ಜಪಾನ್ ಓಪನ್ ಬ್ಯಾಡ್ಮಿಂಟನ್ ಪ್ರಣಯ್ ಕ್ವಾರ್ಟರ್ ಫೈನಲಿಗೆ
Team Udayavani, Jul 27, 2023, 11:31 PM IST
ಟೋಕಿಯೊ: ಭಾರತದ ಎಚ್. ಎಸ್. ಪ್ರಣಯ್ ತನ್ನದೇ ದೇಶದ ಕಿದಂಬಿ ಶ್ರೀಕಾಂತ್ ಅವರನ್ನು ಮೂರು ಗೇಮ್ಗಳ ಹೋರಾಟದಲ್ಲಿ ಸೋಲಿಸಿ ಜಪಾನ್ ಓಪನ್ ಬ್ಯಾಡ್ಮಿಂಟನ್ ಕೂಟದ ಕ್ವಾರ್ಟರ್ಫೈನಲ್ ಹಂತಕ್ಕೆ ತಲುಪಿದ್ದಾರೆ. ಈ ಮೊದಲು ಲಕ್ಷ್ಯ ಸೇನ್ ಹಾಗೂ ಡಬಲ್ಸ್ನಲ್ಲಿ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಸುಲಭ ಗೆಲುವಿನೊಂದಿಗೆ ಕ್ವಾರ್ಟರ್ಫೈನಲ್ ಹಂತಕ್ಕೇರಿದ್ದರು.
21ರ ಹರೆಯದ ಲಕ್ಷ್ಯ ಸೇನ್ ಜಪಾನಿನ ಕಂಟ ಸುನೆಯಾಮ ಅವರನ್ನು 21-14, 21-16 ಗೇಮ್ಗಳಿಂದ ಉರುಳಿಸಿ ಅಂತಿಮ ಎಂಟರ ಸುತ್ತಿಗೇರಿದರು. ಕೊರಿಯ ಓಪನ್ನ ಡಬಲ್ಸ್ ವಿಜೇತ ಸಾತ್ವಿಕ್-ಚಿರಾಗ್ ಅವರು ನೆದರ್ಲೆಂಡ್ಸ್ನ ಲಾಸ್ಸೆ ಮೊಲೆØಡೆ ಮತ್ತು ಜೆಪ್ಪೆ ಬೇ ಅವರನ್ನು 21-17, 21-11 ಗೇಮ್ಗಳಿಂದ ಸೋಲಿಸಿ ಕ್ವಾರ್ಟರ್ಫೈನಲ್ ತಲುಪಿದರು.
ಭಾರತೀಯ ಆಟಗಾರರ ನಡುವಣ ಹೋರಾಟದಲ್ಲಿ ಪ್ರಣಯ್ ಅವರು ಶ್ರೀಕಾಂತ್ ಅವರನ್ನು 19-21, 21-9, 21-9 ಗೇಮ್ಗಳಿಂದ ಸೋಲಿಸಿ ಮುನ್ನಡೆದರು. ತೀವ್ರ ಪೈಪೋಟಿನ ಮೊದಲ ಸೆಟ್ನಲ್ಲಿ ಶ್ರೀಕಾಂತ್ ಜಯ ಸಾಧಿಸಿದರೂ ಆಬಳಿಕ ನೀರಸವಾಗಿ ಆಡಿ ಪಂದ್ಯ ಕಳೆದುಕೊಂಡರು.
ವನಿತೆಯರ ಡಬಲ್ಸ್ನಲ್ಲಿ ಭಾರತದ ಗಾಯತ್ರಿ ಗೋಪಿಚಂದ್ ಮತ್ತು ಟ್ರೆಸ್ಸಾ ಜಾಲಿ ಅವರು ನಮಿ ಮಾಟ್ಸುಯಾಮಾ ಮತ್ತು ಚಿರಾರು ಶಿಡಾ ಅವರೆದುರು 21-23, 19-21 ಗೇಮ್ಗಳಿಂದ ಸೋತು ಹೊರಬಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.