4ನೇ ಅಟ್ಲಾಂಟಾ ಪ್ರಶಸ್ತಿ ಗೆದ್ದ ಇಸ್ನರ್
Team Udayavani, Aug 1, 2017, 7:10 AM IST
ವಾಷಿಂಗ್ಟನ್: ಅಲ್ ಅಮೆರಿಕನ್ “ಅಟ್ಲಾಂಟಾ ಎಟಿಪಿ ಟೆನಿಸ್’ ಪಂದ್ಯಾವಳಿಯಲ್ಲಿ ಜಾನ್ ಇಸ್ನರ್ 4ನೇ ಬಾರಿಗೆ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ. ಫೈನಲ್‌ನಲ್ಲಿ ಅವರು ತೀವ್ರ ಪೈಪೋಟಿ ನೀಡಿದ ರಿಯಾನ್ ಹ್ಯಾರಿಸನ್ ಅವರನ್ನು 7-6 (8-6), 7-6 (9-7) ಅಂತರ ದಿಂದ ಮಣಿಸಿದರು.
ಅಮೆರಿಕದ ದ್ವಿತೀಯ ಶ್ರೇಯಾಂಕದ ಆಟಗಾರನಾಗಿರುವ ಜಾನ್ ಇಸ್ನರ್ ಇಲ್ಲಿ ಆಡಿದ 8 ಪಂದ್ಯಾವಳಿಗಳಲ್ಲಿ 7 ಸಲ ಫೈನಲ್‌ಗೆ ಲಗ್ಗೆ ಇರಿಸಿದ್ದರು. ಇದು ಅಟ್ಲಾಂಟಾದಲ್ಲಿ ಇಸ್ನರ್ ಗೆದ್ದ 4ನೇ ಪ್ರಶಸ್ತಿ. ಇದಕ್ಕೂ ಮುನ್ನ 2013ರಿಂದ ಮೊದಲ್ಗೊಂಡು ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಇದು 2 ವಾರಗಳ ಅಂತರದಲ್ಲಿ ಜಾನ್ ಇಸ್ನರ್ ಗೆದ್ದ 2ನೇ ಟೆನಿಸ್ ಪ್ರಶಸ್ತಿ. ಕಳೆದ ವಾರ ಅವರು ನ್ಯೂಪೋರ್ಟ್ ನಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.
4ನೇ ಶ್ರೇಯಾಂಕದ ರಿಯಾನ್ ಹ್ಯಾರಿಸನ್‌ಗೆ ಈ ಸೋಲಿನಿಂದ ಟೆನಿಸ್ ಬಾಳ್ವೆಯ 2ನೇ ಪ್ರಶಸ್ತಿ ಸ್ವಲ್ಪದರಲ್ಲೇ ಕೈತಪ್ಪಿತು. ಕಳೆದ ಫೆಬ್ರವರಿಯಲ್ಲಿ ಹ್ಯಾರಿಸನ್ “ಮೆಂಫಿಸ್ ಟೆನಿಸ್’ ಪ್ರಶಸ್ತಿ ಪಡೆದಿದ್ದರು.
ಈ ಜಯದೊಂದಿಗೆ ಜಾನ್ ಇಸ್ನರ್ ಅಮೆರಿಕದ ಅಗ್ರ ರ್‍ಯಾಂಕಿಂಗ್ ಆಟಗಾರನೆನಿಸಿಕೊಂಡರು. ಜಾಕ್ ಸೋಕ್ ಅವರನ್ನು ಕೆಳಕ್ಕೆ ತಳ್ಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.