BCCI: ಇಶಾನ್, ಅಯ್ಯರ್ ಗುತ್ತಿಗೆ ರದ್ದು ಮಾಡುವುದು ನನ್ನ ನಿರ್ಧಾರವಾಗಿರಲಿಲ್ಲ ಎಂದ ಜಯ್ ಶಾ
Team Udayavani, May 10, 2024, 5:31 PM IST
ಮುಂಬೈ: ಬಿಸಿಸಿಐ ಎಚ್ಚರಿಕೆಯ ಹೊರತಾಗಿಯೂ ರಣಜಿ ಪಂದ್ಯಗಳನ್ನು ತಪ್ಪಿಸಿಕೊಂಡು ಬಳಿಕ ಕೇಂದ್ರೀಯ ಗುತ್ತಿಗೆ ಆಟಗಾರರ ಪಟ್ಟಿಯಿಂದ ಹೊರಬಿದ್ದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಹತ್ವದ ಮಾಹಿತಿ ನೀಡಿದ್ದಾರೆ.
ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಪಟ್ಟಿಯಿಂದ ಹೊರಗಿಡುವುದು ಆಯ್ಕೆಗಾರರ ಅಧ್ಯಕ್ಷ ಅಜಿತ್ ಅಗರ್ಕರ್ ಅವರು ಮಾತ್ರ ತೆಗೆದುಕೊಂಡ ನಿರ್ಧಾರ ಎಂದು ಜಯ್ ಶಾ ಬಹಿರಂಗಪಡಿಸಿದ್ದಾರೆ. ಅಲ್ಲದೆ “ಯಾರೂ ಅನಿವಾರ್ಯವಲ್ಲ” ಎಂದೂ ಪ್ರತಿಪಾದಿಸಿದ್ದಾರೆ.
ಬಿಸಿಸಿಐನ ನಿರ್ದೇಶನದ ಹೊರತಾಗಿಯೂ ದೇಶೀಯ ಪಂದ್ಯಗಳಿಗೆ ಹಾಜರಾಗಲು ವಿಫಲರಾದ ನಂತರ ಕಿಶನ್ ಮತ್ತು ಅಯ್ಯರ್ ಅವರನ್ನು ಹೊರಗಿಡಲಾಗಿದೆ. ಕಳೆದ ವರ್ಷ ಏಕದಿನ ವಿಶ್ವಕಪ್ ಮುಗಿದ ನಂತರ ಕಿಶನ್ ದೀರ್ಘ ವಿರಾಮಕ್ಕೆ ಹೋದರು ಮತ್ತು ಐಪಿಎಲ್ ವರೆಗೆ ಅಲಭ್ಯರಾಗಿದ್ದರು. ಬೆನ್ನು ನೋವಿನ ಕಾರಣದಿಂದ ಟೀಂ ಇಂಡಿಯಾ ಆಟ ತಪ್ಪಿಸಿಕೊಂಡಿದ್ದ ಅಯ್ಯರ್ ಅಂತಿಮವಾಗಿ ಮುಂಬೈಗಾಗಿ ರಣಜಿ ಟ್ರೋಫಿಯಲ್ಲಿ ಸೆಮಿಫೈನಲ್ ಮತ್ತು ಫೈನಲ್ ಸೇರಿದಂತೆ ಕೆಲವು ಪಂದ್ಯಗಳಲ್ಲಿ ಕಾಣಿಸಿಕೊಂಡರು.
ಗುರುವಾರ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, “ನೀವು ಸಂವಿಧಾನವನ್ನು ಪರಿಶೀಲಿಸಬಹುದು. ನಾನು ಆಯ್ಕೆ ಸಭೆಯ ಸಂಚಾಲಕ. ಆ ನಿರ್ಧಾರವು ಅಜಿತ್ ಅಗರ್ಕರ್ ಅವರದ್ದಾಗಿದೆ, ಈ ಇಬ್ಬರು ಆಟಗಾರರು (ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್) ದೇಶೀಯ ಕ್ರಿಕೆಟ್ ಆಡದಿದ್ದರೂ, ಅವರನ್ನು ಕೇಂದ್ರ ಒಪ್ಪಂದಗಳ ಪಟ್ಟಿಯಿಂದ ಕೈಬಿಡುವ ನಿರ್ಧಾರ ಅವರದ್ದಾಗಿತ್ತು” ಎಂದರು.
“ನನ್ನ ಪಾತ್ರವನ್ನು ಕಾರ್ಯಗತಗೊಳಿಸುವುದು. ನಾವು ಸಂಜು ಸ್ಯಾಮ್ಸನ್ ನಂತಹ ಹೊಸ ಆಟಗಾರರನ್ನು ಗುತ್ತಿಗೆಗೆ ಸೇರಿಸಿದ್ದೇವೆ. ಯಾರೂ ಅನಿವಾರ್ಯವಲ್ಲ” ಎಂದು ಶಾ ಹೇಳಿದರು.
ಭಾರತೀಯ ಆಟಗಾರರು ದೇಶೀಯ ಕ್ರಿಕೆಟ್‌ಗೆ ಆದ್ಯತೆ ನೀಡಬೇಕು ಎಂಬ ಮಂಡಳಿಯ ನಿಲುವನ್ನು ಶಾ ಪುನರುಚ್ಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
KKR: ಕೆಕೆಆರ್‌ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?
MUST WATCH
ಹೊಸ ಸೇರ್ಪಡೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.