ಬೇರ್‌ಸ್ಟೊ ಬೇರ್ಪಡಿಸಿದ್ದಕ್ಕೆ ಹುಸೇನ್ ಅಸಮಾಧಾನ
Team Udayavani, Jan 25, 2021, 7:00 AM IST
ಲಂಡನ್: ಭಾರತದೆದುರಿನ ಟೆಸ್ಟ್ ಸರಣಿಗಾಗಿ ಪ್ರಕಟಿಸಲಾದ ಟೆಸ್ಟ್ ತಂಡದಿಂದ ಅನುಭವಿ ಕ್ರಿಕೆಟಿಗ ಜಾನಿ ಬೇರ್‌ಸ್ಟೊ ಅವರನ್ನು ಕೈಬಿಟ್ಟಿದ್ದಕ್ಕೆ ಇಂಗ್ಲೆಂಡಿನ ಮಾಜಿ ನಾಯಕ ನಾಸಿರ್ ಹುಸೇನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಇಂಗ್ಲೆಂಡ್ ಪಾಲಿಗೆ ಇದು ಅತ್ಯಂತ ಮಹತ್ವದ ಸರಣಿ. ಸ್ಪಿನ್ನರ್‌ಗಳನ್ನು ಸಮರ್ಥವಾಗಿ ಎದುರಿಸಬಲ್ಲ ನಮ್ಮ ಮೂವರು ಕ್ರಿಕೆಟಗರಲ್ಲಿ ಬೇರ್‌ಸ್ಟೊ ಕೂಡ ಒಬ್ಬರು. ಆದರೆ ಅವರಿಗೆ ಲಂಡನ್ನಿನ ಬೋರ್ಡಿಂಗ್ ಪಾಸ್ ನೀಡಿದ್ದಾರೆ. ಉಳಿದವರು ಚೆನ್ನೈಗೆ ತೆರಳಲಿದ್ದಾರೆ’ ಎಂದು “ಸ್ಕೈ ನ್ಪೋರ್ಟ್ಸ್’ಗೆ ನೀಡಿದ ಸಂದರ್ಶನದಲ್ಲಿ ಹುಸೇನ್ ಹೇಳಿದರು.
“ಇದು ಕ್ರಿಕೆಟಿಗರಿಗೆ ನೀಡಿದ ವಿಶ್ರಾಂತಿಯೋ ಅಥವಾ ಅವರ್ತನ ಪದ್ಧತಿಯೋ ತಿಳಿಯದು. ಭಾರತವನ್ನು ಅವರದೇ ನೆಲದಲ್ಲಿ ಮೊದಲ ಟೆಸ್ಟ್ ನಲ್ಲಿ ಎದುರಿಸುವಾಗ ಬಲಿಷ್ಠ ತಂಡದ ಅಗತ್ಯವಿದೆ. ಒಂದು ವೇಳೆ ಈ ಪಂದ್ಯದ ಬಳಿಕ ಇಂಗ್ಲೆಂಡ್ ಆ್ಯಶಸ್ ಸರಣಿಗಾಗಿ ಬ್ರಿಸ್ಬೇನ್‌ನಲ್ಲಿ ಆಡುವುದಿದ್ದರೆ ಆಗ ಬಲಾಡ್ಯ ತಂಡವನ್ನು ಕಳುಹಿಸುತ್ತಿರಲಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ ನಾಸಿರ್ ಹುಸೇನ್.
ನಾಸಿರ್ ಹುಸೇನ್ ಪ್ರಕಾರ, ಸ್ಪಿನ್ನರ್‌ಗಳನ್ನು ದಿಟ್ಟ ರೀತಿಯಲ್ಲಿ ಎದುರಿಸುವವರು ಭಾರತ ಪ್ರವಾಸಕ್ಕೆ ಅತ್ಯಗತ್ಯ. ರೂಟ್, ಸ್ಟೋಕ್ಸ್ ಜತೆಗೆ ಬೇರ್‌ಸ್ಟೊ ಅವರಲ್ಲೂ ಇಂಥದೊಂದು ಸಾಮರ್ಥ್ಯವಿದೆ. ಹೀಗಾಗಿ ಬೇರ್‌ಸ್ಟೊ ಭಾರತ ಸರಣಿಗೆ ಬೇಕಿತ್ತು ಎಂಬುದು ಅವರ ತರ್ಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australian Open: ಹಿಂದೆ ಸರಿದ ಸಿಮೋನಾ ಹಾಲೆಪ್
South Africa vs Pakistan 2nd Test: ಬಾಶ್ ದಾಖಲೆ: ದ. ಆಫ್ರಿಕಾ ಮುನ್ನಡೆ
Melbourne Cricket Club; ಸಚಿನ್ ತೆಂಡುಲ್ಕರ್‌ಗೆ ಗೌರವ ಸದಸ್ಯತ್ವ
Boxing: ವಿಶ್ವ ಬಾಕ್ಸಿಂಗ್ ಸಂಸ್ಥೆಯಿಂದ ಮಧ್ಯಂತರ ಏಷ್ಯನ್ ಮಂಡಳಿ
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್‌ಸ್ವೀಪ್ ಮಾಡಿದ ವನಿತೆಯರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.