ಕುಸ್ತಿ ನಿರೀಕ್ಷೆಗಳು ಜಾಸ್ತಿ
Team Udayavani, Aug 19, 2018, 10:22 AM IST
ಜಕಾರ್ತಾ: ರವಿವಾರದಿಂದಲೇ ಆರಂಭವಾಗಲಿರುವ ಏಶ್ಯಾಡ್ ಕುಸ್ತಿ ಸ್ಪರ್ಧೆಯಲ್ಲಿ ಭಾರತದ ಮೇಲೆ ವಿಪರೀತ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.
ಪುರುಷರ ಫ್ರೀಸ್ಟೈಲ್ ಕುಸ್ತಿಯ 6 “ಜಟ್ಟಿ’ಗಳಲ್ಲಿ ಐವರು ರವಿವಾರ ಅದೃಷ್ಟ ಪರೀಕ್ಷೆಗೆ ಇಳಿಯಲಿರುವುದು ವಿಶೇಷ. ಕಾಮನ್ವೆಲ್ತ್ ಬಂಗಾರ ವಿಜೇತ ಭಜರಂಗ್ ಪೂನಿಯ (65 ಕೆಜಿ) ಉಜ್ಬೆಕಿಸ್ಥಾನದ ಸಿರೋಜಿದ್ದಿನ್ ಕಸನೋವ್ ವಿರುದ್ಧ ಸೆಣಸುವುದರೊಂದಿಗೆ ಭಾರತದ ಹೋರಾಟ ಮೊದಲ್ಗೊಳ್ಳಲಿದೆ. ಸತತ 3 ಚಿನ್ನದ ಪದಕಗಳ ಸಾಧನೆಯೊಂದಿಗೆ ಭಜರಂಗ್ ಏಶ್ಯಾಡ್ ಅಖಾಡಕ್ಕೆ ಧುಮುಕಲಿದ್ದಾರೆ. ಗೋಲ್ಡ್‌ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್, ಜಾರ್ಜಿಯಾದಲ್ಲಿ ನಡೆದ ಟಿಬಿಸಿಲಿ ಗ್ರ್ಯಾನ್‌ಪ್ರಿ ಹಾಗೂ ಇಸ್ತಾನ್‌ಬುಲ್‌ನಲ್ಲಿ ಜರಗಿದ ಯಾಸರ್ ಡೋಗು ಅಂತಾರಾಷ್ಟ್ರೀಯ ಕೂಟಗಳಲ್ಲಿ ಭಜರಂಗ್ ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದರು.
ಒಲಿಂಪಿಕ್ಸ್‌ನಲ್ಲಿ 2 ವೈಯಕ್ತಿಕ ಪದಕ ಗೆದ್ದ ಭಾರತದ ಏಕೈಕ ಕ್ರೀಡಾಳಾಗಿರುವ ಸುಶೀಲ್ ಕುಮಾರ್, ಟಿಬಿಸಿಲಿ ಗ್ರ್ಯಾನ್‌ಪ್ರಿ ಕೂಟದ ಮೊದಲ ಸುತ್ತಿನಲ್ಲೇ ಸೋತರೂ ತುಂಬು ಆತ್ಮವಿಶ್ವಾಸದಲ್ಲಿದ್ದಾರೆ. ಇದು ಕಳೆದ 4 ವರ್ಷ ಗಳಲ್ಲಿ ಸುಶೀಲ್ ಅನುಭವಿಸಿದ ಏಕೈಕ ಸೋಲಾಗಿದೆ. ಇವರ ಮೊದಲ ಸುತ್ತಿನ ಎದು ರಾಳಿ ಬಹ್ರೈನಿನ ಅದಾಮ್ ಬಟಿರೋವ್.
ಒಲಿಂಪಿಕ್ಸ್‌ನಷ್ಟೇ ಕಠಿನ ಸ್ಪರ್ಧೆ
ಇದು ಒಲಿಂಪಿಕ್ಸ್‌ನಷ್ಟೇ ಕಠಿನ ಸ್ಪರ್ಧೆ ಎಂಬುದಾಗಿ ಭಾರತದ ಕುಸ್ತಿ ಕೋಚ್‌ಗಳು ಅಭಿಪ್ರಾಯಪಟ್ಟಿದ್ದಾರೆ. ಒಲಿಂಪಿಕ್ಸ್ ಕುಸ್ತಿಯಲ್ಲೂ ಏಶ್ಯನ್ನರದೇ ಪ್ರಾಬಲ್ಯ ಇರುವುದರಿಂದ ಇದು ಏಶ್ಯನ್ ಗೇಮ್ಸ್‌ನಲ್ಲೂ ಪುನರಾವರ್ತನೆಗೊಳ್ಳುತ್ತದೆ ಎಂಬುದು ಫ್ರೀಸ್ಟೈಲ್ ನ್ಯಾಶನಲ್ ಕೋಚ್ ಜಗ¾ಂದರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಅಷ್ಟೂ ಜಪಾನೀ ವನಿತಾ ಕುಸ್ತಿಪಟುಗಳು ಏಶ್ಯಾಡ್‌ನಲ್ಲಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.
ಗ್ರೀಕೊ ರೋಮನ್ ವಿಭಾಗದಲ್ಲಿ ಸುಲಭ ಡ್ರಾ ಪಡೆದಿರುವ ಹರ್‌ಪ್ರೀತ್ ಸಿಂಗ್ (87 ಕೆಜಿ) ಪದಕದ ದೊಡ್ಡ ಭರವಸೆಯಾಗಿದ್ದಾರೆ ಎಂಬುದು ಕೋಚ್ ಕುಲದೀಪ್ ಸಿಂಗ್ ಅನಿಸಿಕೆ. 2014ರ ಏಶ್ಯಾಡ್‌ನಲ್ಲಿ ರಜತ ಪದಕ ಗೆದ್ದ ಭಜರಂಗ್ ಪೂನಿಯ ಮೇಲೂ ಕುಲದೀಪ್ ವಿಶ್ವಾಸ ಹೊಂದಿದ್ದಾರೆ. ಜಪಾನ್ ಮತ್ತು ಇರಾನ್ ಬಲಿಷ್ಠ ಸ್ಪರ್ಧಿಗಳನ್ನು ಹೊಂದಿದ್ದರೂ ಇವರು ಇನ್ನೊಂದು ವಿಭಾಗ ದಲ್ಲಿದ್ದಾರೆ. ಕಳೆದ ಏಶ್ಯಾಡ್‌ನಲ್ಲಿ ಭಾರತ 5 ಕುಸ್ತಿ ಪದಕಗಳನ್ನು ಗೆದ್ದಿತ್ತು. ಚಿನ್ನ ಜಯಿಸಿದ್ದ ಏಕೈಕ ಸಾಧಕನೆಂದರೆ ಯೋಗೇಶ್ವರ್ ದತ್. ಪುರುಷರ ಗ್ರೀಕೊ ರೋಮನ್, ವನಿತಾ ಸ್ಪರ್ಧೆಗಳು ಸೋಮವಾರದಿಂದ ಆರಂಭವಾಗಲಿವೆ.
ಪದಕ ಹೆಚ್ಚಳ
ಈ ಏಶ್ಯಾಡ್‌ನಲ್ಲಿ ಭಾರತದ ಕುಸ್ತಿ ಪದಕಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವುದನ್ನು ಕಾಣಬಹುದು.
-ಕೋಚ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
3rd ODI ವನಿತಾ ಏಕದಿನ: ವಿಂಡೀಸ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್‌ಗೆ ಭಾರತ ಸಜ್ಜು
PAK Vs SA: ಸೆಂಚುರಿಯನ್ ಟೆಸ್ಟ್ ಪಾಕಿಸ್ಥಾನ 211ಕ್ಕೆ ಆಲೌಟ್
Test cricket: ಮ್ಯಾಚ್ ರೆಫರಿಯಾಗಿ ನೂರು ಟೆಸ್ಟ್ ಪೂರ್ತಿಗೊಳಿಸಿದ ಆ್ಯಂಡಿ ಪೈಕ್ರಾಫ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.