Mumbai Indians ನಾಯಕ ಹಾರ್ದಿಕ್ ಬಗ್ಗೆ ಕೊನೆಗೂ ಮೌನ ಮುರಿದ ಜಸ್ಪ್ರೀತ್ ಬುಮ್ರಾ
Team Udayavani, Aug 18, 2024, 3:54 PM IST
ಮುಂಬೈ: 2024ರ ಐಪಿಎಲ್ ಸೀಸನ್ ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡದ ನಾಯಕನಾಗಿ ನೇಮಕವಾದ ಹಾರ್ದಿಕ್ ಪಾಂಡ್ಯ (Hardik Pandya) ಕಷ್ಟದ ದಿನಗಳನ್ನು ಕಂಡರು. ಐದು ಬಾರಿಯ ಚಾಂಪಿಯನ್ ನಾಯಕ ರೋಹಿತ್ ಶರ್ಮಾ (Rohit Sharma) ಅವರನ್ನು ಪಟ್ಟದಿಂದ ಕೆಳಕ್ಕಿಳಿಸಿ ಹಾರ್ದಿಕ್ ಗೆ ನಾಯಕತ್ವ ನೀಡಿದ್ದು ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾದ ಈ ವಿಚಾರ ಬಳಿಕ ಮೈದಾನದಲ್ಲೂ ಪ್ರತಿಧ್ವನಿಸಿತು. ವಾಂಖೆಡೆ ಮೈದಾನದಲ್ಲೇ ಹಾರ್ದಿಕ್ ವಿರುದ್ದ ಜನರು ಕೂಗಿದರು. ಇದು ತಂಡದ ಪ್ರದರ್ಶನದ ಮೇಲೂ ಪರಿಣಾಮ ಬೀರಿತ್ತು. ಹತ್ತು ತಂಡಗಳ ಕೂಟದಲ್ಲಿ ಮುಂಬೈ ಕೊನೆಯದಾಗಿ ಕೂಟ ಮುಗಿಸಿತ್ತು.
ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬೌಲರ್ ಜಸ್ಪ್ರಿತ್ ಬುಮ್ರಾ (Jasprit Bumrah) ಅವರು ಇದೀಗ ಈ ಘಟನೆಗಳ ಬಗ್ಗೆ ಮಾತನಾಡಿದ್ದಾರೆ.
“ನಾವು ಇಂತಹ ಘಟನೆಗಳನ್ನು ಬೆಂಬಲಿಸುವುದಿಲ್ಲ. (ಅಭಿಮಾನಿಗಳ ಕೂಗು) ಅದನ್ನು ನಾವು ಯಾರು ಬಯಸಿಲ್ಲ. ನಾವು ಹಾರ್ದಿಕ್ ಜತೆಗಿದ್ದೆವು. ಅವನಿಗೆ ಅಗತ್ಯವಿದ್ದಾಗ ಅವನ ಜತೆ ಮಾತನಾಡುತ್ತಿದ್ದೆವು. ಕೆಲವು ವಿಷಯಗಳು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಇದೀಗ ಅದೆಲ್ಲಾ ಬದಲಾಗಿದೆ. ಟಿ20 ವಿಶ್ವಕಪ್ ಬಳಿಕ ಎಲ್ಲಾ ಬದಲಾಗಿದೆ. ಇದು ಪಯಣದ ಒಂದು ಭಾಗ. ನಾವು ಎಷ್ಟು ಬೆಂಬಲ ನೀಡಲು ಸಾಧ್ಯವೋ ಅಷ್ಟು ನೀಡಿದ್ದೇವೆʼ ಎಂದು ಬುಮ್ರಾ ಹೇಳಿದರು.
“ನಾವು ಭಾವನೆಯಿಂದ ನಡೆಸಲ್ಪಡುವ ದೇಶದಲ್ಲಿ ವಾಸಿಸುತ್ತಿದ್ದೇವೆ. ಅಭಿಮಾನಿಗಳು ಭಾವುಕರಾಗುತ್ತಾರೆ. ಆಟಗಾರರು ಸಹ ಭಾವುಕರಾಗುತ್ತಾರೆ. ಕೆಲವೊಮ್ಮೆ ನಿಮ್ಮ ಸ್ವಂತ ಅಭಿಮಾನಿಗಳು ನಿಮ್ಮ ಬಗ್ಗೆ ಚೆನ್ನಾಗಿ ಮಾತನಾಡುವುದಿಲ್ಲ. ಇದು ಹೀಗೆಯೇ ಇರುವುದು. ನೀವು ಅದನ್ನು ತಡೆದುಕೊಳ್ಳಬೇಕು. ಏಕೆಂದರೆ ನೀವು ಹೊರಗೆ ಹೋಗಿ ಜನರನ್ನು ತಡೆಯಲು ಸಾಧ್ಯವಿಲ್ಲ” ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.