ಭಾರತದ ಯಶಸ್ವಿ ಆಟಗಾರ್ತಿ ಜೂಲನ್ ಗೋಸ್ವಾಮಿಗೆ ಸ್ಮರಣೀಯ ವಿದಾಯ
Team Udayavani, Sep 25, 2022, 7:10 AM IST
ಲಂಡನ್: ತನ್ನ ಮಹೋನ್ನತ ಕ್ರಿಕೆಟ್ ಬಾಳ್ವೆಯ ಅಂತಿಮ ಪಂದ್ಯ ವನ್ನಾಡಿದ ಭಾರತದ ಯಶಸ್ವಿ ಆಟಗಾರ್ತಿ ಜೂಲನ್ ಗೋಸ್ವಾಮಿ ಅವರು ಇಂಗ್ಲೆಂಡ್ ವಿರುದ್ಧದ ಮೂರನೇ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಆಗಮಿಸಿದಾಗ ಇಂಗ್ಲೆಂಡ್ ತಂಡದ ಆಟಗಾರ್ತಿಯರು ಸಾಲಾಗಿ ನಿಂತು ಗೌರವ ರಕ್ಷೆ ಸ್ವೀಕರಿಸಿದರು.
ಪಂದ್ಯದ 40ನೇ ಓವರ್‌ನಲ್ಲಿ ಒಂಬತ್ತನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಬಂದ 39 ವರ್ಷದ ಜೂಲನ್ ಬ್ಯಾಟಿಂಗಿಗೆ ಬಂದಾಗ ಇಂಗ್ಲೆಂಡ್ ಆಟಗಾರ್ತಿಯರು ಎರಡು ಕಡೆ ಸಾಲಾಗಿ ನಿಂತಿದ್ದರು. ಆಟಗಾರ್ತಿರು ಚಪ್ಪಾಳೆ ತಟ್ಟಿದಾಗ ಜೂಲನ್ ಬಲಕೈ ಮೇಲಕ್ಕೆತ್ತಿ ಕೃತಜ್ಞತೆ ಸಲ್ಲಿಸಿದರು.
“20 ವರ್ಷಗಳಿಂದ ಜೂಲನ್ ಗೋಸ್ವಾಮಿ ಕ್ರಿಕೆಟ್ ಆಡುತ್ತಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಸುಮಾರು 10 ಸಾವಿರ ಎಸೆತ ಎಸೆದಿದ್ದಾರೆ. ಅವರು ಕ್ರಿಕೆಟ್ ಆಡಲು ಬಯಸುವ ಯುವ ಆಟಗಾರ್ತಿಯರಿಗೆ ಸ್ಫೂರ್ತಿ ನೀಡಲಿ ದ್ದಾರೆ, ಧನ್ಯವಾದಗಳು ಜೂಲನ್‌ಜಿ10 ಎಂದು ಇಂಗ್ಲೆಂಡ್ ಕ್ರಿಕೆಟ್ ಟ್ವೀಟ್ ಮಾಡಿದೆ.
ಈಡನ್ ಸ್ಟಾಂಡ್‌ಗೆ ಜೂಲನ್ ಹೆಸರು?
ಕ್ರಿಕೆಟ್ ರಂಗದಿಂದ ಮರಳುತ್ತಿರುವ ಜೂಲನ್ ಗೋಸ್ವಾಮಿ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಕ್ರಿಕೆಟ್ ಅಸೋಸಿಯೇಶನ್ ಆಫ್ ಬಂಗಾಲ ಈಡನ್ ಗಾರ್ಡನ್ಸ್‌ನ ಸ್ಟಾಂಡ್ ಒಂದಕ್ಕೆ ಅವರ ಹೆಸರನ್ನು ಇಡಲು ಯೋಚಿಸುತ್ತಿದೆ. ಪಶ್ಚಿಮ ಬಂಗಾಲದ ನಡಿಯಾ ಜಿಲ್ಲೆಯ ಜೂಲನ್ ಲೆಜೆಂಡ್ಸ್‌ಗಳ ಸಾಲಿನಲ್ಲಿ ನಿಲ್ಲಲು ಅರ್ಹರಾಗಿದ್ದಾರೆ. ಸ್ಟಾಂಡ್‌ಗೆ ಹೆಸರು ಮಾತ್ರವಲ್ಲದೇ ವಾರ್ಷಿಕ ದಿನದಂದು ಅವರನ್ನು ವಿಶೇಷವಾಗಿ ಗೌರವಿಸಲು ಯೋಚಿಸುತ್ತಿದ್ದೇವೆ ಎಂದು ಸಿಎಬಿ ಅಧ್ಯಕ್ಷ ಅವಿಶೇಕ್ ದಾಲಿ¾ಯ ಹೇಳಿದ್ದಾರೆ.
ಜೂಲನ್ ನಿವೃತ್ತಿಯ ಹೊತ್ತಿನಲ್ಲಿ ಕಣ್ಣೀರು ಹಾಕಿದ ಹರ್ಮನ್ ಕೌರ್
ಲಂಡನ್: ಭಾರತದ ಖ್ಯಾತ ಮಹಿಳಾ ವೇಗದ ಬೌಲರ್ ಜೂಲನ್ ಗೋಸ್ವಾಮಿ ನಿವೃತ್ತರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧವೇ ಏಕದಿನ ಆಡುವ ಮೂಲಕ ಕ್ರಿಕೆಟ್ ಜೀವನ ಆರಂಭಿಸಿದ್ದ ಅವರು, ತಮ್ಮ ಅದ್ಭುತ ವೃತ್ತಿಜೀವನದ ಅಂತಿಮ ಪಂದ್ಯವನ್ನು ಅದೇ ತಂಡದ ವಿರುದ್ಧ ಆಡಿದ್ದಾರೆ.
ಒಂದೇ ವ್ಯತ್ಯಾಸವೆಂದರೆ ಆರಂಭಿಕ ಪಂದ್ಯ ನಡೆದಿದ್ದು ಚೆನ್ನೈನಲ್ಲಿ. ಮುಗಿದಿದ್ದು ಕ್ರಿಕೆಟ್ ಕಾಶಿ ಎನಿಸಿಕೊಂಡಿರುವ ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ. ಪಂದ್ಯಕ್ಕೂ ಮೊದಲು ಜೂಲನ್ ಗೋಸ್ವಾಮಿಗೆ ಸ್ಮರಣಿಕೆಯೊಂದನ್ನು ನೀಡಲಾಯಿತು.
ಈ ವೇಳೆ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಇದ್ದರು. ಹಿರಿಯ ಆಟಗಾರ್ತಿ, ದೀರ್ಘಕಾಲದ ಗೆಳತಿ ವಿದಾಯ ಹೇಳುತ್ತಿರುವುದನ್ನು ನೋಡಿ ಹರ್ಮನ್ ತಬ್ಬಿಕೊಂಡು ಕಣ್ಣೀರು ಹಾಕಿದರು. ಅವರು ಅಳುತ್ತಿರುವ ದೃಶ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಜೂಲನ್ ಹಲವು ವಿಶ್ವದಾಖಲೆ ನಿರ್ಮಿಸಿದ್ದಾರೆ. ದೀರ್ಘಕಾಲ ಬೌಲಿಂಗ್ ಮಾಡಿ ಮುಂದಿನ ಪೀಳಿಗೆಗಳಿಗೆ ಮಾದರಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.