ಜಡೇಜ ನಂ.1 ಆಲ್‌ರೌಂಡರ್
Team Udayavani, Aug 9, 2017, 3:30 PM IST
ದುಬಾೖ: ಭಾರತದ ರವೀಂದ್ರ ಜಡೇಜ ಇದೇ ಮೊದಲ ಬಾರಿಗೆ ನಂಬರ್ ವನ್ ಟೆಸ್ಟ್ ಆಲ್‌ರೌಂಡರ್ ಆಗಿ ಮೂಡಿಬಂದಿದ್ದಾರೆ. ಶ್ರೀಲಂಕಾ ವಿರುದ್ಧ ಕೊಲಂಬೊ ಟೆಸ್ಟ್ ನಲ್ಲಿ ತೋರ್ಪಡಿಸಿದ ಅಮೋಘ ಪ್ರದರ್ಶನದಿಂದ ಜಡೇಜ ಈ ಹೆಗ್ಗಳಿಕೆಗೆ ಪಾತ್ರರಾದರು. ಈವರೆಗೆ ಅಗ್ರಸ್ಥಾನಿಯಾಗಿದ್ದ ಬಾಂಗ್ಲಾದೇಶದ ಶಕಿಬ್ ಅಲ್ ಹಸನ್ ದ್ವಿತೀಯ ಸ್ಥಾನಕ್ಕೆ ಇಳಿದರು.
ಕೊಲಂಬೊ ಟೆಸ್ಟ್‌ನಲ್ಲಿ ರವೀಂದ್ರ ಜಡೇಜ ಅಜೇಯ 70 ರನ್ ಬಾರಿಸುವುದರ ಜತೆಗೆ 7 ವಿಕೆಟ್ ಉರುಳಿಸಿದ್ದರು. ಇದರಲ್ಲಿ 5 ವಿಕೆಟ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಲಭಿಸಿತ್ತು. ಈ ಸಾಧನೆಗಾಗಿ ಜಡೇಜ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು.
ಜಡೇಜ ಟೆಸ್ಟ್ ಕ್ರಿಕೆಟಿನ ನಂಬರ್ ವನ್ ಬೌಲರ್ ಕೂಡ ಹೌದು. ಬ್ಯಾಟಿಂಗ್ ವಿಭಾಗದಲ್ಲಿ 9 ಸ್ಥಾನ ಮೇಲೇರಿ 51ನೇ ಸ್ಥಾನಕ್ಕೆ ಬಂದಿದ್ದಾರೆ. ಕೊಲಂಬೋದಲ್ಲಿ ಶತಕ ಬಾರಿಸಿದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಕೂಡ ರ್‍ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ್ದಾರೆ. ಪೂಜಾರ 4ರಿಂದ 3ನೇ ಸ್ಥಾನಕ್ಕೆ ಬಂದರೆ, ರಹಾನೆ 11ರಿಂದ 5ನೇ ಸ್ಥಾನಕ್ಕೇರಿದರು. ಟಾಪ್-10 ಯಾದಿಯಲ್ಲಿರುವ ಭಾರತದ ಮತ್ತೂಬ್ಬ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ 5ನೇ ಸ್ಥಾನ ಕಾಯ್ದುಕೊಂಡಿದ್ದಾರೆ.
ಮೂರಕ್ಕೇರಿದ ಇಂಗ್ಲೆಂಡ್
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಂಡ ಇಂಗ್ಲೆಂಡ್ ಈಗ ನೂತನ ಐಸಿಸಿ ಟೀಮ್ ರ್‍ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೆ ಏರಿದೆ. ಮೂರರಲ್ಲಿದ್ದ ಆಸ್ಟ್ರೇಲಿಯ ನಾಲ್ಕಕ್ಕೆ ಕುಸಿದಿದೆ.
ಈ ಸರಣಿ ಸೋಲಿನ ಹೊರತಾಗಿಯೂ ದಕ್ಷಿಣ ಆಫ್ರಿಕಾ ದ್ವಿತೀಯ ಸ್ಥಾನವನ್ನೇ ಕಾಯ್ದುಕೊಂಡಿದೆ. ಆದರೆ ರೇಟಿಂಗ್ ಅಂಕ 110ಕ್ಕೆ ಇಳಿದಿದೆ. ಶ್ರೀಲಂಕಾ ವಿರುದ್ಧ ಈಗಾಗಲೇ ಸರಣಿ ವಶಪಡಿಸಿಕೊಂಡಿರುವ ಭಾರತ ತನ್ನ ಅಗ್ರಸ್ಥಾನವನ್ನು ಇನ್ನಷ್ಟು ಭದ್ರಪಡಿಸಿದೆ.
ಟಾಪ್-10 ಟೆಸ್ಟ್ ತಂಡಗಳು
1. ಭಾರತ (123), 2. ದಕ್ಷಿಣ ಆಫ್ರಿಕಾ (110), 3. ಇಂಗ್ಲೆಂಡ್ (105), 4. ಆಸ್ಟ್ರೇಲಿಯ (100), 5. ನ್ಯೂಜಿಲ್ಯಾಂಡ್ (97), 6. ಪಾಕಿಸ್ಥಾನ (93), 7. ಶ್ರೀಲಂಕಾ (92), 8. ವೆಸ್ಟ್ ಇಂಡೀಸ್ (75), 9. ಬಾಂಗ್ಲಾದೇಶ (69), 10. ಜಿಂಬಾಬ್ವೆ (0).
ಟಾಪ್-5 ಆಲ್‌ರೌಂಡರ್
1. ರವೀಂದ್ರ ಜಡೇಜ (438), 2. ಶಕಿಬ್ ಆಲ್ ಹಸನ್ (431), 3. ಆರ್. ಅಶ್ವಿನ್ (418), 4. ಮೊಯಿನ್ ಅಲಿ (409), 5. ಬೆನ್ ಸ್ಟೋಕ್ಸ್ (360).
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.