ಒಲಿಂಪಿಕ್ಸ್ ತಾರೆಯರಿಗೆಮನು ಅತ್ರಿ-ಬಿ.ಸುಮಿತ್ ರೆಡ್ಡಿ ಶಾಕ್
Team Udayavani, Sep 13, 2018, 6:20 AM IST
ಟೋಕಿಯೋ: ಜಪಾನ್ ಓಪನ್ ಬ್ಯಾಡ್ಮಿಂಟನ್‌ನಲ್ಲಿ ಭಾರತೀಯ ಆಟಗಾರರ ಪರಾಕ್ರಮ ಮುಂದುವರಿದಿದೆ. ಪುರುಷರ ವಿಭಾಗದ ಡಬಲ್ಸ್ ಪಂದ್ಯದಲ್ಲಿ ಭಾರತದ ಮನು ಅತ್ರಿ – ಬಿ.ಸುಮಿತ್ ರೆಡ್ಡಿ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತರಾದ ಮಲೇಷ್ಯಾದ ಯಶಸ್ವಿ ಜೋಡಿ ಗೋಹ್ ವಿ ಶೆಮ್ – ಥಾನ್ ವೀ ಕಿಯಾಂಗ್ ಅವರನ್ನು 15-21, 23-21, 21-19 ಗೇಮ್‌ಗಳ ಅಂತರದಿಂದ ಸೋಲಿಸಿದರು.
ಇದರೊಂದಿಗೆ ಭಾರತೀಯ ಜೋಡಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆಯಿತು. ಮುಂದಿನ ಪಂದ್ಯದಲ್ಲಿ ಭಾರತೀಯ ಜೋಡಿ ಚೀನಾದ ಹೆ ಜಿಟಿಂಗ್-ಥಾನ್ ಕ್ವಿಂಗ್ ಅವರನ್ನು ಎದುರಿಸಲಿದ್ದಾರೆ.
ಜಿದ್ದಾಜಿದ್ದಿನ ಹಣಾಹಣಿ: ರಾಷ್ಟ್ರೀಯ ಡಬಲ್ಸ್ ಚಾಂಪಿಯನ್‌ಗಳಾದ ಮನು ಅತ್ರಿ-ಬಿ.ಸುಮಿತ್ ರೆಡ್ಡಿ ಸಾಮರ್ಥ್ಯಕ್ಕೆ ತಕ್ಕ ಆಟ ಪ್ರದರ್ಶಿಸಿದರು. ಮೊದಲ ಗೇಮ್‌ನಲ್ಲಿ ಭಾರತೀಯ ಜೋಡಿ 15-21 ಗೇಮ್‌ಗಳ ಅಂತರದಿಂದ ಎದುರಾಳಿಗೆ ಶರಣಾಗಿ 0-1 ಹಿನ್ನಡೆ ಅನುಭವಿಸಿತು. ಎರಡನೇ ಸುತ್ತಿನಲ್ಲಿ ಭಾರತೀಯ ಆಟಗಾರರು ಸಿಡಿದೆದ್ದರು. ಗೋಹ್ ವಿ ಶೆಮ್ – ಥಾನ್ ವೀ ಕಿಯಾಂಗ್‌ಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದರು. ಭಾರತ 2ನೇ ಗೇಮ್‌ನಲ್ಲಿ ವೀರೋಚಿತ 23-21 ಗೇಮ್‌ನಿಂದ ಗೆಲುವು ಸಾಧಿಸಿತು. ಅಲ್ಲಿಗೆ ಇತ್ತಂಡಗಳ ತಲಾ 1-1 ಗೇಮ್ ಸಮವಾಗಿಸಿಕೊಂಡಿದ್ದವು. ಹೀಗಾಗಿ ಮೂರನೇ ಸುತ್ತಿಗೆ ಹೆಚ್ಚಿನ ಮಹತ್ವ ಸಿಕ್ಕಿತು. ಅಲ್ಲಿ ಎರಡೂ ತಂಡಗಳಿಂದ ಪ್ರಬಲ ಹೋರಾಟ ನಡೆಯಿತು. ಅಂತಿಮವಾಗಿ ಭಾರತೀಯರು 21-19ರಿಂದ ಮುನ್ನಡೆದು 2-1ರಿಂದ ಪಂದ್ಯ ವಶ ಪಡಿಸಿಕೊಂಡರು.
2015ರಲ್ಲೂ ಗೆದ್ದಿದ್ದ ಮನು-ಸುಮಿತ್: 2015ರಲ್ಲಿ ಗೋಹ್ ವಿ ಶೆಮ್ – ಥಾನ್ ವೀ ಕಿಯಾಂಗ್ ವಿರುದ್ಧ ಸೈಯದ್ ಮೋದಿ ಗ್ರ್ಯಾನ್ ಫ್ರಿ ಗೋಲ್ಡ್ ಕೂಟದಲ್ಲೂ ಭಾರತೀಯರು ಮುಖಾಮುಖೀಯಾಗಿದ್ದರು. ಆ ಹೋರಾಟದಲ್ಲಿ ಮನು-ಸುಮಿತ್ ಜೋಡಿ ಗೆಲುವು ಸಾಧಿಸಿತು. ಇದೀಗ 3 ವರ್ಷದ ಬಳಿಕ ಭಾರತೀಯರು ಮತ್ತೂಂದು ಗೆಲುವು ಸಾಧಿಸಿರುವುದು ವಿಶೇಷ.
ಮಹಿಳಾ ಡಬಲ್ಸ್:ಅಶ್ವಿನಿ ಜೋಡಿಗೆ ಸೋಲು: ಮಹಿಳಾ ಡಬಲ್ಸ್ ಪಂದ್ಯದಲ್ಲಿ ಅಶ್ವಿನಿ ಪೊನ್ನಪ್ಪ – ಸಿಕ್ಕಿ ರೆಡ್ಡಿ ಒಳಗೊಂಡ ಭಾರತ ತಂಡ 17-21, 13-21 ಅಂಕಗಳ ಅಂತರದಿಂದ ಕೊರಿಯಾದ ಚಾಂಗ್ ಯೆ ನ ಹಾಗೂ ಜುಂಗ್ ಕ್ಯುಂಗ್ ಇವುನ್ ವಿರುದ್ಧ ಸೋಲು ಅನುಭವಿಸಿ ಕೂಟದಿಂದ ಹೊರಬಿದ್ದರು .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.