ಕ್ಯಾಲಿಸ್, ಲೀಸಾ ಸ್ತಾಲೇಕರ್, ಅಬ್ಟಾಸ್‌ಗೆ: ‘ಐಸಿಸಿ ಹಾಲ್ ಆಫ್ ಫೇಮ್’ ಗೌರವ
Team Udayavani, Aug 24, 2020, 8:03 AM IST
Jaques Kallis, ICC Hall of Fame, Zaheer Abbas,
ದುಬಾೖ: 2020ನೇ ಸಾಲಿನ ಪ್ರತಿಷ್ಠಿತ ಐಸಿಸಿ ಹಾಲ್ ಆಫ್ ಫೇಮ್ ಪ್ರಶಸ್ತಿಗೆ ದಕ್ಷಿಣ ಆಫ್ರಿಕಾದ ಜಾಕ್ ಕ್ಯಾಲಿಸ್, ಪಾಕಿಸ್ಥಾನದ ಜಹೀರ್ ಅಬ್ಟಾಸ್ ಮತ್ತು ಭಾರತ ಮೂಲದ ಆಸ್ಟ್ರೇಲಿಯದ ಕ್ರಿಕೆಟ್ ಆಟಗಾರ್ತಿ ಲೀಸಾ ಸ್ತಾಲೇಕರ್ ಹೆಸರನ್ನು ಸೇರ್ಪಡೆಗೊಳಿಸಲಾಗಿದೆ.
ಅಲನ್ ವಿಲ್ಕಿನ್ಸನ್, ಗಾವಸ್ಕರ್, ಮೆಲ್ ಜೋನ್ಸ್ ಮತ್ತು ಶಾನ್ ಪೋಲಾಕ್ ಅವರನ್ನೊಳಗೊಂಡ ಆಯ್ಕೆ ಸಮಿತಿ ರವಿವಾರ ಈ ಮೂರು ಹೆಸರನ್ನು ಅಂತಿಮಗೊಳಿಸಿತು.
ಆಫ್ರಿಕಾದ ಸವ್ಯಸಾಚಿ
ಜಾಕ್ ಕ್ಯಾಲಿಸ್ ಜಾಗತಿಕ ಕ್ರಿಕೆಟ್ ಕಂಡ ಶ್ರೇಷ್ಠ ಆಲ್‌ರೌಂಡರ್ ಆಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 13,289 ರನ್, ಏಕದಿನದಲ್ಲಿ 11,379 ರನ್ ಸಂಪಾದಿಸಿದ್ದಾರೆ.
ಎರಡೂ ಮಾದರಿಗಳಲ್ಲಿ ಕ್ರಮವಾಗಿ 292 ಹಾಗೂ 273 ವಿಕೆಟ್ ಹಾರಿಸಿದ್ದಾರೆ. ಟೆಸ್ಟ್‌ಗಳಲ್ಲಿ 23 ಸಲ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದು, 45 ಶತಕ ಬಾರಿಸಿದ್ದಾರೆ.
ವಿಶ್ವಕಪ್ ಸಾಧಕಿ
41 ವರ್ಷದ ಲೀಸಾ ಸ್ತಾಲೇಕರ್ ಪುಣೆ ಮೂಲದವರಾಗಿದ್ದು, ಆಸ್ಟ್ರೇಲಿಯದ ಮಾಜಿ ಆಟಗಾರ್ತಿಯಾಗಿದ್ದಾರೆ. 2005 ಮತ್ತು 2013ರ ಏಕದಿನ ವಿಶ್ವಕಪ್ ಹಾಗೂ 2010 ಮತ್ತು 2012ರ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯೆಯೆಂಬುದು ಇವರ ಪಾಲಿನ ಹೆಗ್ಗಳಿಕೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ವಿಕೆಟ್ ಮತ್ತು ಸಾವಿರ ರನ್ ಡಬಲ್ಸ್ ಸಾಧಿಸಿದ ಮೊದಲ ಆಟಗಾರ್ತಿ ಎಂಬುದು ಲೀಸಾ ಪಾಲಿನ ಮತ್ತೊಂದು ಸಾಧನೆ.
ಮಾಜಿ ಪಾಕ್ ನಾಯಕ
1969-1985ರ ಅವಧಿಯಲ್ಲಿ ಪಾಕಿಸ್ಥಾನದ ಟೆಸ್ಟ್ ತಂಡ ಕಂಡ ಶ್ರೇಷ್ಠ ಆಟಗಾರರಲ್ಲಿ ಜಹೀರ್ ಅಬ್ಟಾಸ್ ಅವರಿಗೆ ವಿಶಿಷ್ಟ ಸ್ಥಾನವಿದೆ. 78 ಟೆಸ್ಟ್ ಆಡಿದ್ದ ಅಬ್ಟಾಸ್ 12 ಶತಕಗಳ ನೆರವಿನೊಂದಿಗೆ 5,062 ರನ್ ಒಟ್ಟುಗೂಡಿಸಿದ್ದಾರೆ. 62 ಏಕ ದಿನ ಪಂದ್ಯಗಳಿಂದ 2,572 ರನ್ ಬಾರಿಸಿದ್ದಾರೆ. ಕ್ರಮವಾಗಿ 12 ಮತ್ತು 7 ಶತಕ ಬಾರಿಸಿದ ಜಹೀರ್ ಅಬ್ಟಾಸ್ ಮಾಜಿ ನಾಯಕರೂ ಹೌದು.
ಐಸಿಸಿ ಹಾಲ್ ಆಫ್ ಫೇಮ್ ಪ್ರಶಸ್ತಿಯನ್ನು 2009ರಿಂದ ನೀಡಲು ಆರಂಭಿಸಲಾಗಿತ್ತು. ಸುನೀಲ್ ಗಾವಸ್ಕರ್, ಬಿಷನ್ ಸಿಂಗ್ ಬೇಡಿ, ಕಪಿಲ್‌ದೇವ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡುಲ್ಕರ್ ಈ ಗೌರವಕ್ಕೆ ಪಾತ್ರರಾದ ಭಾರತದ ಕ್ರಿಕೆಟಿಗರಾಗಿದ್ದಾರೆ.
?️ #ICCHallOfFame | Class of 2020 ⭐
?? Jacques Kallis
?? Lisa Sthalekar
?? Zaheer Abbas pic.twitter.com/Wtc9qxkTeL— ICC (@ICC) August 23, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jaiswal: ಚಾಂಪಿಯನ್ಸ್ ಟ್ರೋಫಿಗೆ ಯಶಸ್ವಿ ಜೈಸ್ವಾಲ್; ಇಂಗ್ಲೆಂಡ್ ಸರಣಿಯಲ್ಲೇ ಪದಾರ್ಪಣೆ?
Yuzi Chahal: ಡಿವೋರ್ಸ್ ಸುದ್ದಿಯ ನಡುವೆ ಬೇರೆ ಯುವತಿ ಜತೆ ಕಾಣಿಸಿಕೊಂಡ ಚಾಹಲ್; ಯಾರೀಕೆ?
Team India: ಕೆಎಲ್, ಪಾಂಡ್ಯ, ಗಿಲ್ ಅಲ್ಲ.., ಚಾಂಪಿಯನ್ಸ್ ಟ್ರೋಫಿಗೆ ಈತನೇ ಉಪ ನಾಯಕ
ICC; ಟು-ಟೈರ್ ಟೆಸ್ಟ್ ನಿಯಮಕ್ಕೆ ಸಿದ್ಧತೆ? ಏನಿದು ಸಿಸ್ಟಮ್?
Malaysia Super 1000 Badminton: ಯಶಸ್ವಿ ಆರಂಭಕ್ಕೆ ಮೊದಲ ಮೆಟ್ಟಿಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.