ಜೈಪುರ್ ತಂಡಕ್ಕೆ ಅಪರೂಪದ ಜಯ
Team Udayavani, Dec 10, 2018, 9:33 AM IST
ವಿಶಾಖಪಟ್ಟಣ: ಪ್ರೊ ಕಬಡ್ಡಿ ಆರನೇ ಆವೃತ್ತಿ ಅಂತರ್ ವಲಯ “ಚಾಲೆಂಜ್ ವೀಕ್’ನ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ 24-37 ಅಂತರದಿಂದ ಜೈಪುರ ಪಿಂಕ್ ಪ್ಯಾಂಥರ್ ಗೆಲುವು ಗಳಿಸಿತು. ಸತತ ವೈಫಲ್ಯಗಳ ಬಳಿಕ ಜೈಪುರ್ ಈ ಜಯ ಸಾಧಿಸಿ ಸಮಾಧಾನಪಟ್ಟಿತು.
ರವಿವಾರ ವಿಶಾಖಪಟ್ಟಣದ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದೀಪಕ್ ಹೂಡಾ ಜೈಪುರದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ದೀಪಕ್ ಒಟ್ಟು 9 ಅಂಕಗಳನ್ನು ರೈಡಿಂಗ್‌ನಿಂದ ತಂಡಕ್ಕೆ ತಂದುಕೊಟ್ಟರು. ಇವರಿಗೆ ಆನಂದ್ ಪಾಟೀಲ್ (5 ಅಂಕ) ಹಾಗೂ ಅಜಿಂಕ್ಯ ಪವಾರ್ (4 ಅಂಕ) ರೈಡಿಂಗ್ ಮೂಲಕ ಸಾಥ್ ನೀಡಿದರು. ಸುನಿಲ್ ಸಿದ್ಧಗಾವಲಿ ಪ್ರಚಂಡ ಟ್ಯಾಕಲ್ ನಡೆಸಿದರು. ಒಟ್ಟು 6 ಅಂಕ ಕಲೆ ಹಾಕಿ ತಂಡದ ಗೆಲುವನ್ನು ಸಾರಿದರು.
ತಲೈವಾಸ್ ಪರ ತಾರಾ ಆಟಗಾ ರರಾದ ಅಜಯ್ ಕುಮಾರ್ (2 ಅಂಕ), ಜಸ್ವೀರ್ ಸಿಂಗ್ (3 ಅಂಕ) ಹಾಗೂ ಮಂಜಿತ್ ಚಿಲ್ಲರ್ (0 ) ಕಳಪೆ ಆಟ ನಿರ್ವಹಿಸಿದ್ದು ತಂಡಕ್ಕೆ ಕುತ್ತಾಗಿ ಪರಿಣಮಿಸಿತು. ಇದರಿಂದ ತಮಿಳ್ ಪಡೆ ಭಾರೀ ಹಿನ್ನಡೆ ಕಾಣುವಂತಾಯಿತು. ಕರ್ನಾಟಕದ ರೈಡರ್ ಸುಕೇಶ್ ಹೆಗ್ಡೆ (6 ಅಂಕ) ರೈಡಿಂಗ್ ಮೂಲಕ ಸ್ವಲ್ಪ ಮಿಂಚಿದರು. ಒಟ್ಟಾರೆ ಒಂದು ತಂಡವಾಗಿ ಆಡದೆ ತಲೈವಾಸ್ ಸೋಲು ಅನುಭವಿಸಿತು.
ಆತಿಥೇಯರಿಗೆ ಗೆಲುವು
ದಿನದ ದ್ವಿತೀಯ ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟಾನ್ಸ್ 35-31 ಅಂತರದಿಂದ ಹರ್ಯಾಣ ಸ್ಟೀಲರ್ ತಂಡವನ್ನು ಮಣಿಸಿ ತವರಿನಲ್ಲಿ ಸತತ 2ನೇ ಗೆಲುವು ಸಾಧಿಸಿತು.
ಸೋಮವಾರ ಪ್ರೊ ಕಬಡ್ಡಿ ಪಂದ್ಯಗಳಿಗೆ ವಿರಾಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
Vijay Hazare Trophy; ಮಯಾಂಕ್ ಅಗರ್ವಾಲ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
TeamIndia; ಮುಗಿಯಿತಾ ರೋಹಿತ್ ವೃತ್ತಿಜೀವನ? ಮೆಲ್ಬೋರ್ನ್ ಗೆ ಬಂದ ಅಗರ್ಕರ್ ಹೇಳಿದ್ದೇನು?
INDvAUS: ನಿತೀಶ್ ಕುಮಾರ್ ಆಕರ್ಷಕ ಶತಕ; ಫಾಲೋಆನ್ ಅವಮಾನದಿಂದ ಪಾರು
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.