ಬುಮ್ರಾ ವಿಶ್ವಕಪ್ನಿಂದ ಇನ್ನೂ ಹೊರಬಿದ್ದಿಲ್ಲ: ಗಂಗೂಲಿ
Team Udayavani, Oct 1, 2022, 11:30 PM IST
ಹೊಸದಿಲ್ಲಿ: ಬೆನ್ನುಮೂಳೆಯ ನೋವಿನಿಂದ ಜಸ್ಪ್ರೀತ್ ಬುಮ್ರಾ ಇನ್ನು 6 ತಿಂಗಳ ಕಾಲ ಕ್ರಿಕೆಟ್ನಿಂದ ಹೊರಗುಳಿಯಲಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಸದ್ಯ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆಯೇ ಹೊರತು ಟಿ20 ವಿಶ್ವಕಪ್ನಿಂದಲ್ಲ!
ಇಂಥದೊಂದು ಆಶಾವಾದ ಹುಟ್ಟಿಸುವ ಮಾಹಿತಿಯೊಂದನ್ನು ನೀಡಿದವರುಚಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ. ಅವರ ಪ್ರಕಾರ ಬುಮ್ರಾ ಇನ್ನೂ ಟಿ20 ವಿಶ್ವಕಪ್ನಿಂದ ಹೊರಬಿದ್ದಿಲ್ಲ. ಇನ್ನು ಮೂರು ದಿನಗಳ ಬಳಿಕ ಬುಮ್ರಾ ಪರಿಸ್ಥಿತಿಯನ್ನು ಪರೀಕ್ಷಿಸಿ, ಅಧಿಕೃತವಾಗಿ ಖಚಿತಪಡಿಸಲಾಗುತ್ತದೆ ಎಂದಿದ್ದಾರೆ.
ಸದ್ಯ ಬುಮ್ರಾ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಪರಿಸ್ಥಿತಿ ಹೇಗಿದೆ, ವಿಶ್ವಕಪ್ ಆಡಬಹುದೇ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆ.
ಬುಮ್ರಾ ಭಾರತದ ವೇಗದ ಬೌಲಿಂಗ್ ವಿಭಾಗದ ಅತ್ಯಂತ ಪ್ರಮುಖ ಸದಸ್ಯ. ಗಾಯದಿಂದ ದೀರ್ಘಕಾಲ ಹೊರಬಿದ್ದಿದ್ದ ಅವರು, ಆಸ್ಟ್ರೇಲಿಯ ವಿರುದ್ಧದ ಟಿ20 ಸರಣಿ ಮೂಲಕ ಮರಳಿದ್ದರು. ಅಷ್ಟೇ ಬೇಗ ಮತ್ತೆ ಗಾಯಾಳಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.