ಚೆಸ್ ಒಲಿಂಪಿಯಾಡ್ ಜ್ಯೋತಿ ಹಸ್ತಾಂತರ
Team Udayavani, Jun 21, 2022, 11:15 PM IST
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹ ಅವರು ಮಂಗಳವಾರ ಚೆಸ್ ಒಲಿಂಪಿಯಾಡ್‌ನ ಜ್ಯೋತಿಯನ್ನು ಗ್ರ್ಯಾನ್‌ಮಾಸ್ಟರ್ ಪ್ರವೀಣ್ ತಿಪ್ಸೆ ಅವರಿಗೆ ಹಸ್ತಾಂತರಿಸಿದರು.
ಇದೇ ಮೊದಲ ಬಾರಿಯ ಚೆಸ್ ಒಲಿಂಪಿಯಾಡ್‌ನ ಜ್ಯೋತಿ ರಿಲೇ ಓಟಕ್ಕೆ ಜೂ. 19ರಂದು ದಿಲ್ಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಸುರು ನಿಶಾನೆ ತೋರಿಸಿದ್ದರು. ತಮಿಳುನಾಡಿನ ಮಹಾಬಲಿಪುರಂನಲ್ಲಿ ಅಂತ್ಯಗೊಳ್ಳುವ ಮೊದಲು ಈ ರಿಲೇ 40 ದಿನಗಳ ಅಂತರದಲ್ಲಿ 75 ನಗರಗಳಲ್ಲಿ ಸಂಚರಿ ಸಲಿದೆ ಎಂದು ಚೆಸ್ ಒಲಿಂಪಿಯಾಡ್‌ನ ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ಚೆಸ್ ಒಲಿಂಪಿಯಾಡ್ ಜ್ಯೋತಿಯ ಆತಿಥ್ಯ ವಹಿಸಿರುವುದು ಜಮ್ಮು ಮತ್ತು ಕಾಶ್ಮೀರದ ಪ್ರತಿಯೊಬ್ಬ ಪ್ರಜೆಯ ಹೆಮ್ಮೆಯ ಕ್ಷಣವಾಗಿದೆ ಎಂದು ಮನೋಜ್ ಸಿನ್ಹ ತಿಳಿಸಿದರು. ಕಾಶ್ಮೀರ ದಿಂದ ಕನ್ಯಾಕುಮಾರಿಯವರೆಗೆ ತನ್ನ ಪ್ರಯಾಣದಲ್ಲಿ ಈ ಜ್ಯೋತಿಯು ಉತ್ತಮ ಕ್ರೀಡಾ ಮನೋಭಾವ, ಸಾಂ ಕ ಕೆಲಸ, ಶಾಂತಿ, ಸೌಹಾ ರ್ದತೆ ಮತ್ತು ಸಹೋದರತ್ವದ ಮೌಲ್ಯ ಗಳನ್ನು ಉತ್ತೇಜಿಸಲು ಜನರನ್ನು ಒಟ್ಟುಗೂಡಿ ಸಲಿದೆ ಎಂದವರು ಹೇಳಿದರು.
ಜುಲೈ 2ರಿಂದ ಶ್ರೀನಗರದಲ್ಲಿ ಆರಂಭವಾಗುವ ಕಾಶ್ಮೀರ ಓಪನ್ ಫಿಡೆ ರೇಟಿಂಗ್ ಚೆಸ್ ಕೂಟವನ್ನು ಯಶಸ್ವಿ ಗೊಳಿಸಲು ಚೆಸ್ ಅಸೋಸಿಯೇಶನ್ ಮತ್ತು ಜಮ್ಮು ಆ್ಯಂಡ್ ಕಾಶ್ಮೀರ ಕ್ರೀಡಾ ಕೌನ್ಸಿಲ್ ಎಲ್ಲ ಪ್ರಯತ್ನ ಮಾಡಲಿದೆ ಎಂದವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: ಪೊಲೀಸರಿಂದ 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, ಎರಡು ಕಾರು ವಶಕ್ಕೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.