ತನ್ನ ವಿಭಿನ್ನ ಬೌಲಿಂಗ್ ಶೈಲಿಯ ರಹಸ್ಯ ಬಿಚ್ಚಿಟ್ಟ ಜಸ್ಪ್ರೀತ್ ಬುಮ್ರಾ
Team Udayavani, Jun 1, 2020, 10:45 AM IST
ಮುಂಬೈ: ಟೀ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಸದ್ಯ ವಿಶ್ವದ ಶ್ರೇಷ್ಠ ಬೌಲರ್ ಗಳಲ್ಲಿ ಓರ್ವ. ಮೂರು ಮಾದರಿ ಕ್ರಿಕೆಟ್ ನಲ್ಲಿ ಮಿಂಚುತ್ತಿರುವ ಬಲಗೈ ಬೌಲರ್ ತನ್ನ ವಿಭಿನ್ನ ಆಕ್ಷನ್ ನಿಂದ ವಿಶ್ವ ಕ್ರಿಕೆಟ್ ನ ಗಮನ ಸೆಳೆದಿದ್ದರು. ಸದ್ಯ ಬುಮ್ರಾ ತನ್ನ ಬೌಲಿಂಗ್ ಶೈಲಿಯ ಹಿಂದಿನ ರಹಸ್ಯ ಬಿಚ್ಚಿಟ್ಟಿದ್ದಾರೆ.
ತನ್ನ ಕಡಿಮೆ ಅಂತರದ ರನ್ ಅಪ್ ಮತ್ತು ವಿಭಿನ್ನ ಆಕ್ಷನ್ ನ ಬೌಲಿಂಗ್ ಬಗ್ಗೆ ಮಾತನಾಡಿದರುವ ಜಸ್ಪ್ರೀತ್, ಇದು ಯಾರೂ ಕಲಿಸಿದ್ದಲ್ಲ. ಸ್ವತಃ ನಾನಾಗಿಯೇ ಕಲಿತಿರುವುದು ಎಂದಿದ್ದಾರೆ.
ಬಾಲ್ಯದಲ್ಲಿ ನನಗೆ ಹೆಚ್ಚು ಕೋಚಿಂಗ್ ಸಿಕ್ಕಿರಲಿಲ್ಲ. ಯಾವುದೇ ವೃತ್ತಿಪರ ಕೋಚಿಂಗ್ ಅಥವಾ ಕ್ಯಾಂಪ್ ಗಳಿಗೆ ನಾನು ಹೋಗಿರಲಿಲ್ಲ. ಟಿವಿ, ವಿಡಿಯೋಗಳನ್ನು ನೋಡಿ ನಾನು ಕಲಿತಿರುವುದು. ನನ್ನ ಸ್ವತಂ ಪ್ರಯತ್ನದಿಂದ ಇಷ್ಟೆಲ್ಲಾ ಸಾಧ್ಯವಾಗಿದೆ ಎಂದು ಬುಮ್ರಾ ಹೇಳಿದ್ದಾರೆ.
ಬುಮ್ರಾ ಅವರ ಸಣ್ಣ ರನ್ ಅಪ್ ಮತ್ತು ಬೌಲಿಂಗ್ ಶೈಲಿಯ ಬಗ್ಗೆ ಹಲವು ಮಾಜಿ ಆಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಬುಮ್ರಾ ಎಸೆತಕ್ಕೂ ಮೊದಲು ಸಣ್ಣ ರನ್ ಅಪ್ ಮಾಡಿದರೂ ಅತೀ ವೇಗದಲ್ಲಿ ಬೌಲ್ ಮಾಡುತ್ತಾರೆ. ಅವರ ದೇಹದಿಂದಲೇ ವೇಗ ಸಿಗುತ್ತದೆ. ಇದರಿಂದ ಆತನ ದೇಹಕ್ಕೆ ಹೆಚ್ಚು ಒತ್ತಡ ಬೀಳುತ್ತದೆ ಎಂದು ಮೈಕಲ್ ಹೋಲ್ಡಿಂಗ್, ಇಯಾನ್ ಬಿಷಪ್, ಶಾನ್ ಪೊಲಾಕ್ ಮುಂತಾದವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
Bengaluru: ಎಸ್ಎಸ್ಎಲ್ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.