ಜಡೇಜ ಹೋಟಲಲ್ಲಿ ಅಯೋಗ್ಯ ಆಹಾರ
Team Udayavani, Oct 9, 2017, 7:45 AM IST
ನವದೆಹಲಿ: ಭಾರತ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ “ಜಡ್ಡು ಫುಡ್ ಫೀಲ್ಡ್’ರೆಸ್ಟೋರೆಂಟ್‌ನಲ್ಲಿ ತಿನ್ನಲು ಅಯೋಗ್ಯ ಆಹಾರ ಸಿಕ್ಕಿರುವುದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ರಾಜ್ ಕೋಟ್ ನಗರಪಾಲಿಕೆ ನಡೆಸಿದ ದಾಳಿಯಲ್ಲಿ ವಿಷಯ ಬಹಿರಂಗಗೊಂಡಿದೆ.
ಇದೊಂದು ಆಘಾತಕಾರಿ ಸುದ್ದಿಯಾಗಿದ್ದು ಜನರನ್ನು ತಲ್ಲಣಗೊಳಿಸಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ರಾಜ್‌ಕೋಟ್‌ನಲ್ಲಿ ಜಡೇಜ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಇಲ್ಲಿ ಪಾಲಿಕೆ ನಡೆಸಿದ ದಾಳಿಯ ವೇಳೆ ಸಿಕ್ಕಿರುವ ಆಹಾರ ಪದಾರ್ಥಗಳಾದ ಬ್ರೆಡ್‌ನಲ್ಲಿ ಫಂಗಸ್ ಹಿಡಿದಿತ್ತು. ಮಾತ್ರವಲ್ಲ ಹಲವು ದಿನಗಳಿಂದ ಶೇಖರಿಸಿಟ್ಟಿದನ್ನು ಗ್ರಾಹಕರಿಗೆ ನೀಡಲಾಗುತ್ತಿತ್ತು. ಜತೆಗೆ ಇಲ್ಲಿ ಸಂಗ್ರಹವಾಗಿದ್ದ ಬಹುತೇಕ ಆಹಾರ ಪದಾರ್ಥದ ಪೊಟ್ಟಣಗಳಲ್ಲಿ ಎಕ್ಸ್‌ಪೈರಿ ದಿನಾಂಕವೇ ನಮೂದಾಗಿಲ್ಲ. ಜತೆಗೆ ಹಾಳಾಗಿರುವ ತರಕಾರಿಗಳನ್ನು ಬಳಸಿಕೊಳ್ಳಲಾಗಿತ್ತು ಎನ್ನಲಾಗಿದೆ. ಈ ರೆಸ್ಟೋರೆಂಟನ್ನು ಜಡೇಜ ಸಹೋದರಿ ನೈನಾ ನೋಡಿಕೊಳ್ಳುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.