ಟೋಕಿಯೋ ಒಲಿಂಪಿಕ್ಸ್ ಪದಕಕ್ಕಾಗಿ ಬಳ್ಳಾರಿಯಲ್ಲಿ ಕ್ರೀಡಾ ಗಣಿಗಾರಿಕೆ
Team Udayavani, Jun 17, 2017, 10:46 AM IST
ಬೆಂಗಳೂರು: ಫುಟ್‌ಬಾಲ್‌ಗೆ ಪ್ರೋತ್ಸಾಹ ನೀಡುತ್ತಿರುವ ಜಿಂದಾಲ್ ಸ್ಟೀಲ್ ವರ್ಕ್ ಸಂಸ್ಥೆ (ಜೆಎಸ್‌ಡಬ್ಲ್ಯೂ) ಭಾರತದ ಕ್ರೀಡಾ ಇತಿಹಾಸದಲ್ಲೇ ಅತ್ಯಂತ ಮಹತ್ವದ ಯೋಜನೆಯೊಂದನ್ನು ರೂಪಿಸಲು ಹೊರಟಿದೆ. ಗಣಿಗಾರಿಕೆಯ ಕೇಂದ್ರ ನಗರಿ ಬಳ್ಳಾರಿಯ ತೋರಣಗಲ್ಲು ಗ್ರಾಮದಲ್ಲಿ ವಿಶ್ವದರ್ಜೆಯ ಕ್ರೀಡಾ ಅಕಾಡೆಮಿ ಸ್ಥಾಪಿಸಲು ಮುಂದಾಗಿದೆ. ಸೆಪ್ಟೆಂಬರ್ – ಅಕ್ಟೋಬರ್ ವೇಳೆಗೆ ಈ ಅಕಾಡೆಮಿ ಕಾರ್ಯಾಚರಣೆ ಶುರುವಾಗುವ ಸಾಧ್ಯತೆಯಿದೆ. ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿರುವ ಕುಸ್ತಿ ತಾರೆ ಸಾಕ್ಷಿ ಮಲಿಕ್, ಕಾಮನ್‌ವೆಲ್ತ್ ಕುಸ್ತಿಯಲ್ಲಿ ಚಿನ್ನ ಗೆದ್ದಿರುವ ಗೀತಾ ಫೊಗಾಟ್, ಬಬಿತಾ ಫೊಗಾಟ್ ಸೇರಿದಂತೆ ದೇಶದ ಖ್ಯಾತ 40 ಕ್ರೀಡಾ ತಾರೆಯರು ಈ ಅಕಾಡೆಮಿಗೆ ಪ್ರತಿಭೆಗಳನ್ನು ಶೋಧಿಸಿ ತರಲಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ಗುರಿ: ಭಾರತ ಈಗ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬಲ್ಲ ಕ್ರೀಡಾಪಟುಗಳ ಹುಡುಕಾಟದಲ್ಲಿದೆ. ಅಂತಹ ಪ್ರತಿಭೆಗಳನ್ನು ಗುರ್ತಿಸಿ ತರಬೇತಿ ನೀಡುವುದು ಜಿಂದಾಲ್ ಉದ್ದೇಶ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಹೆಚ್ಚಿನ ಪದಕ ಗೆಲ್ಲುವಂತಾಗಬೇಕು ಎನ್ನುವುದು ಈ ಕಂಪನಿಯ ಆಶಯ. ಇದು ಜಿಂದಾಲ್‌ನ ಮಹತ್ವದ ಯೋಜನೆಯಾಗಿದ್ದು, ಕೋಟ್ಯಂತರ ರೂ. ವೆಚ್ಚವಾಗಲಿದೆ. ಇದನ್ನು ಜಿಂದಾಲ್‌ನ ಉನ್ನತ ಮೂಲಗಳು ಉದಯವಾಣಿಗೆ ಖಚಿತಪಡಿಸಿವೆ.
ಅಕಾಡೆಮಿ ಎಲ್ಲಿ?: ವಿಶ್ವ ದರ್ಜೆಯ ಕ್ರೀಡಾ ಅಕಾಡೆಮಿ ಬಳ್ಳಾರಿ ನಗರದಿಂದ 41 ಕಿ.ಮೀ. ದೂರವಿರುವ ತೋರಣಗಲ್ಲು ಗ್ರಾಮದಲ್ಲಿ ತಲೆ ಎತ್ತಲಿದೆ. ಇಲ್ಲಿ ಜಿಂದಾಲ್ ಒಟ್ಟು 8 ಸಾವಿರ ಎಕರೆಗೂ ಹೆಚ್ಚು ಭೂಮಿ ಹೊಂದಿದೆ. ಇದರ ಒಂದು ಭಾಗದಲ್ಲಿ ಅಕಾಡೆಮಿ ಆರಂಭಿಸಲು ನೀಲನಕ್ಷೆ ಸಿದ್ಧವಾಗುತ್ತಿದೆ.
ಯಾವ್ಯಾವ ಕ್ರೀಡೆಗೆ ಆಧ್ಯತೆ: ಬಾಕ್ಸಿಂಗ್, ಕುಸ್ತಿ, ಜೂಡೋ, ಈಜು, ಅಥ್ಲೆಟಿಕ್ಸ್‌ನ ಟ್ರ್ಯಾಕ್ ಆ್ಯಂಡ್ ಫೀಲ್ಡ್ ವಿಭಾಗದಲ್ಲಿ ಅಥ್ಲೀಟ್‌ಗಳ ಆಯ್ಕೆ ನಡೆಯಲಿದೆ. ಒಲಿಂಪಿಕ್ಸ್‌ನಲ್ಲಿ ಪದಕ ಬರುವಂತಹ ಕ್ರೀಡೆಗಳ ಮೇಲೆ ಹೆಚ್ಚಿನ ಗಮನವನ್ನು ವಹಿಸಲಾಗಿದೆ.
ಆಯ್ಕೆ ಪ್ರಕ್ರಿಯೆ ಹೇಗೆ?: ಸಾಕ್ಷಿ ಮಲಿಕ್, ಗೀತಾ ಫೊಗಾಟ್ ಸೇರಿದಂತೆ 40ಕ್ಕೂ ಹೆಚ್ಚು ಅನುಭವಿ ಮಾಜಿ, ಹಾಲಿ ಕ್ರೀಡಾಪಟುಗಳು ವಿವಿಧ ರಾಜ್ಯದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಹಳ್ಳಿ ಹಳ್ಳಿಗಳಿಗೆ ತೆರಳಲಿದ್ದಾರೆ. ಯಾವ ಕ್ರೀಡೆ ಯಾವ ರಾಜ್ಯದಲ್ಲಿ ಹೆಚ್ಚು ಅಸ್ತಿತ್ವ ಹೊಂದಿದೆ ಎನ್ನುವುದನ್ನು ಮೊದಲಾಗಿ ತಜ್ಞರ ತಂಡ ಪಟ್ಟಿ ಮಾಡಿಕೊಳ್ಳುತ್ತದೆ. ಪ್ರತಿಭಾವಂತರ ಆಯ್ಕೆಯನ್ನು ಪಾರದರ್ಶಕವಾಗಿ ನಡೆಸಲಿದೆ.
ಅಕಾಡೆಮಿಯಲ್ಲಿರುವ ಸೌಲಭ್ಯಗಳೇನು?
ಆಯ್ದ ಕ್ರೀಡಾಪಟುಗಳಿಗೆ ಉಳಿದುಕೊಳ್ಳಲು ಇಲ್ಲಿ ಅತ್ಯಾಧುನಿಕ ಕೊಠಡಿಗಳ ವ್ಯವಸ್ಥೆ ಇರಲಿದೆ. ಒಲಿಂಪಿಕ್ಸ್‌ನಂತಹ ಕೂಟಗಳಲ್ಲಿ ಭಾಗವಹಿಸಿ ಅನುಭವವಿರುವ ನುರಿತ ತರಬೇತುದಾರರು ಲಭ್ಯರಿರಲಿದ್ದಾರೆ. ಜತೆಗೆ ವಿದೇಶಿ ಕೋಚ್‌ಗಳನ್ನು ಕರೆಸಿ ತರಬೇತಿ ನೀಡುವ ನಿಟ್ಟಿನಲ್ಲಿಯೂ ಚಿಂತನೆ ನಡೆಯುತ್ತಿದೆ. ದೈನಂದಿನ ವ್ಯಾಯಾಮಕ್ಕೆ ಮಲ್ಟಿ ಜಿಮ್, ಯಾವ ಅಹಾರವನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂದು ಮಾರ್ಗದರ್ಶನ ಮಾಡಲು ನ್ಯೂಟ್ರಿಷಿಯನ್ ಎಕ್ಸ್ ಪರ್ಟ್ ಇರುತ್ತಾರೆ. ಅಚ್ಚುಕಟ್ಟಾದ ಊಟ, ತಿಂಡಿ ವ್ಯವಸ್ಥೆ, ಕ್ರೀಡಾಪಟು ಗಳಿಗೆ ಉಚಿತ ಶಾಲಾ -ಕಾಲೇಜು ವ್ಯವಸ್ಥೆ ಇರಲಿದೆ.
ಫುಟ್ಬಾಲ್ ಅಕಾಡೆಮಿ ತರಬೇತಿ ಆರಂಭ
ತೋರಣಗಲ್ಲಿನಲ್ಲಿ ಜಿಂದಾಲ್ ಈಗಾಗಲೇ ಫುಟ್ಬಾಲ್ ಅಕಾಡೆಮಿಯನ್ನು ತೆರೆದಿದೆ. ಪ್ರತಿಭಾನ್ವೇಷಣೆಯಲ್ಲಿ ಆಯ್ಕೆಯಾದ 40ಕ್ಕೂ ಹೆಚ್ಚು ಕ್ರೀಡಾಪಟುಗಳು ಇಲ್ಲಿನ ಸೌಲಭ್ಯ ಪಡೆಯುತ್ತಿದ್ದಾರೆ. 15 ವರ್ಷ, 18 ವರ್ಷ ಹಾಗೂ 20 ವರ್ಷ ವಯೋಮಿತಿಯೊಳಗಿನ ಫುಟ್ಬಾಲ್ ಆಟಗಾರರು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರಿಗೆ ಉಚಿತ ಸೌಲಭ್ಯ ನೀಡಲಾಗುತ್ತಿದೆ. ಜಿಂದಾಲ್ ವಿದ್ಯಾಮಂದಿರದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಇಲ್ಲಿ ಎಸ್‌ಎಸ್‌ಎಲ್‌ಸಿ, ಸಿಬಿಎಸ್‌ಸಿ ಪಠ್ಯ ಬೋಧನೆ ಸೌಲಭ್ಯವಿದೆ. ಜತೆಗೆ ಕಾಲೇಜು ವ್ಯವಸ್ಥೆ ಕೂಡ ಮಾಡಲಾಗಿದೆ. ಬೆಂಗಳೂರಿನ ಪ್ರಶಾಂತ್ ಕಲ್ಲಿಂಗ, ವಿಘ್ನೇಶ್, ಶೆಲ್ಟನ್ ಪಾಪ್ ಹಾಗೂ ವಿಜಯ್ ತರಬೇತಿ ಪಡೆಯುತ್ತಿದ್ದಾರೆ.
– ಹೇಮಂತ್ ಸಂಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು
NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್ ವಿಲಿಯಮ್ಸನ್
Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ
Belagavi: ಸಿಪಿಐ ಕಿರುಕುಳ ಆರೋಪ; ಆತ್ಮಹತ್ಯೆಗೆ ಯತ್ನಿಸಿದ್ದ ಪೊಲೀಸ್ ಪೇದೆ ರಕ್ಷಣೆ
BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.