ಬ್ಯಾಟಿಂಗ್ ನಲ್ಲಿ ಹೊಸ ದಾಖಲೆ ಬರೆದ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್
Team Udayavani, Dec 19, 2021, 4:14 PM IST
ಅಡಿಲೇಡ್: ಇಂಗ್ಲೆಂಡ್ ನ ವೇಗದ ಬೌಲಿಂಗ್ ದಿಗ್ಗಜ ಜೇಮ್ಸ್ ಆ್ಯಂಡರ್ಸನ್ ಅವರು ಬ್ಯಾಟಿಂಗ್ ನಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಸದ್ಯ ಸಕ್ರಿಯ ಬೌಲರ್ ಗಳಲ್ಲಿ ಅತೀ ಹೆಚ್ಚು ಟೆಸ್ಟ್ ವಿಕೆಟ್ ಹೊಂದಿರುವ ವಿಶ್ವದಾಖಲೆ ಹೊಂದಿರುವ ಆ್ಯಂಡರ್ಸನ್, ಬ್ಯಾಟಿಂಗ್ ನಲ್ಲಿ ಅತೀ ಹೆಚ್ಚು ಸಲ ನಾಟೌಟ್ ಆದ ಆಟಗಾರ ಎಂಬ ದಾಖಲೆಯನ್ನೂ ಹೊಂದಿದ್ದಾರೆ.
ಆ್ಯಶಸ್ ಸರಣಿಯ ಅಡಿಲೇಡ್ ಓವಲ್ ನಲ್ಲಿ ನಡೆದ ಪಿಂಕ್-ಬಾಲ್ ಟೆಸ್ಟ್‌ನಲ್ಲಿ ಮೂರನೇ ದಿನದ ಆಟದಲ್ಲಿ, ಆಂಡರ್ಸನ್ ಬ್ಯಾಟ್ ನೊಂದಿಗೆ ಅನನ್ಯ ದಾಖಲೆಯನ್ನು ನಿರ್ಮಿಸಿದರು. ವಾಸ್ತವವಾಗಿ, ಅವರು ಕ್ರೀಡಾ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರರಾದರು.
ಇಂಗ್ಲೆಂಡ್ 236 ರನ್‌ಗಳಿಗೆ ಆಲೌಟ್ ಆಗುತ್ತಿದ್ದಂತೆ ಕ್ರೀಸ್‌ನಲ್ಲಿ ಅಜೇಯರಾಗಿ ಉಳಿದ ಆಂಡರ್ಸನ್ 100 ಬಾರಿ ಟೆಸ್ಟ್ ಇನ್ನಿಂಗ್ಸ್ ನಲ್ಲಿ ನಾಟೌಟ್ ಆಗಿ ಉಳಿದ ಮೊದಲ ಬ್ಯಾಟರ್ ಎನಿಸಿಕೊಂಡರು. ಆಂಡರ್ಸನ್ ನಂತರ, ಕರ್ಟ್ನಿ ವಾಶ್ 61 ಬಾರಿ ಅಜೇಯರಾಗಿ ಉಳಿದಿರುವ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಮುತ್ತಯ್ಯ ಮುರಳೀಧರನ್ 56 ಸಂದರ್ಭಗಳಲ್ಲಿ ಇನ್ನಿಂಗ್ಸ್‌ನಲ್ಲಿ ಔಟಾಗದೆ ಮೂರನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಮಾಜಿ ವೇಗಿ ಬಾಬ್ ವಿಲ್ಸ್ 55 ನಾಟೌಟ್ ಇನ್ನಿಂಗ್ಸ್‌ನೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ:ವಿರಾಟ್ ಕೊಹ್ಲಿಯ ವಿರುದ್ಧ ಆರೋಪ ಮಾಡಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.