ವಿಂಟರ್ ಒಲಿಂಪಿಕ್ಸ್: ಜಗದೀಶ್‌ಗೆ 103ನೇ ಸ್ಥಾನ
Team Udayavani, Feb 17, 2018, 6:10 AM IST
ಪಿಯಾಂಗ್‌ಚಾಂಗ್: ಪುರುಷರ 15 ಕಿ.ಮೀ. ಫ್ರೀ ಕ್ರಾಸ್‌ಕಂಟ್ರಿ ರೇಸ್‌ನಲ್ಲಿ ಭಾರತದ ಸ್ಕೀಯರ್ ಜಗದೀಶ್ ಸಿಂಗ್ 103ನೇ ಸ್ಥಾನ ಪಡೆಯವ ಮೂಲಕ ನಿರಾಸೆ ಮೂಡಿಸಿದ್ದಾರೆ. ಇದರೊಂದಿಗೆ ಈ ಬಾರಿಯ ಪಿಯಾಂಗ್‌ಚಾಂಗ್ ವಿಂಟರ್ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕದಾಸೆಗೆ ತಣ್ಣೀರು ಎರಚಿದಂತಾಗಿದೆ.
33.43.9 ಸೆಕೆಂಡ್‌ಗಳಲ್ಲಿ ಓಟ ಮುಗಿಸಿದ ಸ್ವಿಜರ್‌ಲ್ಯಾಂಡ್‌ನ ಡಾರಿಯೊ ಕೊಲೋಗ್ನ 3ನೇ ಬಾರಿಗೆ ಒಲಿಂಪಿಕ್ ಚಿನ್ನ ಗೆದ್ದರೆ, ನಾರ್ವೆಯ ಸಿಮೆನ್ ಕ್ರುಜರ್ (34:02.2) ಬೆಳ್ಳಿ, ರಷ್ಯಾದ ಡೇನಿಸ್ ಸ್ಪಿತ್ಸೋವ್ (34:06.9) ಕಂಚಿನ ಪದಕ ಗೆದ್ದರು.
ಜಮ್ಮು-ಕಾಶ್ಮೀರದ ಗುಲ್ಮಾರ್ಗ್ ಹೈ ಆಲ್ಟಿಟ್ಯೂಡ್ ವಾರ್‌ಫೇರ್ ಸ್ಕೂಲ್‌ನಲ್ಲಿ (ಎಚ್‌ಎಬ್ಲ್ಯುಎಸ್)ನಲ್ಲಿ ತರಬೇತಿ ಪಡೆದಿರುವ ಜಗದೀಶ್ ಆರಂಭಿಕ 1.5 ಕಿ.ಮೀ. ಓಟದ ಸಂದರ್ಭ ಮುಂಚೂಣಿ ಸ್ಪರ್ಧಿಗಿಂತ ಕೇವಲ 40 ಸೆಕೆಂಡ್‌ಗಳಷ್ಟೇ ಹಿಂದಿದ್ದರು. ಆದರೆ ಓಟ ಮುಂದುವರಿದಂತೆ ಇವರ ನಡುವಿನ ಅಂತರವೂ ಹೆಚ್ಚುತ್ತ ಹೋಯಿತು.
ದುರದೃಷ್ಟವೆಂದರೆ ಈ ವಿಂಟರ್ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದು ಬರೀ ಇಬ್ಬರೇ ಆ್ಯತ್ಲೀಟ್‌ಗಳು. ಅವರಲ್ಲಿ ಶಿವ ಕೇಶವನ್ “ಜೂಜ್’ನಲ್ಲಿ 34ನೇ ಸ್ಥಾನದೊಂದಿಗೆ ವಿಂಟರ್ ಒಲಿಂಪಿಕ್ಸ್‌ಗೆ ವಿದಾಯ ಹೇಳಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.