England vs West Indies: ವೆಸ್ಟ್ ಇಂಡೀಸ್‌ಗೆ ಮೊದಲ ಇನ್ನಿಂಗ್ಸ್ ಮುನ್ನಡೆ
Team Udayavani, Jul 20, 2024, 8:48 PM IST
ನಾಟಿಂಗಂ: ಕಾವೆಮ್ ಹಾಜ್ ಅವರ ಆಕರ್ಷಕ ಶತಕ ಹಾಗೂ ಅಲಿಕ್ ಅಥನಾಜ್ ಮತ್ತು ಜೋಶುವ ಡ ಸಿಲ್ವ ಅವರ ಉತ್ತಮ ಆಟದಿಂದಾಗಿ ಪ್ರವಾಸಿ ವೆಸ್ಟ್‌ಇಂಡೀಸ್ ತಂಡವು ಇಂಗ್ಲೆಂಡ್ ತಂಡದೆದುರಿನ ದ್ವಿತೀಯ ಟೆಸ್ಟ್ ಪಂದ್ಯದ ಮೂರನೇ ದಿನ 457 ರನ್ನಿಗೆ ಆಲೌಟಾಯಿತು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 41 ರನ್ನುಗಳ ಮುನ್ನಡೆ ಸಾಧಿಸಿತು.
5 ವಿಕೆಟಿಗೆ 351 ರನ್ನುಗಳೊಂದಿಗೆ ಮೂರನೇ ದಿನದ ಆಟ ಮುಂದುವರಿಸಿದ ವೆಸ್ಟ್‌ಇಂಡೀಸ್ ತಂಡವು ಊಟದ ವಿರಾಮದ ವೇಳೆಗೆ ಆಲೌಟಾಯಿತು. ಇನ್ನೆರಡು ದಿನಗಳ ಆಟ ಬಾಕಿ ಉಳಿದಿದ್ದು ಪಂದ್ಯ ಡ್ರಾಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಇಂಗ್ಲೆಂಡ್ ಆಕ್ರಮಣಕಾರಿ ರೀತಿಯಲ್ಲಿ ಆಡಿದರೆ ಗೆಲುವು ದಾಖಲಿಸಲು ಪ್ರಯತ್ನಿಸುವ ನಿರೀಕ್ಷೆಯಿದೆ.
32 ರನ್ನಿನಿಂದ ದಿನದಾಟ ಮುಂದುವರಿಸಿದ ಜೋಶುವ ಡ ಸಿಲ್ವ ತಂಡ ಆಲೌಟ್ ಆಗುವಾಗ 82 ರನ್ ಗಳಿಸಿ ಆಡುತ್ತಿದ್ದರು. 122 ಎಸೆತ ಎದುರಿಸಿದ ಅವರು 10 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದ್ದರು. ಅವರು ಶಮರ ಜೊಸೆಫ್ ಜತೆ ಅಂತಿಮ ವಿಕೆಟಿಗೆ 71 ರನ್ನುಗಳ ಜತೆಯಾಟ ನಡೆಸಿದ್ದರಿಂದ ವೆಸ್ಟ್‌ಇಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸುವಂತಾಯಿತು.
ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್ 416; ವೆಸ್ಟ್‌ಇಂಡೀಸ್ ಪ್ರಥಮ ಇನ್ನಿಂಗ್ಸ್ 457 (ಅಲಿಕ್ ಅಥನಾಜ್ 82, ಕಾವೆಮ್ ಹಾಜ್ 120, ಜೋಶುವ ಡ ಸಿಲ್ವ 82 ಔಟಾಗದೆ, ಕ್ರಿಸ್ ವೋಕ್ಸ್ 84ಕ್ಕೆ 4).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test Series: ಟೀಮ್ ಇಂಡಿಯಾ ವೈಟ್ ವಾಶ್… ನ್ಯೂಝಿಲೆಂಡ್ ಗೆ ಸರಣಿ ಗೆಲುವು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
MUST WATCH
ಹೊಸ ಸೇರ್ಪಡೆ
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು
Tollywood: ಲೋಕೇಶ್, ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್ ಎಂಟ್ರಿ?
UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ
Sunday Market: ಶ್ರೀನಗರದ ಮಾರುಕಟ್ಟೆ ಬಳಿ ಉಗ್ರರಿಂದ ಗ್ರೆನೇಡ್ ದಾಳಿ… 10 ಮಂದಿಗೆ ಗಾಯ
UV Fusion: ಇತಿಹಾಸದಲ್ಲಿ ಮರೆಯಾದ ಭೈರಾದೇವಿಯ ಸಾಮ್ರಾಜ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.