ಓವರೊಂದರಲ್ಲಿ 41 ರನ್ ಸಿಡಿಸಿ ಕಾರ್ಟರ್-ಹ್ಯಾಂಪ್ಟನ್ ವಿಶ್ವದಾಖಲೆ
Team Udayavani, Nov 8, 2018, 6:00 AM IST
ಹ್ಯಾಮಿಲ್ಟನ್: ಒಂದು ಓವರ್‌ನಲ್ಲಿ ಗರಿಷ್ಠ ಎಷ್ಟು ರನ್ ಹೊಡೆಯಬಹುದು? ಆರು ಎಸೆತಕ್ಕೆ ಆರೂ ಸಿಕ್ಸರ್ ಬಾರಿಸಿದರೆ 36 ರನ್ ಬಾರಿಸಬಹುದು. ಅಂತಾರಾಷ್ಟ್ರೀಯ ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಇದು ಈಗಾಗಲೇ ಸಂಭವಿಸಿದೆ. ಆದರೆ ನ್ಯೂಜಿಲ್ಯಾಂಡ್ ದೇಶೀಯ ಕ್ರಿಕೆಟ್‌ನಲ್ಲಿ ಇದನ್ನೆಲ್ಲ ಮೀರಿದ ಅದ್ಭುತವೊಂದು ನಡೆದಿದೆ.
ಸೆಡ್ಡನ್ ಪಾರ್ಕ್‌ನಲ್ಲಿ ನಡೆದ 50 ಓವರ್‌ಗಳ ಪಂದ್ಯದಲ್ಲಿ ನಾರ್ದರ್ನ್ ಡಿಸ್ಟ್ರಿಕ್ಟ್ ತಂಡದ ಜೋ ಕಾರ್ಟರ್ ಮತ್ತು ಬ್ರೆಟ್ ಹ್ಯಾಂಪ್ಟನ್ ಓವರೊಂದರಲ್ಲಿ 43 ರನ್ ಚಚ್ಚಿ (ನೋಬಾಲ್ ಮೂಲಕ 2 ರನ್)ವಿಶ್ವದಾಖಲೆ ನಿರ್ಮಿಸಿದ್ದಾರೆ. ಇದು ಸೀಮಿತ ಓವರ್ ಕ್ರಿಕೆಟ್‌ನ ಒಂದು ಓವರ್‌ನಲ್ಲಿ ದಾಖಲಾದ ಗರಿಷ್ಠ ರನ್!
ಇದಕ್ಕೂ ಮುನ್ನ 2013ರಲ್ಲಿ ಜಿಂಬಾಬ್ವೆಯ ಎಲ್ಟನ್ ಚಿಗುಂಬರ ಓವರೊಂದರಲ್ಲಿ 39 ರನ್ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಬಾಂಗ್ಲಾದೇಶದಲ್ಲಿ ನಡೆದ ದೇಶೀಯ ಕೂಟದಲ್ಲಿ ಚಿಗುಂಬರ ಈ ಸಾಧನೆ ಮಾಡಿದ್ದರು. ಕೇವಲ ಅಂತಾರಾಷ್ಟ್ರೀಯ ಕ್ರಿಕೆಟನ್ನು ಪರಿಗಣಿಸಿದರೆ 2007ರ ಟಿ20 ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್, ಇಂಗ್ಲೆಂಡ್ ವಿರುದ್ಧ, 2006-07ರ ಏಕದಿನ ವಿಶ್ವಕಪ್‌ನಲ್ಲಿ ಹರ್ಷಲ್ ಗಿಬ್ಸ್, ಹಾಲೆಂಡ್ ವಿರುದ್ಧ 6 ಎಸೆತಕ್ಕೆ 36 ರನ್ ಬಾರಿಸಿ ತಮ್ಮ ಹೆಸರಿನಲ್ಲಿ ದಾಖಲೆ ಹೊಂದಿದ್ದಾರೆ. ಇವೆರಡೂ ವೈಯಕ್ತಿಕ ಸಾಧನೆ. ಅಂದರೆ ಓವರೊಂದರಲ್ಲಿ ಒಬ್ಬ ಬ್ಯಾಟ್ಸ್‌ಮನ್ ಗಳಿಸಿದ ಗರಿಷ್ಠ ರನ್.
ಆದರೆ ನ್ಯೂಜಿಲ್ಯಾಂಡ್ ದೇಶೀಯ ಕ್ರಿಕೆಟ್‌ನಲ್ಲಿ ನಡೆದಿದ್ದು ಅಸಾಮಾನ್ಯ ಪರಾಕ್ರಮ. ಇಬ್ಬರು ಬ್ಯಾಟ್ಸ್‌ಮನ್‌ಗಳಾದ ಹ್ಯಾಂಪ್ಟನ್ ಮತ್ತು ಕಾರ್ಟರ್ ಇಬ್ಬರೂ ಸೇರಿ, ಸೆಂಟ್ರಲ್ ಡಿಸ್ಟ್ರಿಕ್ಟ್$Õ ತಂಡದ ವೇಗದ ಬೌಲರ್ ವಿಲಿಯಮ್ ಲುಡಿಕ್‌ರನ್ನು ಹುಡಿಯೆಬ್ಬಿಸಿದರು. ದುರದೃಷ್ಟಕ್ಕೆ ಲುಡಿಕ್ ಓವರ್‌ನಲ್ಲಿ ಎರಡು ನೋಬಾಲ್ ಎಸೆದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿಕೊಂಡರು.
ಲುಡಿಕ್ ದುರದೃಷ್ಟಕಾರಿ ಓವರ್
ವಿಲಿಯಮ್ ಲುಡಿಕ್ 46ನೇ ಓವರ್ ಬೌಲಿಂಗ್ ಮಾಡುತ್ತಿದ್ದರು. ಅದು ಈ ಇನ್ನಿಂಗ್ಸ್‌ನಲ್ಲಿ ಅವರ ಕೊನೆಯ ಓವರ್ ಆಗಿತ್ತು. ಬೌಲಿಂಗ್ ಆರಂಭಕ್ಕೆ ಮುನ್ನ 42 ರನ್ ನೀಡಿ 1 ವಿಕೆಟ್ ಪಡೆದಿದ್ದು ಅವರ ಸಾಧನೆ. ಓವರ್ ಮುಕ್ತಾಯದ ಹೊತ್ತಿಗೆ ಅವರ ಪರಿಸ್ಥಿತಿ 1 ವಿಕೆಟ್‌ಗೆ 85 ರನ್ ಎನ್ನುವಂತಾಗಿತ್ತು. ಕೇವಲ 8 ಎಸೆತಗಳ ಅಂತರದಲ್ಲಿ ಪರಿಸ್ಥಿತಿ ಬದಲಾಗಿತ್ತು!
ಲುಡಿಕ್ ಓವರ್‌ನ ಮೊದಲ ಎಸೆತದಲ್ಲಿ ಹ್ಯಾಂಪ್ಟನ್ ಬೌಂಡರಿ ಬಾರಿಸಿದರು. ಅದಾದ ಅನಂತರ ಸತತ ಎರಡು ನೋಬಾಲ್‌ಗಳಲ್ಲಿ ಎರಡು ಸಿಕ್ಸರ್ ಬಾರಿಸಿದರು. ಮುಂದಿನ ಎಸೆತದಲ್ಲಿ ಮತ್ತೂಂದು ಸಿಕ್ಸರ್ ಬಂತು. ಅದರ ಅನಂತರ ಒಂದು ಸಿಂಗಲ್ ತೆಗೆದು ಕಾರ್ಟರ್‌ಗೆ ಬ್ಯಾಟಿಂಗ್ ಬಿಟ್ಟುಕೊಟ್ಟರು. ಕಾರ್ಟರ್ ಮುಂದಿನ ಮೂರೂ ಎಸೆತಗಳನ್ನು ಸಿಕ್ಸರ್‌ಗಟ್ಟಿದರು. ಒಟ್ಟಾರೆ ಲುಡಿಕ್ ನೀಡಿದ ರನ್‌ಗಳು ಹೀಗಿವೆ: 4,6+1,6+1,6,1,6,6,6. ಬ್ಯಾಟ್‌ನಿಂದ 41 ರನ್ ಬಂದರೆ ಇನ್ನೆರಡು ನೋಬಾಲ್. ಒಟ್ಟು 43 ರನ್.
50 ಓವರ್ ಮುಗಿದಾಗ ಕಾರ್ಟರ್ ಅಜೇಯ 102 ರನ್ ಬಾರಿಸಿದ್ದರೆ, ಹ್ಯಾಂಪ್ಟನ್ 95 ರನ್ ಬಾರಿಸಿದ್ದರು. ನಾರ್ದರ್ನ್ ಡಿಸ್ಟ್ರಿಕ್ಟ್$Õ 313/7 ರನ್ ಗಳಿಸಿತು. ಇದನ್ನು ಬೆನ್ನತ್ತಿ ಹೊರಟ ಸೆಂಟ್ರಲ್ ಡಿಸ್ಟ್ರಿಕ್ಟ್$Õ 50 ಓವರ್‌ನಲ್ಲಿ 289/9 ರನ್ ಗಳಿಸಿತು. ಆ ತಂಡದ ಪರ ಡಾನ್ ಫಾಕ್ಸ್‌ಕ್ರಾಫ್ಟ್ ಶತಕ ಹೊಡೆದಿದ್ದು ಪ್ರಯೋಜನಕ್ಕೆ ಬರಲಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.