ಮೇರಿ ವಿರುದ್ಧ ನೆಲಕಚ್ಚಿದ ಜರೀನ್
Team Udayavani, Dec 29, 2019, 12:41 AM IST
ಹೊಸದಿಲ್ಲಿ: ಆರು ಬಾರಿಯ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ “ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್ ಅರ್ಹತಾ ಟ್ರಯಲ್ಸ್ ಫೈನಲ್’ನಲ್ಲಿ ನಿಖತ್ ಜರೀನ್ ಅವರನ್ನು ಭರ್ಜರಿ ಯಾಗಿ ಮಣಿಸಿದ್ದಾರೆ. ಇದರೊಂದಿಗೆ ಭಾರತ ತಂಡ ಚೀನದಲ್ಲಿ ನಡೆಯುವ ಒಲಿಂಪಿಕ್ಸ್ ಅರ್ಹತಾ ಕೂಟಕ್ಕೆ ಅರ್ಹತೆ ಪಡೆದಿದೆ.
ಶನಿವಾರ ಇಲ್ಲಿನ ಇಂದಿರಾ ಗಾಂಧಿ ಸ್ಟೇಡಿಯಂನಲ್ಲಿ ನಡೆದ 51 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಮೇರಿ ತಮ್ಮ ಎದುರಾಳಿ ನಿಖತ್ ವಿರುದ್ಧ 9-1 ಅಂತರದ ಅಧಿಕಾರಯುತ ಜಯ ಸಾಧಿಸಿದರು.
ಈ ಕೂಟಕ್ಕೂ ಮೊದಲು ಒಲಿಂಪಿಕ್ಸ್ ಅರ್ಹತಾ ಕೂಟದ 51 ಕೆಜಿ ವಿಭಾಗದಲ್ಲಿ ಮೇರಿ ಕೋಮ್ ಅವರನ್ನು ಭಾರತೀಯ ಬಾಕ್ಸಿಂಗ್ ಸಂಸ್ಥೆ ನೇರ ಆಯ್ಕೆ ಮಾಡಿದ್ದಕ್ಕೆ ನಿಖತ್ ಜರೀನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಮುಂದುವರಿದ ಕಿತ್ತಾಟ
ಆದರೆ ಫೈನಲ್ ಪಂದ್ಯ ಮುಗಿ ದರೂ ಮೇರಿ-ಜರೀನ್ ನಡುವೆ ಕಿತ್ತಾಟವೇನೂ ಕೊನೆಗೊಂಡಿಲ್ಲ. “ಫೈನಲ್ ಪಂದ್ಯದಲ್ಲಿ ನನಗೆ ತುಂಬಾ ನೋವಾಗಿದೆ. ಮೇರಿ ಬಾಕ್ಸಿಂಗ್ ರಿಂಗ್‌ನಲ್ಲಿ ಕೆಟ್ಟ ಪದಗಳಿಂದ ನನ್ನನ್ನು ಹೀಯಾಳಿಸಿದ್ದಾರೆ. ಇದು ಓರ್ವ ಪ್ರತಿಷ್ಠಿತ ಬಾಕ್ಸರ್‌ಗೆ ಶೋಭೆ ತರುವುದಿಲ್ಲ’ ಎಂದು ನಿಖತ್ ಜರೀನ್ ಹೇಳಿದ್ದಾರೆ.
“ಫಲಿತಾಂಶ ಪ್ರಕಟಗೊಂಡ ಬಳಿಕ ನಾನು ಕೈ ಕುಲುಕಲು ಬಂದರೂ ಮೇರಿ ಕೋಮ್ ಇದಕ್ಕೆ ಸ್ಪಂದಿಸಲಿಲ್ಲ. ರಿಂಗ್ ಒಳಗೂ ಅವರು ಅಸಭ್ಯ ಪದಗಳನ್ನು ಬಳಸಿದರು. ಅವರ ಈ ವರ್ತನೆಯಿಂದ ನನಗೆ ನೋವಾಗಿದೆ’ ಎಂದರು.
“ಈ ಕುರಿತು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಯಾವುದೇ
ಅಪವಾದವನ್ನು ಹೊರಲು ನಾನು ಸಿದ್ಧಳಿಲ್ಲ. ರಿಂಗ್‌ನಲ್ಲಿ ಏನು ಸಂಭವಿ ಸಿದೆ ಎಂಬುದನ್ನು ಎಲ್ಲರೂ ನೋಡಿ ದ್ದಾರೆ. ಇದುವರೆಗಿನ ನನ್ನ ಬಾಕ್ಸಿಂಗ್ ಪಯಣದಲ್ಲಿ ಒಂದೂ ಕಪ್ಪು ಚುಕ್ಕಿ ಅಂಟಿಕೊಂಡಿಲ್ಲ. ಹೀಗೆಯೇ ಮುಂದುವರಿಯುವುದು ನನ್ನ ಗುರಿ’ ಎಂಬುದು ಮೇರಿ ಹೇಳಿಕೆ.
ಸಾಕ್ಷಿ, ಕೌರ್, ಲವಿÉನಾ ಜಯ
57 ಕೆಜಿ ವಿಭಾಗದಲ್ಲಿ ಸೋನಿಯಾ ಲಾಥರ್ ಅವರನ್ನು ಸಾಕ್ಷಿ ಚೌಧರಿ ಪರಾಭವಗೊಳಿಸಿದರು. 60 ಕೆಜಿ ಸ್ಪರ್ಧೆಯಲ್ಲಿ ಎಲ್. ಸರಿತಾದೇವಿ ಅವರಿಗೆ ಸಿಮ್ರನ್‌ಜಿತ್ ಕೌರ್ ಆಘಾತವಿಕ್ಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA CASE: ಸಿಎಂ, ಪತ್ನಿಗೆ ಇ.ಡಿ. ನೋಟಿಸ್?
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
Congress Gurantee: ಗೃಹಜ್ಯೋತಿ: 3 ತಿಂಗಳಲ್ಲಿ 85 ಸಾವಿರ ಗ್ರಾಹಕರಿಂದ “ರಿ-ಲಿಂಕ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.