಇನ್ನು ಕೆಲವು ಮೂಲಗಳು ಮಂಗಳವಾರವೇ ಮದುವೆ ಎಂದಿದ್ದವು. ಅಂತೂ ಸೋಮವಾರ ಕೊಹ್ಲಿ ಅದನ್ನೆಲ್ಲ ಒಂದು ಟ್ವೀಟ್ ಮೂಲಕ ಇಲ್ಲ ಮಾಡಿದ್ದಾರೆ.
ಅತಿಥಿಗಳು ಯಾರು?: ಇಂತಹ ಮಹತ್ವದ ಸಮಾರಂಭ ಅತ್ಯಂತ ಖಾಸಗಿಯಾಗಿ ನಡೆಯಿತು. ಕೊನೆಯ ಹಂತದವರೆಗೂ ಮದುವೆ ನಡೆಯುತ್ತದೆ ಎನ್ನುವುದನ್ನು ಕೊಹ್ಲಿ ಜೋಡಿ ಯಾರಿಗೂ ಬಾಯ್ಬಿಟ್ಟಿರಲಿಲ್ಲ. ಅತಿಥಿಗಳು ಯಾರು ಎನ್ನುವುದು ಗೊತ್ತಾಗಿಲ್ಲ. ಮೂಲಗಳ ಪ್ರಕಾರ ಕೊಹ್ಲಿ ಕಡೆಯಿಂದ ಸಚಿನ್ ತೆಂಡುಲ್ಕರ್, ಯುವರಾಜ್ ಸಿಂಗ್, ಅನುಷ್ಕಾ ಕಡೆಯಿಂದ ಶಾರುಖ್ ಖಾನ್, ಅಮೀರ್ ಖಾನ್ ಮಾತ್ರ ಪಾಲ್ಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
IPL Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್ ಅಯ್ಯರ್ ಪಂಜಾಬ್ ಪಾಲಿಗೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.