ಹಿಮಾದಾಸ್‌ಗೆ ಜಗ್ಗಿ ಅಭಿನಂದನೆ: ಕೀಳು ಅಭಿರುಚಿ ಪ್ರಕಟಿಸಿದ ಟ್ವೀಟಿಗರು
Team Udayavani, Jul 26, 2019, 5:55 AM IST
ಕೊಯಮತ್ತೂರು: ಚಿನ್ನದ ರಾಣಿ ಹಿಮಾದಾಸ್ ಬರೀ ಒಂದು ತಿಂಗಳ ಅಂತರದಲ್ಲಿ 5 ಚಿನ್ನದ ಪದಕ ಗೆದ್ದು ದೇಶ ದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
ಈ ವೇಳೆ ಈಶಾ ಫೌಂಡೇಶನ್ ಮುಖ್ಯಸ್ಥ, ಸದ್ಗುರು ಎಂದು ಕರೆಸಿಕೊಳ್ಳುವ ಜಗ್ಗಿ ವಾಸುದೇವ್ ಹಿಮಾದಾಸ್‌ಗೆ ಅಭಿನಂದಿಸಿ ಮಾಡಿದ ಟ್ವೀಟೊಂದನ್ನು ಕೆಲವರು ತಮ್ಮ ಕಳಪೆ ಅಭಿರುಚಿಯಿಂದ, ತಪ್ಪಾಗಿ ಅರ್ಥೈಸಿ ವಿವಾದ ಸೃಷ್ಟಿಸಿದ್ದಾರೆ. ಇಂಗ್ಲಿಷ್‌ನಲ್ಲಿ ಟ್ವೀಟ್ ಮಾಡಿದ್ದ ಜಗ್ಗಿ, ಹಿಮಾ ದಾಸ್, ಎ ಗೋಲ್ಡನ್ ಶವರ್ ಫಾರ್ ಇಂಡಿಯಾ. ಕಂಗ್ರಾಚುಲೇಷನ್ಸ್ ಆ್ಯಂಡ್ ಬ್ಲೆಸ್ಸಿಂಗ್ಸ್ (ಹಿಮಾದಾಸ್, ಭಾರತದ ಪಾಲಿನ ಕನಕ ವರ್ಷ, ಶುಭಾಶಯಗಳು, ಶುಭಾಶೀರ್ವಾ ದಗಳು) ಎಂದು ಹೇಳಿದ್ದರು.
ಇಲ್ಲಿ ಗೋಲ್ಡನ್ ಶವರ್ (ಲೈಂಗಿಕ ಸುಖದ ಹಂತದಲ್ಲಿ ಸಹಭಾಗಿಯ ಮೇಲೆ ಮೂತ್ರ ವಿಸರ್ಜನೆ ಮಾಡುವುದು) ಪದಕ್ಕೆ ಕೆಲವರು ಕೆಟ್ಟ ಅರ್ಥ ನೀಡಿದ್ದಾರೆ. ಈ ಅರ್ಥವನ್ನು ಜಗ್ಗಿ ವಾಸುದೇವ್ ಗಮನಿ ಸಬೇಕಿತ್ತು ವಿವಾದವೆಬ್ಬಿಸಿದವರ ಆಶಯ. ಒಳ್ಳೆಯ ಪದವೊಂದಕ್ಕೆ ಕೆಟ್ಟ ಅರ್ಥ ನೀಡಿ ಹಾಳು ಮಾಡಿ, ನಂತರ ಹೀಗೆ ವಿವಾದವೆಬ್ಬಿಸಿದವರ ಕುರಿತು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಳ್ಳೆಯ ಪದವನ್ನು ಒಳ್ಳೆಯ ಅರ್ಥದಲ್ಲೇ ಬಳಸುವ ಯತ್ನವನ್ನೂ ಹಾಳು ಮಾಡುತ್ತಿರುವವರ ಬಗ್ಗೆಯೂ ಜನ ಸಿಟ್ಟಾಗಿದ್ದಾರೆ. ಕೆಲವರು ಜಗ್ಗಿ ಯಾವ ಅರ್ಥದಲ್ಲಿ ಈ ಪದವನ್ನು ಬಳಸಿದ್ದಾರೆ ಎಂಬ ಬಗ್ಗೆ ವಿವರಣೆ ನೀಡಿ ಸಮರ್ಥಿಸಿಕೊಂಡಿದ್ದಾರೆ. ಶಂಕರಾ ಚಾರ್ಯರ ತಪಸ್ಸಿಗೆ ಮೆಚ್ಚಿ ಲಕ್ಷ್ಮಿ ಚಿನ್ನದ ಮಳೆ ಸುರಿಸುತ್ತಾಳೆ. ಅದನ್ನೇ ಗೋಲ್ಡನ್ ಶವರ್ ಎಂಬರ್ಥದಲ್ಲಿ ಜಗ್ಗಿ ಬಳಸಿದ್ದಕ್ಕೆ ಸಾಕ್ಷಿಯನ್ನೂ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.