ಸೈನಾ ಬೆದರಿಕೆಯೊಡ್ಡಿದ್ದು ತಪ್ಪು: ಜ್ವಾಲಾ ಗುಟ್ಟಾ
Team Udayavani, Apr 5, 2018, 7:05 AM IST
ಹೊಸದಿಲ್ಲಿ: ಭಾರತದ ಬ್ಯಾಡ್ಮಿಂಟನ್ ಸ್ಟಾರ್ ಡಬಲ್ಸ್ ಆಟಗಾರ್ತಿ ಜ್ವಾಲಾ ಗುಟ್ಟಾ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಸೈನಾ ನೆಹ್ವಾಲ್ಗೆ ಟ್ವಿಟರ್ ಮೂಲಕ ಟಾಂಗ್ ನೀಡಿದ್ದಾರೆ. ಕಾಮನ್ವೆಲ್ತ್ ಕ್ರೀಡಾಗ್ರಾಮಕ್ಕೆ ಪ್ರವೇಶಿಸಲು ತಂದೆಗೆ ಅವಕಾಶ ನೀಡದಿದ್ದರೆ ತಾನು ಗೇಮ್ಸ್ನಿಂದ ದೂರ ಸರಿಯಲಿದ್ದೇನೆ ಎಂದು ಸೈನಾ ಟ್ವೀಟ್ ಮಾಡಿದ್ದು ಸರಿಯಲ್ಲ ಎಂದು ಗುಟ್ಟಾ ಹೇಳಿದ್ದಾರೆ.
ಅನೇಕ ರಾಷ್ಟ್ರಗಳು ಪಾಲ್ಗೊಳ್ಳುತ್ತಿರುವ ಪ್ರತಿಷ್ಠಿತ ಪಂದ್ಯದಿಂದ ಹೊರ ನಡೆಯುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆಯೊಡ್ಡುವ ಮೂಲಕ ಸೈನಾ ನೆಹ್ವಾಲ್ ಭಾರತೀಯ ಒಲಿಂಪಿಕ್ಸ್ ಸಮಿತಿಯತ್ತ (ಐಒಎ) ಬಂದೂಕು ಗುರಿಯಿಟ್ಟಿದ್ದು ಸರಿಯಲ್ಲ. ಒಂದು ವೇಳೆ ಆಕೆಯ ಬೇಡಿಕೆ ಈಡೇರದಿದ್ದರೆ ಏನು ಮಾಡುತ್ತಿದ್ದರು? ಎಂದು ಜ್ವಾಲಾ ಟ್ವೀಟ್ನಲ್ಲಿ ಪ್ರಶ್ನಿಸಿದ್ದಾರೆ.
“ನನ್ನ ಕುಂಟುಂಬವೂ ಟಿಕೆಟ್ ವೆಚ್ಚ ಭರಿಸಿಯೂ ಯಾವಾಗಲೂ ಹೊಟೇಲ್ನಲ್ಲಿ ಉಳಿದುಕೊಳ್ಳತ್ತದೆ. ನಾವೇನು ಭರವಸೆ ನೀಡುತ್ತೇವೋ, ಯಾವುದಕ್ಕೆ ಬೇಡಿಕೆಯಿಡುತ್ತೇವೋ ಎಂದು ನನಗರ್ಥವಾಗುತ್ತಿಲ್ಲ. ಕ್ರೀಡಾಕೂಟದಲ್ಲಿ ಆಡಲಾರೆ ಎಂದಿದ್ದರು ಸರಿಯಲ್ಲ ಅಲ್ಲವೆ?’ ಎಂಬುದು ಜ್ವಾಲಾ ಗುಟ್ಟಾ ಪ್ರಶ್ನೆ.
ಈ ಮೊದಲು ಸೈನಾ, “ನನ್ನ ತಂದೆಗೆ ಗೋಲ್ಡ್ಕೋಸ್ಟ್ ಕ್ರೀಡಾಗ್ರಾಮ ಪ್ರವೇಶಿಸಲು ಅವಕಾಶ ನೀಡದಿದ್ದರೆ ನಾನು ಗೇಮ್ಸ್ನಲ್ಲಿ ಆಡಲಾರೆ…’ ಐಒಎಗೆ ಇ-ಮೇಲ್ ಮಾಡಿದ್ದರು. ಈ ಬಗ್ಗೆ ಟ್ವೀಟ್ ಮೂಲಕವೂ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಮೇಲ್ಗೆ ಸ್ಪಂದಿಸಿದ ಐಒಎ ಸಮಿತಿ ಅಧಿಕಾರಿಗಳು ಮಂಗಳವಾರ ಸಂಜೆ ಸೈನಾರ ತಂದೆ ಹರ್ವೀರ್ ಅವರಿಗೆ ಕ್ರೀಡಾ ಗ್ರಾಮಕ್ಕೆ ಪ್ರವೇಶಿಸಲು ಅವಕಾಶ ಒದಗಿಸುವ ಮೂಲಕ ಸಮಸ್ಯೆ ಬಗೆಹರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್ಸಿಬಿ ಮಾಜಿ ಆಟಗಾರ
ಕೊಹ್ಲಿ-ರೋಹಿತ್ ಬಳಿಕ ಜಡೇಜಾ ಸ್ಥಾನಕ್ಕೂ ಕುತ್ತು: ಕಠಿಣ ನಿರ್ಧಾರ ಕೈಗೊಂಡ ಬಿಸಿಸಿಐ
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
BPL;ಅಂತಿಮ ಓವರಿನಲ್ಲಿ 30 ರನ್ ಸಿಡಿಸಿದ ನುರುಲ್
MUST WATCH
ಹೊಸ ಸೇರ್ಪಡೆ
Shivamogga; ಕಾರು ಹಳ್ಳಕ್ಕೆ ಉರುಳಿ ಮೂವರಿಗೆ ಗಾಯ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.