ಬೆಳೆಯುತ್ತಿದೆ ಗಾಯಾಳುಗಳ ಪಟ್ಟಿ: ವಿಶ್ವಕಪ್ ನಿಂದ ಹೊರಬಿದ್ದ ಆಸೀಸ್ ಕೀಪರ್
Team Udayavani, Oct 20, 2022, 9:50 AM IST
ಮೆಲ್ಬರ್ನ್: ಇನ್ನೇನೋ ಟಿ20 ವಿಶ್ವಕಪ್ ಮುಖ್ಯಹಂತದ ಪಂದ್ಯಗಳು ಆರಂಭವಾಗಬೇಕು ಎನ್ನುವಷ್ಟರಲ್ಲಿ ಗಾಯಾಳುಗಳ ಸಂಖ್ಯೆ ಏರಿಕೆಯಾಗುತ್ತಿದೆ. ದುಷ್ಮಂತ ಚಮೀರ ಮತ್ತು ರೀಸ್ ಟಾಪ್ಲಿ ಬಳಿಕ ಇದೀಗ ಆತಿಥೇಯ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟರ್ ಜೋಶ್ ಇಂಗ್ಲಿಸ್ ಗಾಯಗೊಂಡಿದ್ದಾರೆ.
ಆಸ್ಟ್ರೇಲಿಯಾದ ಜೋಶ್ ಇಂಗ್ಲಿಸ್ ಗಾಲ್ಫ್ ಕೋರ್ಸ್‌ನಲ್ಲಿ ಗಾಯಗೊಂಡಿದ್ದಾರೆ. ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿರುವ 27 ವರ್ಷದ ಇಂಗ್ಲೀಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಐಸಿಸಿ ಟಿ 20 ವಿಶ್ವಕಪ್ 2022 ಸೂಪರ್-12 ಆರಂಭಿಕ ಪಂದ್ಯಕ್ಕೆ ಕೇವಲ ಮೂರು ದಿನಗಳ ಮೊದಲು ಕಾಂಗರೂ ತಂಡಕ್ಕೆ ಈ ಹಿನ್ನಡೆ ಎದುರಾಗಿದೆ.
ಇಂಗ್ಲಿಸ್ ಈಗ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಹಾಲಿ ವಿಶ್ವ ಚಾಂಪಿಯನ್ ಆಸೀಸ್ ಶೀಘ್ರದಲ್ಲೇ ಬದಲಿ ಆಟಗಾರನನ್ನು ಹೆಸರಿಸಲಿದೆ.
ಇದನ್ನೂ ಓದಿ:ಮತ್ತೆ ಬೆಂಗಳೂರು ಕಾಡಿದ ಭಾರೀ ಮಳೆ; ಹಲವು ವಾಹನಗಳು ಜಖಂ
ಆಸೀಸ್ ತಂಡವನ್ನು ಸೇರುವ ಮೊದಲು ಅವರು ಗಾಲ್ಫ್ ಕೋರ್ಸ್ ನಲ್ಲಿ ಗಾಲ್ಫ್ ಆಡುತ್ತಿದ್ದರು. ಆಸ್ಟ್ರೇಲಿಯಾದ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಅವರು ಇಂತಹ ಗಾಯವನ್ನು ‘ಎಂದಿಗೂ ನೋಡಿಲ್ಲ’ ಎಂದು ಹೇಳಿದರು.
Breaking: Josh Inglis out of World Cup per @GerardWhateley. Aus to name replacement
— Ben Horne (@BenHorne8) October 19, 2022
ಟಿ20 ವಿಶ್ವಕಪ್ ಪಂದ್ಯಾವಳಿಗೆ ಅಣಿಯಾಗುತ್ತಿರುವ ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳಿಗೆ ಬೌಲಿಂಗ್ ವಿಭಾಗದಲ್ಲಿ ಸಂಕಟ ಎದುರಾಗಿದೆ. ವೇಗಿಗಳಾದ ರೀಸ್ ಟಾಪ್ಲಿ ಮತ್ತು ದುಷ್ಮಂತ ಚಮೀರ ಗಾಯಾಳಾಗಿ ಕೂಟದಿಂದ ಹೊರಬಿದ್ದಿದ್ದಾರೆ. ರೀಸ್ ಟಾಪ್ಲಿ ಬ್ರಿಸ್ಬೇನ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಎಡಗಾಲಿನ ಪಾದದ ನೋವಿಗೆ ಸಿಲುಕಿದ್ದರು. ಇವರ ಸ್ಥಾನಕ್ಕೆ ಟೈಮಲ್ ಮಿಲ್ಸ್ ಅವರನ್ನು ಸೇರಿಸಿಕೊಳ್ಳಲಾಗಿದೆ. ದುಷ್ಮಂತ ಚಮೀರ ಯುಎಇ ವಿರುದ್ಧದ ಅರ್ಹತಾ ಪಂದ್ಯದ ಕೊನೆಯಲ್ಲಿ ಗಾಯಾಳಾಗಿ ಮೈದಾನದಿಂದ ಹೊರನಡೆದಿದ್ದರು. ಇವರ ಸ್ಥಾನವೀಗ ಕಸುನ್ ರಜಿತ ಪಾಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.