Japan Open: ಸೆಮಿಫೈನಲ್‌ನಲ್ಲಿ ಎಡವಿದ ಲಕ್ಷ್ಯ ಸೇನ್
Team Udayavani, Jul 29, 2023, 11:23 PM IST
ಟೋಕಿಯೊ: ಲಕ್ಷ್ಯ ಸೇನ್ ಸೋಲಿನೊಂದಿಗೆ “ಜಪಾನ್ ಓಪನ್ ಸೂಪರ್-750 ಬ್ಯಾಡ್ಮಿಂಟನ್’ ಪಂದ್ಯಾವಳಿಯಲ್ಲಿ ಭಾರತದ ಹೋರಾಟ ಕೊನೆಗೊಂಡಿದೆ.
ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ವಿಶ್ವದ ನಂ. 9 ಆಟಗಾರ, ಏಷ್ಯಾಡ್ ಚಾಂಪಿಯನ್ ಜೊನಾಥನ್ ಕ್ರಿಸ್ಟಿ 21-15, 13-21, 21-16 ಅಂತರದಿಂದ ಸೇನ್‌ಗೆ ಸೋಲುಣಿಸಿದರು.
ಇಬ್ಬರೂ 1-1 ಸಮಬಲ ದಾಖಲೆಯೊಂದಿಗೆ ಹೋರಾಟ ಆರಂಭಿಸಿದ್ದರು. 21 ವರ್ಷದ ಸೇನ್ ಮೊದಲ ಗೇಮ್ ಕಳೆದುಕೊಂಡ ಬಳಿಕ ಭರ್ಜರಿ ತಿರುಗೇಟು ನೀಡಿದರು. ಆದರೆ ನಿರ್ಣಾಯಕ ಗೇಮ್‌ನಲ್ಲಿ ಮತ್ತೆ ಇಂಡೋನೇಷ್ಯಾ ಆಟಗಾರನ ಕೈ ಮೇಲಾಯಿತು.
ಸೇನ್ ಅವರ ವೇಗ, ಕ್ರಿಸ್ಟಿ ಅವರ ಮೇಲ್ಮಟ್ಟದ ಶಾಟ್ಸ್ ಈ ಪಂದ್ಯದ ಆಕರ್ಷಣೆ ಆಗಿತ್ತು. 68 ನಿಮಿಷಗಳ ತನಕ ಇವರ ಹೋರಾಟ ಸಾಗಿತು.
ಪಿ.ವಿ. ಸಿಂಧು, ಕೆ. ಶ್ರೀಕಾಂತ್, ಎಚ್.ಎಸ್. ಪ್ರಣಯ್ ಅವರೆಲ್ಲ ಬಹಳ ಬೇಗನೇ ಈ ಕೂಟದಿಂದ ನಿರ್ಗಮಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
ಕೊಹ್ಲಿ-ರೋಹಿತ್ ಬಳಿಕ ಜಡೇಜಾ ಸ್ಥಾನಕ್ಕೂ ಕುತ್ತು: ಕಠಿಣ ನಿರ್ಧಾರ ಕೈಗೊಂಡ ಬಿಸಿಸಿಐ
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
BPL;ಅಂತಿಮ ಓವರಿನಲ್ಲಿ 30 ರನ್ ಸಿಡಿಸಿದ ನುರುಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.