ಜಾರ್ಖಂಡ್‌ ಕ್ರಿಕೆಟಿಗ ವರುಣ್‌ ಏರಾನ್‌ ಕನ್ನಡಿಗ!

Team Udayavani, May 26, 2018, 6:25 AM IST

jharkhand-cricketer-varun.jpg

ಬೆಂಗಳೂರು:  ಇಂಗ್ಲಿಪ್‌ ಕೌಂಟಿ ಕ್ರಿಕೆಟ್‌ನಲ್ಲಿ ಲೀಸೆಸ್ಟರ್‌ಶೈರ್‌ ತಂಡ ಪರ ಮಿಂಚಿ ಮತ್ತೆ ಭಾರತ ತಂಡವನ್ನು ಪ್ರತಿನಿಧಿಸುವ ಕನಸು ಕಾಣುತ್ತಿರುವ ಕ್ರಿಕೆಟಿಗ ವೇಗದ ಬೌಲರ್‌ ವರುಣ್‌ ಏರಾನ್‌ ಕನ್ನಡಿಗ.

ಬಹುತೇಕರಿಗೆ ಇದು ನಂಬಲು ಸಾಧ್ಯವಾಗದ ವಿಷಯ. ಜಾರ್ಖಂಡ್‌ ರಣಜಿ ಆಟಗಾರ ಕನ್ನಡಿಗನಾಗುವುದು ಹೇಗೆ? ಎನ್ನುವ ಅನುಮಾನ ಮೂಡುವುದು ಸಹಜ. ಆದರೆ 25 ವರ್ಷದ ಹಿಂದೆ ಕರ್ನಾಟಕದ ಚಿಕ್ಕಮಗಳೂರಿನಲ್ಲಿ ತಮ್ಮ ಕುಟುಂಬ ನೆಲೆಸಿತ್ತು. ತಂದೆಯ ಉದ್ಯೋಗ ನಿಮಿತ್ತ ಕುಟುಂಬ ಸಮೇತರಾಗಿ ಅನಿವಾರ್ಯವಾಗಿ ಜಾರ್ಖಂಡ್‌ಗೆ ತೆರಳಬೇಕಾಯಿತು ಎನ್ನುವುದನ್ನು ಸ್ವತಃ “ಉದಯವಾಣಿ’ಗೆ ವರುಣ್‌ ಏರಾನ್‌ ತಿಳಿಸಿದ್ದಾರೆ. ಈ ಮೂಲಕ ತಾನು ಕನ್ನಡಿಗ ಎನ್ನುವುದನ್ನು ಅವರು ವರುಣ್‌ ಸಾರಿದ್ದಾರೆ.

ಭಾರತ ತಂಡಕ್ಕೆ ಮರಳುವ ಭರವಸೆ
ವರುಣ್‌ ಆತ್ಮವಿಶ್ವಾಸ ಹೆಚ್ಚಿದೆ. ಇದಕ್ಕೆ ಕಾರಣ ಇಂಗ್ಲಿಷ್‌ ಕೌಂಟಿ ಕ್ರಿಕೆಟ್‌ನಲ್ಲಿ ಒಟ್ಟಾರೆ 11 ವಿಕೆಟ್‌ ಕಿತ್ತಿರುವುದು. ಹೌದು,  ವರುಣ್‌ ಫಾರ್ಮ್ನಲ್ಲಿರಲಿಲ್ಲ. ಹೀಗಾಗಿ ರಾಷ್ಟ್ರೀಯ ತಂಡದಲ್ಲಿ ಅವರಿಗೆ ಸ್ಥಾನ ಸಿಗಲಿಲ್ಲ. ಜತೆಗೆ 11ನೇ ಆವೃತ್ತಿ ಐಪಿಎಲ್‌ನಲ್ಲೂ ಇವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಮುಂದೆ ಬರಲಿಲ್ಲ. ಇದರಿಂದ ಅವರು ತೀವ್ರ ಬೇಸರಕ್ಕೂ ಒಳಗಾಗಿದ್ದರು. ತನ್ನ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ವೇದಿಕೆ ಬೇಕೆಂದು ಕೊಂಡವರೇ ಕೌಂಟಿ ಆಡಲು ನಿರ್ಧರಿಸಿದರು. ಇಂಗ್ಲೆಂಡ್‌ನ‌ ಖ್ಯಾತ ಕೌಂಟಿ ಕ್ರಿಕೆಟ್‌ ತಂಡ ಲೀಸೆಸ್ಟರ್‌ಶೈರ್‌ ಇವರಿಗೆ ಆಹ್ವಾನವನ್ನೂ ನೀಡಿ ಸ್ವಾಗತಿಸಿತು.

ನಾಲ್ಕು ಪಂದ್ಯ, 11 ವಿಕೆಟ್‌
ಸದ್ಯ 4 ಪಂದ್ಯ ಆಡಿರುವ ವರುಣ್‌ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ರಾಯಲ್‌ ಲಂಡನ್‌ ಏಕದಿನ ಟ್ರೋಫಿ ಪಂದ್ಯದಲ್ಲಿ ಆಡಿದ ವರುಣ್‌ ಡರ್ಹಮ್‌ ವಿರುದ್ಧ 86ಕ್ಕೆ 2,  ಲೈಸೆಸ್ಟರ್‌ನಲ್ಲಿ ನಡೆದ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಗ್ಲಾಮರ್ಗನ್‌ ತಂಡದ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 65ಕ್ಕೆ 4, 2ನೇ ಇನಿಂಗ್ಸ್‌ನಲ್ಲಿ 66ಕ್ಕೆ 2 ವಿಕೆಟ್‌ ಹಾರಿಸಿದ್ದಾರೆ. ಡರ್ಹಾಮ್‌ ವಿರುದ್ಧ ನಡೆದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 72ಕ್ಕೆ 2, ಎರಡನೇ ಇನಿಂಗ್ಸ್‌ನಲ್ಲಿ 22 ಓವರ್‌ ಎಸೆದು 102 ರನ್‌ ಬಿಟ್ಟುಕೊಟ್ಟು ನಿಯಂತ್ರಿತ ಬೌಲಿಂಗ್‌ ಪ್ರದರ್ಶಿಸಿದ್ದಾರೆ. ಡರ್ಬಿಶೈರ್‌ ವಿರುದ್ಧ ಪಂದ್ಯದಲ್ಲಿ 54ಕ್ಕೆ1 ವಿಕೆಟ್‌ ಪಡೆದಿದ್ದಾರೆ.

18 ಅಂ.ರಾ.ಪಂದ್ಯ ಆಡಿರುವ ವರುಣ್‌
ಭಾರತ ಪರ 9 ಟೆಸ್ಟ್‌ ಮತ್ತು 9 ಏಕದಿನ ಪಂದ್ಯ ಸೇರಿದಂತೆ ಒಟ್ಟಾರೆ 18 ಪಂದ್ಯವನ್ನು ವರುಣ್‌ ಆಡಿದ್ದಾರೆ. ಇವರಿಗೆ ಕಳಪೆ ಫಾರ್ಮ್ನಿಂದಾಗಿ ಭಾರತ ತಂಡದಲ್ಲಿ ಸ್ಥಾನ ಸಿಗಲಿಲ್ಲ. 2011ರಲ್ಲಿ ಮುಂಬಯಿಯಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಆಡುವ ಮೂಲಕ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. 9 ಟೆಸ್ಟ್‌ನಿಂದ 53.61 ಸರಾಸರಿಯಲ್ಲಿ 18 ವಿಕೆಟ್‌ ಪಡೆದಿದ್ದಾರೆ. ಇನ್ನು 2011ರಲ್ಲಿ ಇಂಗ್ಲೆಂಡ್‌ ವಿರುದ್ಧ ಆಡುವ ಮೂಲಕ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. 9 ಪಂದ್ಯದಿಂದ 11 ವಿಕೆಟ್‌ ಪಡೆದಿದ್ದಾರೆ.

ಪ್ರತಿನಿಧಿಸಿರುವ ಪ್ರಮುಖ ತಂಡಗಳು: ಭಾರತ, ಆಸ್ಟ್ರೇಲಿಯ ಸೆಂಟರ್‌ ಎಕ್ಸೆಲೆನ್ಸ್‌, ಡೆಲ್ಲಿ, ಡೆಲ್ಲಿ ಡೇರ್‌ಡೆವಿಲ್ಸ್‌, ಇಂಡಿಯಾ ಎಮರ್ಜಿಂಗ್‌ ಪ್ಲೇಯರ್, ಜಾರ್ಖಂಡ್‌, ಅಂಡರ್‌-19 ಜಾರ್ಖಂಡ್‌, ಕಿಂಗ್ಸ್‌ ಇಲೆವೆನ್‌ ಪಂಜಾಬ್‌, ಕೋಲ್ಕತಾ ನೈಟ್‌ರೈಡರ್, ರಾಯಲ್‌ ಚಾಲೆಂಜರ್ ಬೆಂಗಳೂರು ಹಾಗೂ ಲೀಸೆಸ್ಟರ್‌ಶೈರ್‌ ಪರ ವರುಣ್‌ ಆಡಿದ್ದಾರೆ.

“ಕನ್ನಡ ಕನ್ನಡಿಗರು ನನಗಿಷ್ಟ’
ತಂದೆ ಉದ್ಯೋಗ ನಿಮಿತ್ತ ಚಿಕ್ಕಮಗಳೂರಿನಿಂದ ಜಾರ್ಖಂಡ್‌ಗೆ ಬರಬೇಕಾಯಿತು. ಹೀಗಾಗಿ ಅನಿವಾರ್ಯವಾಗಿ ಕರ್ನಾಟಕದಿಂದ ದೂರವಾದೆ. ಜಾರ್ಖಂಡ್‌ ತಂಡವನ್ನು ರಣಜಿಯಲ್ಲಿ ಪ್ರತಿನಿಧಿಸಿದೆ. ಮುಂದೆ ಭಾರತ ತಂಡವನ್ನೂ ಪ್ರತಿನಿಧಿಸುವ ಭಾಗ್ಯ ನನದಾಯಿತು. ಹಾಗಂತ ಕನ್ನಡವನ್ನು ಮರೆತಿಲ್ಲ. ಮನೆಯಲ್ಲಿ, ಸ್ನೇಹಿತರ ಜತೆ ಕನ್ನಡ ಮಾತನಾಡುವೆ. ಕನ್ನಡ ಕನ್ನಡಿಗರು ನನಗಿಷ್ಟ. ಹೀಗಾಗಿಯೇ ಬೆಂಗಳೂರಿನಲ್ಲಿ ವಾಸಕ್ಕೆ ಮನೆಯನ್ನೂ ಖರೀದಿಸಿದ್ದೇನೆ.
– ವರುಣ್‌ ಏರಾನ್‌, ವೇಗದ ಬೌಲರ್‌

– ಹೇಮಂತ್‌ ಸಂಪಾಜೆ

ಟಾಪ್ ನ್ಯೂಸ್

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 25ಕ್ಕೂ ಅಧಿಕ ಸಾ*ವು

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Rohit Sharma: ತನುಷ್‌ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ

Rohit Sharma: ತನುಷ್‌ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

ಕ್ರಿಕೆಟಿಗ ಅಕ್ಷರ್‌ ಪಟೇಲ್‌ಗೆ ಗಂಡು ಮಗು, ಹೆಸರು ಹಕ್ಷ್

ಕ್ರಿಕೆಟಿಗ ಅಕ್ಷರ್‌ ಪಟೇಲ್‌ಗೆ ಗಂಡು ಮಗು, ಹೆಸರು ಹಕ್ಷ್

Swiss ಸ್ನೋಬೋರ್ಡ್‌ ಸ್ಪರ್ಧಿ ಹಿಮಕುಸಿತದಲ್ಲಿ ದುರ್ಮರಣ

Swiss ಸ್ನೋಬೋರ್ಡ್‌ ಸ್ಪರ್ಧಿ ಹಿಮಕುಸಿತದಲ್ಲಿ ದುರ್ಮರಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 25ಕ್ಕೂ ಅಧಿಕ ಸಾ*ವು

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.