ಬುಮ್ರಾ ವಿಶ್ವದಾಖಲೆ; ಬ್ರಾಡ್ ಒಂದೇ ಓವರ್ ನಲ್ಲಿ 35 ರನ್ ಚಚ್ಚಿದ ಬೂಮ್ ಬೂಮ್ ಬುಮ್ರಾ
Team Udayavani, Jul 2, 2022, 4:11 PM IST
ಬರ್ಮಿಂಗ್ ಹ್ಯಾಂ: ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ರಿಷಭ್ ಪಂತ್ ಸ್ಫೋಟಕ ಬ್ಯಾಟಿಂಗ್ ಕಂಡು ಸುಸ್ತಾಗಿದ್ದ ಇಂಗ್ಲೆಂಡ್ ಆಟಗಾರರು ಎರಡನೇ ದಿನದಾಟದಲ್ಲಿ ಭಾರತೀಯ ನಾಯಕ ಜಸ್ಪ್ರೀತ್ ಬುಮ್ರಾ ಅವರ ಬ್ಯಾಟಂಗ್ ಕಂಡು ಬೆರಗಾದರು. ಬುಮ್ರಾ ಪರಾಕ್ರಮದಿಂದ ಇಂಗ್ಲೆಂಡ್ ನ ಹಿರಿಯ ಬೌಲರ್ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್ ನಲ್ಲಿ ಭರ್ಜರಿ 35 ರನ್ ಹರಿಬಂತು.
84 ನೇ ಓವರ್ ಎಸೆದ ಬ್ರಾಡ್ ಟೆಸ್ಟ್ ಕ್ರಿಕೆಟ್ ಇತಿಹಾಸ ಅತ್ಯಂತ ದುಬಾರಿ ಓವರ್ ಎಸೆದರು. (ಟಿ20 ಕ್ರಿಕೆಟ್ ನಲ್ಲೂ ಈ ಅನಗತ್ಯ ದಾಖಲೆ ಬ್ರಾಡ್ ಹೆಸರಿನಲ್ಲೇ ಇದೆ). ವೈಡ್ ಮತ್ತು ನೋ ಬಾಲ್ ಕಾರಣದಿಂದ 8 ಎಸೆತ ಹಾಕಿದ ಬ್ರಾಡ್ ಬಿಟ್ಟುಕೊಟ್ಟಿದ್ದು ಬರೋಬ್ಬರಿ 35 ರನ್.
4, 5 ವೈಡ್, ನೋ ಬಾಲ್ 6, 4, 4,4, 6, 1 ಹೀಗೆ ಸಾಗಿತ್ತು ಬ್ರಾಡ್ ಓವರ್. ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಬಾರಿ ನಾಯಕನಾದ ಬುಮ್ರಾ 16 ಎಸತೆಗಳಲ್ಲಿ ಅಜೇಯ 31 ರನ್ ಗಳಿಸಿದರು.
ಟೆಸ್ಟ್ ಕ್ರಿಕೆಟಿನ ದುಬಾರಿ ಓವರ್ ಎಸೆದ ದಾಖಲೆ ಇದುವರೆಗೆ ದಕ್ಷಿಣ ಆಫ್ರಿಕಾದ ಪೀಟರ್ಸನ್ ಹೆಸರಲ್ಲಿತ್ತು. 2003ರಲ್ಲಿ ಬ್ರಯಾನ್ ಲಾರಾ ಒಂದೇ ಓವರ್ ನಲ್ಲಿ 28 ರನ್ ಬಾರಿಸಿದ್ದರು.
ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 416 ರನ್ ಗೆ ಆಲೌಟಾಗಿದೆ.
BOOM BOOM BUMRAH IS ON FIRE WITH THE BAT ??
3️⃣5️⃣ runs came from that Broad over ?? The most expensive over in the history of Test cricket ?
Tune in to Sony Six (ENG), Sony Ten 3 (HIN) & Sony Ten 4 (TAM/TEL) – https://t.co/tsfQJW6cGi#ENGvINDLIVEonSonySportsNetwork #ENGvIND pic.twitter.com/Hm1M2O8wM1
— Sony Sports Network (@SonySportsNetwk) July 2, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
PCB; ಚಾಂಪಿಯನ್ಸ್ ಟ್ರೋಫಿಗೆ ಅಧಿಕಾರಿಯ ನೇಮಕ
MUST WATCH
ಹೊಸ ಸೇರ್ಪಡೆ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.