ಜೊಕೋ, ಫೆಡರರ್ ಗೆಲುವಿನ ಓಟ
Team Udayavani, Jan 21, 2018, 12:54 PM IST
ಮೆಲ್ಬನ್: ಸ್ಟಾರ್ ಹಾಗೂ ನೆಚ್ಚಿನ ಆಟಗಾರರಾದ ರೋಜರ್ ಫೆಡರರ್ ಮತ್ತು ನೊವಾಕ್ ಜೊಕೊವಿಚ್ ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್‌ನಲ್ಲಿ ಗೆಲುವಿನ ಓಟ ಮುಂದುವರಿಸಿದ್ದಾರೆ. ಇಬ್ಬರೂ ಪ್ರೀ-ಕ್ವಾರ್ಟರ್ ಫೈನಲ್‌ಗೆ ನೆಗೆದಿದ್ದಾರೆ.
ಇವರೊಂದಿಗೆ ಚುಂಗ್ ಹಿಯೋನ್, ಡೊಮಿನಿಕ್ ಥೀಮ್, ಥಾಮಸ್ ಬೆರ್ಡಿಶ್, ಫ್ಯಾಬಿಯೊ ಫೊಗಿನಿ ಕೂಡ 3ನೇ ಸುತ್ತನ್ನು ದಾಟಿದ್ದಾರೆ. ಇವರಲ್ಲಿ ಚುಂಗ್ ಹಿಯೋನ್ ಆಸ್ಟ್ರೇಲಿಯನ್ ಓಪನ್ ಪ್ರೀ-ಕ್ವಾರ್ಟರ್ ಫೈನಲ್ ತಲಪಿದ ದಕ್ಷಿಣ ಕೊರಿಯಾದ ಮೊದಲ ಟೆನಿಸಿಗನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
58ನೇ ರ್‍ಯಾಂಕಿಂಗ್ ಆಟಗಾರ ಚುಂಗ್ ಹಿಯೋನ್ ಜರ್ಮನಿಯ 4ನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವೆರೇವ್ ಅವರನ್ನು ಸೋಲಿಸಿದ್ದು ಶನಿವಾರದ ಅಚ್ಚರಿಯ ಫಲಿತಾಂಶ ಎನಿಸಿಕೊಂಡಿತು. 3 ಗಂಟೆ, 22 ನಿಮಿಷಗಳ ತೀವ್ರ ಪೈಪೋಟಿಯ ಈ ಪಂದ್ಯವನ್ನು ಹಿಯೋನ್ 5-7, 7-6 (7-3), 2-6, 6-3, 6-0 ಅಂತರದಿಂದ ಗೆದ್ದರು.
ಹಿಯೋನ್ ಅವರಿನ್ನು 6 ಬಾರಿಯ ಚಾಂಪಿಯನ್ ನೊವಾಕ್ ಜೊಕೋವಿಕ್ ಅವರನ್ನು ಎದುರಿಸಬೇಕಿದೆ. ಜೊಕೋವಿಕ್ ಸ್ಪೇನಿನ ಆಲ್ಬರ್ಟ್ ರಮೋಸ್ ವಿನೊಲಾಸ್ ಅವರನ್ನು 6-2, 6-3, 6-3 ನೇರ ಸೆಟ್‌ಗಳಲ್ಲಿ ಹಿಮ್ಮೆಟ್ಟಿಸಿದರು.
– ಫೆಡರರ್-ಫುಕೊÕàವಿಕ್ ಫೈಟ್: ರೋಜರ್ ಫೆಡರರ್ ಫ್ರಾನ್ಸ್‌ನ ರಿಚರ್ಡ್ ಗಾಸ್ಕೆಟ್ ವಿರುದ್ಧ 6-2, 7-5, 6-4 ಅಂತರದ ಜಯ ಸಾಧಿಸಿದರು. ಸ್ವಿಸ್ ತಾರೆಯ ಮುಂದಿನ ಎದುರಾಳಿ ಹಂಗೇರಿಯ ಮಾರ್ಟನ್ ಫುಕೊವಿಕ್. ಅವರು ಆರ್ಜೆಂಟೀನಾದ ನಿಕೋಲಾಸ್ ಕಿಕರ್ ವಿರುದ್ಧ 6-3, 6-3, 6-2 ಅಂತರದ ಗೆಲುವು ಒಲಿಸಿಕೊಂಡರು.
ಆಸ್ಟ್ರಿಯಾದ ಡೊಮಿನಿಕ್ ಥೀಮ್ 6-4, 6-2, 7-5ರಿಂದ ಫ್ರಾನ್ಸ್‌ನ ಆಡ್ರಿಯನ್ ಮನ್ನಾರಿನೊ ಅವರನ್ನು ಸೋಲಿಸಿ ಅಮೆರಿಕದ ಟೆನ್ನಿಸ್ ಸ್ಯಾಂಡ್‌ಗೆÅನ್ ಅವರನ್ನು ಎದುರಿಸಲು ಅಣಿಯಾದರು.
ಶರಪೋವಾಗೆ ಆಘಾತ: ಮಾಜಿ ಚಾಂಪಿಯನ್‌ಗಳಿಬ್ಬರ 3ನೇ ಸುತ್ತಿನ ಹೋರಾಟದಲ್ಲಿ ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ ರಷ್ಯದ ಮರಿಯಾ ಶರಪೋವಾ ಅವರನ್ನು 6-1, 6-3 ಅಂತರದಿಂದ ಕೆಡವಿ ಆಸ್ಟ್ರೇಲಿಯನ್ ಓಪನ್ ವನಿತಾ ಸಿಂಗಲ್ಸ್ ವಿಭಾಗದ ಪ್ರೀ-ಕ್ವಾರ್ಟರ್ ಫೈನಲ್‌ಗೆ ಮುನ್ನಡೆದಿದ್ದಾರೆ. ಸಿಮೋನಾ ಹಾಲೆಪ್, ಮ್ಯಾಡಿಸನ್ ಕೇಯ್ಸ, ಕ್ಯಾರೋಲಿನಾ ಪ್ಲಿಸ್ಕೋವಾ, ನವೋಮಿ ಒಸಾಕಾ, ಕ್ಯಾರೋಲಿನ್ ಗಾರ್ಸಿಯಾ ಕೂಡ ತೃತೀಯ ಸುತ್ತು ದಾಟುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಪೋಲೆಂಡಿನ ಅಗ್ನಿàಸ್ಕಾ ರಾದ್ವಂಸ್ಕಾ ಹೊರಬಿದ್ದಿದ್ದಾರೆ.
ಡಬಲ್ಸ್: ಪೇಸ್-ರಾಜ ಜೋಡಿಗೆ ಜಯ: ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್‌ನಲ್ಲಿ ಭಾರತದ ಲಿಯಾಂಡರ್ ಪೇಸ್-ಪುರವ್ ರಾಜ ಪ್ರೀ-ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಭಾರತದ ಮೂರೂ ಜೋಡಿಗಳು 16ರ ಸುತ್ತು ತಲಪಿದಂತಾಯಿತು. ಇದಕ್ಕೂ ಮುನ್ನ ರೋಹನ್ ಬೋಪಣ್ಣ, ದಿವಿಜ್ ಶರಣ್ ಜೋಡಿಯೂ ಈ ಹಂತಕ್ಕೇರಿತ್ತು.
ಶನಿವಾರದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಪೇಸ್-ರಾಜ ಸೇರಿಕೊಂಡು 5ನೇ ಶ್ರೇಯಾಂಕದ ಜಾಮಿ ಮರ್ರೆ (ಬ್ರಿಟನ್)-ಬ್ರುನೊ ಸೊರೆಸ್ (ಬ್ರೆಜಿಲ್) ವಿರುದ್ಧ 2 ಗಂಟೆ, 54 ನಿಮಿಷಗಳ ಭಾರೀ ಹೋರಾಟ ನಡೆಸಿ 7-6 (3), 5-7, 7-6 (6) ಅಂತರದಿಂದ ಗೆದ್ದು ಬಂದರು.
ಇವರಿನ್ನು ಕೊಲಂಬಿಯಾದ 11ನೇ ಶ್ರೇಯಾಂಕದ ಸಬಾಸ್ಟಿಯನ್ ಕಬಾಲ್-ರಾಬರ್ಟ್ ಫರಾಹ್ ವಿರುದ್ಧ ಆಡಲಿದ್ದಾರೆ. 44ರ ಹರೆಯದ ಪೇಸ್ 2012ರಲ್ಲಿ ಕೊನೆಯ ಸಲ ಆಸ್ಟ್ರೇಲಿಯನ್ ಓಪನ್ ಡಬಲ್ಸ್ ಚಾಂಪಿಯನ್ ಆಗಿದ್ದರು. ಅಂದು ಭಾರತೀಯನ ಜತೆಗಾರನಾಗಿದ್ದವರು ರಾಡೆಕ್ ಸ್ಟೆಪನೆಕ್. ಇವರಿಬ್ಬರು ಕೂಡಿಕೊಂಡು ಅಂದಿನ ನಂ.1 ಆಟಗಾರರಾದ ಬ್ರಿಯಾನ್ ಸೋದರರನ್ನು ಕೆಡವಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; 2025 ಭಾರತ ಆಡುವುದು ಹತ್ತೇ ಟೆಸ್ಟ್
Women’s ODI rankings; 5ನೇ ಸ್ಥಾನಕ್ಕೆ ಏರಿದ ದೀಪ್ತಿ ಶರ್ಮ
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Team India: ಇಂಗ್ಲೆಂಡ್ ಸರಣಿಗಿಲ್ಲ ಪ್ರಮುಖ ಆಟಗಾರರು; ಯುವ ಬ್ಯಾಟರ್ ಗೆ ನಾಯಕತ್ವದ ಹೊಣೆ
Vijay Hazare : ವರುಣ್, ತಿಲಕ್ ಬ್ಯಾಟಿಂಗ್ ವೈಭವ; ಹೈದರಾಬಾದ್ ವಿರುದ್ದ ಸೋತ ಕರ್ನಾಟಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ISRO: ಜನವರಿ ತಿಂಗಳಲ್ಲಿ 100ನೇ ಉಡಾವಣೆ
Mangaluru: ಅಪರಾಧಿ ಹಿತೇಶ್ ಶೆಟ್ಟಿಗಾರ್‌ಗೆ ಮರಣ ದಂಡನೆ ಶಿಕ್ಷೆ
BJP ರಾಜ್ಯಾಧ್ಯಕ್ಷ ಪಟ್ಟ ಗುಪ್ತ ಸಮರ ಆರಂಭ! ಸ್ಥಾನ ಉಳಿಸಿಕೊಳ್ಳಲು ಬಿವೈವಿ ಕಸರತ್ತು
Covid Vaccine: ಪತ್ನಿ ಕೊಂದಿದ್ದವನ ಪತ್ತೆಗೆ ನೆರವಾದ ಕೋವಿಡ್ ಲಸಿಕೆ!
ಹೊಸ ವರ್ಷಕ್ಕೆ ಪುಷ್ಪಾಲಂಕೃತ ಧರ್ಮಸ್ಥಳ: ಒಂದು ಟನ್ ಹಣ್ಣು, ವಿವಿಧ ಬಗೆಯ ಹೂಗಳಿಂದ ಸಿಂಗಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.