ಜೂನಿಯರ್ ವಿಶ್ವಕಪ್ ಹಾಕಿ: ಭಾರತದ ಮೊದಲ ಎದುರಾಳಿ ಫ್ರಾನ್ಸ್
Team Udayavani, Oct 21, 2021, 5:55 AM IST
ಭುವನೇಶ್ವರ: ಮತ್ತೊಂದು ಜೂನಿಯರ್ ವಿಶ್ವಕಪ್ ಹಾಕಿ ಪಂದ್ಯಾವಳಿಗೆ ಕ್ಷಣಗಣನೆ ಆರಂಭ ಗೊಂಡಿದೆ. ನ. 24ರಿಂದ ಡಿ. 5ರ ತನಕ ಭುವನೇಶ್ವರದ “ಕಳಿಂಗ ಸ್ಟೇಡಿಯಂ’ನಲ್ಲಿ ಈ ಪ್ರತಿಷ್ಠಿತ ಕೂಟ ನಡೆಯಲಿದೆ.
ಪ್ರಶಸ್ತಿ ಉಳಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿಯಲಿರುವ ಆತಿಥೇಯ ಭಾರತಕ್ಕೆ ಫ್ರಾನ್ಸ್‌ನಿಂದ ಮೊದಲ ಸವಾಲು ಎದುರಾಗಲಿದೆ (ನ. 24).
ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್ಐಎಚ್) ಬುಧ ವಾರ ಗುಂಪುಗಳನ್ನು ರಚಿಸಿ ವೇಳಾ ಪಟ್ಟಿಯನ್ನು ಪ್ರಕಟಿಸಿತು.
ಭಾರತ ತುಸು ಸುಲಭದ್ದೆನಿಸಿದ “ಬಿ’ ವಿಭಾಗದಲ್ಲಿ ಸ್ಥಾನ ಪಡೆದಿದೆ. ಇಲ್ಲಿನ ಉಳಿದ ತಂಡಗಳೆಂದರೆ ಕೆನಡಾ ಮತ್ತು ಪೋಲೆಂಡ್. “ಎ’ ವಿಭಾಗದಲ್ಲಿ ಬೆಲ್ಜಿಯಂ, ಚಿಲಿ, ಮಲೇಶ್ಯ ಮತ್ತು ದಕ್ಷಿಣ ಆಫ್ರಿಕಾ; “ಸಿ’ ವಿಭಾಗದಲ್ಲಿ ಕೊರಿಯಾ, ನೆದರ್ಲೆಂಡ್ಸ್, ಸ್ಪೇನ್ ಮತ್ತು ಯುನೈಟೆಡ್ ಸ್ಟೇಟ್ಸ್; “ಡಿ’ ವಿಭಾಗದಲ್ಲಿ ಆರ್ಜೆಂಟೀನಾ, ಈಜಿಪ್ಟ್, ಜರ್ಮನಿ ಮತ್ತು ಪಾಕಿಸ್ಥಾನ ತಂಡಗಳಿವೆ.
ಭಾರತದ ಉಳಿದ ಲೀಗ್ ಪಂದ್ಯ ಗಳು ನ. 25 (ಕೆನಡಾ) ಮತ್ತು ನ. 27ರಂದು (ಪೋಲೆಂಡ್) ನಡೆಯ ಲಿವೆ. ಡಿ. 3ರಂದು ಸೆಮಿಫೈನಲ್, ಡಿ. 5ರಂದು ಫೈನಲ್ ಏರ್ಪಡಲಿದೆ.
ಇದನ್ನೂ ಓದಿ:ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ
ಇಂಗ್ಲೆಂಡ್ ಬದಲು ಪೋಲೆಂಡ್
ಕೋವಿಡ್-19 ಕಠಿನ ಮಾರ್ಗ ಸೂಚಿಯ ಕಾರಣ ಇಂಗ್ಲೆಂಡ್ ಈ ಕೂಟದಿಂದ ಹಿಂದೆ ಸರಿದಿದೆ. ಹೀಗಾಗಿ ಪೋಲೆಂಡ್‌ಗೆ ಅವಕಾಶ ಲಭಿಸಿತು.
ವನಿತಾ ಜೂ. ವಿಶ್ವಕಪ್
ಇದೇ ವೇಳೆ ವನಿತಾ ಜೂನಿಯರ್ ವಿಶ್ವಕಪ್ ಹಾಕಿ ಪಂದ್ಯಾವಳಿಯ ವೇಳಾಪಟ್ಟಿಯನ್ನೂ ಬಿಡುಗಡೆ ಮಾಡಲಾಯಿತು. ಇದು ಡಿ. 5ರಿಂದ 16ರ ತನಕ ದಕ್ಷಿಣ ಆಫ್ರಿಕಾದ ಪೊಚೆಫ್ಸೂಮ್‌ನಲ್ಲಿ ನಡೆಯಲಿದೆ.
ಭಾರತ “ಸಿ’ ವಿಭಾಗದಲ್ಲಿದೆ. ಹಾಲಿ ಚಾಂಪಿಯನ್ ಆರ್ಜೆಂಟೀನಾ, ಜಪಾನ್ ಮತ್ತು ರಶ್ಯ ಈ ವಿಭಾಗದ ಉಳಿದ ತಂಡಗಳು. ಭಾರತ ತನ್ನ ಮೊದಲ ಪಂದ್ಯವನ್ನು ರಶ್ಯ ವಿರುದ್ಧ ಡಿ. 6ರಂದು ಆಡಲಿದೆ. ಬಳಿಕ ಆರ್ಜೆಂಟೀನಾ (ಡಿ. 7) ಮತ್ತು ಜಪಾನ್ (ಡಿ. 9) ವಿರುದ್ಧ ಸೆಣಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kadri: ಬೃಹತ್ ಗಾತ್ರದ ಚಿಟ್ಟೆ, ಜೀರುಂಡೆ !
Shimoga: ಮೊಬೈಲ್ ಕೊಡದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಕಾಲೇಜು ವಿದ್ಯಾರ್ಥಿನಿ
Pushpa 2: ಖಾಕಿಗೆ ಸವಾಲು ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.