jemima ಜಬರ್ದಸ್ತ್ ಶೋ; ಬಾಂಗ್ಲಾದೇಶವನ್ನು ಬಗ್ಗುಬಡಿದ ಭಾರತ
Team Udayavani, Jul 20, 2023, 6:07 AM IST
ಮಿರ್ಪುರ್: ಜೆಮಿಮಾ ರೋಡ್ರಿಗಸ್ ಅವರ ಜಬರ್ದಸ್ತ್ ಪ್ರದರ್ಶನದ ನೆರವಿನಿಂದ ಬುಧವಾರದ ದ್ವಿತೀಯ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 108 ರನ್ನುಗಳಿಂದ ಬಗ್ಗುಬಡಿದ ಭಾರತ ಸರಣಿಯನ್ನು ಸಮಬಲಕ್ಕೆ ತಂದು ನಿಲ್ಲಿಸುವಲ್ಲಿ ಯಶಸ್ವಿಯಾಗಿದೆ.
ಬ್ಯಾಟಿಂಗ್ ಕ್ಲಿಕ್ ಆದ ರಷ್ಟೇ ಮೇಲುಗೈ ಸಾಧ್ಯ ಎಂಬುದನ್ನು ಅರಿತು ಆಡಿದ ಹರ್ಮನ್‌ಪ್ರೀತ್ ಕೌರ್ ಪಡೆ 8 ವಿಕೆಟಿಗೆ 228 ರನ್ ಪೇರಿಸುವಲ್ಲಿ ಯಶಸ್ವಿ ಯಾಯಿತು. ಟರ್ನಿಂಗ್ ಟ್ರ್ಯಾಕ್‌ನಲ್ಲಿ ಇದು ದೊಡ್ಡ ಮೊತ್ತವೇ ಆಗಿತ್ತು. ಜವಾಬಿತ್ತ ಬಾಂಗ್ಲಾ 35.1 ಓವರ್‌ಗಳಲ್ಲಿ 120ಕ್ಕೆ ಆಲೌಟ್ ಆಯಿತು.
ಜೆಮಿಮಾ ರೋಡ್ರಿಗಸ್ ಅವರ ಅಮೋಘ ಆಲ್‌ರೌಂಡ್ ಶೋ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. 5ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಬಂದ ಜೆಮಿಮಾ 78 ಎಸೆತಗಳಿಂದ 86 ರನ್ (9 ಬೌಂಡರಿ) ಸಿಡಿಸಿದರು. ಇದು ಅವರ ಜೀವನಶ್ರೇಷ್ಠ ಗಳಿಕೆ ಆಗಿದೆ. ಬಳಿಕ ಬೌಲಿಂಗ್‌ನಲ್ಲೂ ಮಿಂಚಿ ಕೇವಲ 3.1 ಓವರ್‌ಗಳಲ್ಲಿ 3 ರನ್ನಿಗೆ 4 ವಿಕೆಟ್ ಉಡಾಯಿಸಿದರು!
ಬ್ಯಾಟಿಂಗ್ ಸರದಿಯಲ್ಲಿ ಮಿಂಚಿದ ಭಾರತದ ಮತ್ತೋರ್ವ ಆಟಗಾರ್ತಿ ಯೆಂದರೆ ಹರ್ಮನ್‌ಪ್ರೀತ್ ಕೌರ್. ನಾಯಕಿಯ ಬ್ಯಾಟ್‌ನಿಂದ 52 ರನ್ ಹರಿದು ಬಂತು (88 ಎಸೆತ, 3 ಬೌಂಡರಿ). ಓಪನರ್ ಸ್ಮತಿ ಮಂಧನಾ 36, ಹಲೀìನ್ ದೇವಲ್ 25 ರನ್ ಮಾಡಿದರು. ಆದರೆ ಮತ್ತೋರ್ವ ಓಪನರ್ ಪ್ರಿಯಾ ಪೂನಿಯ ಪುನಃ ವೈಫಲ್ಯ ಕಂಡರು (7 ರನ್).
ಬಾಂಗ್ಲಾ ಚೇಸಿಂಗ್ ವೈಫಲ್ಯ
ಚೇಸಿಂಗ್ ವೇಳೆ ಬಾಂಗ್ಲಾ ಬ್ಯಾಟರ್ ಕ್ರೀಸ್ ಆಕ್ರ ಮಿಸಿಕೊಳ್ಳುವಲ್ಲಿ ವಿಫಲರಾದರು. ಫರ್ಗಾನಾ ಹಕ್ (ಸರ್ವಾಧಿಕ 47) ಮತ್ತು ರೀತು ಮೋನಿ (27) 4ನೇ ವಿಕೆಟಿಗೆ 68 ರನ್ ಒಟ್ಟುಗೂಡಿಸಿದ್ದೇ ದೊಡ್ಡ ಜತೆ ಯಾಟವಾಗಿತ್ತು.
“ಮೊದಲು ಬ್ಯಾಟಿಂಗ್ ಸಿಕ್ಕಿದ್ದರಿಂದ ನಿಜಕ್ಕೂ ಲಾಭವಾಯಿತು. ಇದೊಂದು ಫ್ಲ್ಯಾಟ್ ಟ್ರ್ಯಾಕ್ ಆಗಿತ್ತು. ಕೊನೆಯ ತನಕ ಒಬ್ಬ ಬ್ಯಾಟರ್ ಕ್ರೀಸ್ ಆಕ್ರಮಿಸಿ ಕೊಂಡಿದ್ದೇ ಆದಲ್ಲಿ ನಾವು ಸವಾಲಿನ ಮೊತ್ತ ಗಳಿಸ ಬಲ್ಲೆವು ಎಂಬ ನಂಬಿಕೆ ಇತ್ತು. “ಜೆಮಿ’ ಈ ಕೆಲಸ ಮಾಡಿದರು. ಸ್ಟ್ರೈಕ್ ರೊಟೇಟ್ ಮಾಡುತ್ತ ತಂಡದ ಇನ್ನಿಂಗ್ಸ್ ಬೆಳೆಸಿದರು’ ಎಂಬುದು ಹರ್ಮನ್‌ಪ್ರೀತ್ ಪ್ರತಿಕ್ರಿಯೆ ಆಗಿತ್ತು.
ಬ್ಯಾಟಿಂಗ್ ವೇಳೆ ಕೈಗೆ ಚೆಂಡು ಬಡಿದ ಕಾರಣ ಕೌರ್ ದ್ವಿತೀಯಾರ್ಧದಲ್ಲಿ ಅಂಗಳಕ್ಕೆ ಇಳಿಯಲಿಲ್ಲ. ಆಗ ಸ್ಮತಿ ಮಂಧನಾ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತರು. 3ನೇ ಹಾಗೂ ಅಂತಿಮ ಪಂದ್ಯ ಶನಿವಾರ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್: ಭಾರತ-8 ವಿಕೆಟಿಗೆ 228 (ಜೆಮಿಮಾ 86, ಕೌರ್ 52, ಮಂಧನಾ 36, ಹಲೀìನ್ 25, ನಹಿದಾ ಆಖ್ತರ್ 37ಕ್ಕೆ 2, ಸುಲ್ತಾನಾ ಖಾತುನ್ 41ಕ್ಕೆ 2). ಬಾಂಗ್ಲಾದೇಶ-35.1 ಓವರ್‌ಗಳಲ್ಲಿ 120 (ಫರ್ಗಾನಾ ಹಕ್ 47, ರೀತು ಮೋನಿ 27, ಮುರ್ಶಿದಾ ಖಾತುನ್ 12, ಜೆಮಿಮಾ 3ಕ್ಕೆ 4, ದೇವಿಕಾ 30ಕ್ಕೆ 3). ಪಂದ್ಯಶ್ರೇಷ್ಠ: ಜೆಮಿಮಾ ರೋಡ್ರಿಗಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.