‘ಆಟಗಾರರಿಗೆ ದುರಹಂಕಾರ’ ಎಂಬ ಕಪಿಲ್ ದೇವ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಜಡ್ಡು
Team Udayavani, Aug 1, 2023, 4:59 PM IST
ಟ್ರಿನಿಡಾಡ್: ಭಾರತೀಯ ಕ್ರಿಕೆಟ್ ಟೀಕಾಕಾರರಲ್ಲಿ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಕೂಡಾ ಒಬ್ಬರು. ಭಾರತ ತಂಡ ಕಳಪೆ ಪ್ರದರ್ಶನ ನೀಡಿದಾಗೆಲ್ಲಾ ಅವರು ಟೀಕಿಸುತ್ತಾರೆದರು. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಸೋತ ಬಳಿಕ ತಂಡವನ್ನು ಟೀಕಿಸಿದ ಕಪಿಲ್ ಅವರ ಕಾಮೆಂಟ್ ಗಳು ವೈರಲ್ ಆಗಿವೆ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಬಂದ ಹಣವು ಆಟಗಾರರಲ್ಲಿ ದುರಹಂಕಾರದ ಭಾವನೆಯನ್ನು ತಂದಿದೆ ಎಂದು ಅವರು ಹೇಳಿದ್ದರು.
ಆದರೆ ಇದೀಗ ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ಈ ಆರೋಪಗಳನ್ನು ತಳ್ಳಿಹಾಕಿದ್ದು, ಭಾರತ ತಂಡದಲ್ಲಿ ಯಾವುದೇ ದುರಹಂಕಾರವಿಲ್ಲ ಎಂದಿದ್ದಾರೆ.
“ಅವರು ಇದನ್ನು ಯಾವಾಗ ಹೇಳಿದ್ದಾರೆಂದು ನನಗೆ ತಿಳಿದಿಲ್ಲ. ನಾನು ಈ ವಿಷಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹುಡುಕುವುದಿಲ್ಲ. ಪ್ರತಿಯೊಬ್ಬರಿಗೂ ಅವರದೇ ಆದ ಅಭಿಪ್ರಾಯವಿದೆ. ಮಾಜಿ ಆಟಗಾರರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ಸಂಪೂರ್ಣ ಹಕ್ಕು ಹೊಂದಿದ್ದಾರೆ, ಆದರೆ ಈ ಈ ತಂಡದಲ್ಲಿ ದುರಹಂಕಾರವಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದ ಮೊದಲು ಜಡೇಜಾ ಸುದ್ದಿಗಾರರಿಗೆ ತಿಳಿಸಿದರು.
“ಪ್ರತಿಯೊಬ್ಬರೂ ಅವರವರ ಕ್ರಿಕೆಟ್ ಅನ್ನು ಆನಂದಿಸುತ್ತಿದ್ದಾರೆ. ಎಲ್ಲರೂ ಶ್ರಮಜೀವಿಗಳು, ಯಾರೂ ಏನನ್ನೂ ಲಘುವಾಗಿ ತೆಗೆದುಕೊಂಡಿಲ್ಲ, ಅವರು ತಮ್ಮ 100% ನೀಡುತ್ತಿದ್ದಾರೆ” ಎಂದಿದ್ದಾರೆ.
We are definitely going to play our best cricket in the third & final ODI: Ravindra Jadeja #TeamIndia | #WIvIND | @imjadeja pic.twitter.com/4oRPC255n3
— BCCI (@BCCI) July 31, 2023
ದಿ ವೀಕ್ ಗೆ ನೀಡಿದ್ದ ಸಂದರ್ಶನದಲ್ಲಿ ಕಪಿಲ್ ದೇವ್ ಅವರು “ಹೆಚ್ಚು ಹಣ ಸಿಗುತ್ತಿದ್ದಂತೆ ಆಟಗಾರರಿಗೆ ದುರಹಂಕಾರ ಬರುತ್ತಿದೆ. ಅವರು ತಮಗೆ ಎಲ್ಲಾ ಗೊತ್ತು ಎಂಬ ರೀತಿ ವರ್ತಿಸುತ್ತಾರೆ” ಎಂದಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.