ಜಿತು-ಹೀನಾ: ಬಂಗಾರಕ್ಕೆ ಗುರಿ
Team Udayavani, Oct 25, 2017, 7:20 AM IST
ಹೊಸದಿಲ್ಲಿ: ಐಎಸ್‌ಎಸ್‌ಎಫ್ ವರ್ಲ್ಡ್ ಕಪ್ ಫೈನಲ್ ಶೂಟಿಂಗ್ ಸ್ಪರ್ಧೆಯಲ್ಲಿ ಜಿತು ರಾಯ್-ಹೀನಾ ಸಿಧು ಜೋಡಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ತಂದಿತ್ತಿದೆ. ಮಂಗಳವಾರ ಇಲ್ಲಿನ “ಡಾ| ಕರ್ಣಿ ಸಿಂಗ್ ಶೂಟಿಂಗ್ ರೇಂಜಸ್’ನಲ್ಲಿ ನಡೆದ 10 ಮೀ. ಏರ್ ಪಿಸ್ತೂಲ್ ಮಿಕ್ಸೆಡ್ ತಂಡ ಸ್ಪರ್ಧೆಯಲ್ಲಿ ಇವರಿಬ್ಬರು ಬಂಗಾರಕ್ಕೆ ಗುರಿ ಇರಿಸಿದರು.
ಜಿತು ರಾಯ್-ಹೀನಾ ಸಿಧು ಫೈನಲ್‌ನಲ್ಲಿ 483.4 ಅಂಕ ಸಂಪಾದಿಸಿ ಸ್ವರ್ಣ ಸಾಧನೆಗೈದರು. ಇದು ಈ ಜೋಡಿಗೆ ಒಟ್ಟಾರೆಯಾಗಿ ಒಲಿದ 3ನೇ ಶೂಟಿಂಗ್ ಚಿನ್ನವಾದರೆ, ಐಎಸ್‌ಎಸ್‌ಎಫ್ ವರ್ಲ್ಡ್ ಕಪ್ ಫೈನಲ್‌ನಲ್ಲಿ ಮೊದಲನೆಯದು. ಫ್ರಾನ್ಸ್‌ನ ಗೊಬರ್ವಿಲ್ಲೆ-ಫಾಕ್ವೆಟ್ ಬೆಳ್ಳಿ ಪದಕ ಗೆದ್ದರೆ (481.1), ಚೀನದ ಕೈ-ಯಾಂಗ್ ಕಂಚು ಪಡೆದರು (418.2).
ಮೊದಲ ಸಲ ಐಎಸ್‌ಎಸ್‌ಎಫ್ ವರ್ಲ್ಡ್ ಕಪ್ ಆತಿಥ್ಯ ವಹಿಸಿರುವ ಭಾರತ, ಜಿತು-ಹೀನಾ ಸಾಧನೆಯಿಂದ ಸಹಜವಾಗಿಯೇ ಹಿಗ್ಗಿದೆ. ಜಿತು ರಾಯ್ ಕಾಮನ್ವೆಲ್ತ್ ಮತ್ತು ಏಶ್ಯನ್ ಗೇಮ್ಸ್ ಬಂಗಾರ ಪದಕ ವಿಜೇತರಾಗಿದ್ದಾರೆ. ಹೀನಾ ಸಿಧು ಕೂಡ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಹಿರಿಮೆ ಹೊಂದಿದ್ದಾರೆ.
ಈ ವರ್ಷಾರಂಭದ “ಶೂಟಿಂಗ್ ವರ್ಲ್ಡ್ ಕಪ್’ ನಲ್ಲಿ ಮೊದಲ ಸಲ ಪ್ರಾಯೋಗಿಕವಾಗಿ ಮಿಕ್ಸೆಡ್ ಸ್ಪರ್ಧೆ ಯನ್ನು ಅಳವಡಿಸಲಾಗಿತ್ತು. ಇದಕ್ಕೀಗ ಒಲಿಂಪಿಕ್ಸ್ ಬಾಗಿಲು ತೆರೆಯಲಿದ್ದು, 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಿಕ್ಸೆಡ್ ಶೂಟಿಂಗ್ ಸ್ಪರ್ಧೆಯನ್ನು ಮೊದಲ ಸಲ ಅಳವಡಿಸಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Champions Trophy: ಮೋದಿ ಪಾಕ್ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ
IPL 2025: ಭಾರತ ಕ್ರಿಕೆಟ್ ನಾಯಕನಾಗುವ ಉದ್ದೇಶ ಪಂತ್ ಗಿದೆ: ಜಿಂದಾಲ್
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.