K.S.C.A. Under-19 Cricket: ಮಂಗಳೂರು ವಲಯ ಚಾಂಪಿಯನ್
Team Udayavani, Aug 14, 2023, 11:17 PM IST
ಮಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಜರಗಿದ ಅಂಡರ್-19 ಅಂತರ್ ವಲಯ ಕ್ರಿಕೆಟ್ ಪಂದ್ಯಾಟ ದಲ್ಲಿ ಮಂಗಳೂರು ವಲಯ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಮಂಗಳೂರು ವಲಯ ತಂಡವು ಆಡಿದ ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದು 16 ಅಂಕ ಗಳಿಸಿತ್ತು.
ರಾಯಚೂರು ವಲಯವನ್ನು 4 ವಿಕೆಟ್, ಧಾರವಾಡ ವಲಯವನ್ನು 2 ವಿಕೆಟ್, ತುಮಕೂರು ವಲಯವನ್ನು 7 ವಿಕೆಟ್ ಅಂತರದಿಂದ, ಶಿವಮೊಗ್ಗ ವಲಯವನ್ನು 72 ರನ್‌ಗಳ ಅಂತರ ದಿಂದ ಸೋಲಿಸಿದರೆ, ಮೈಸೂರು ವಲಯದ ವಿರುದ್ಧ 98 ರನ್‌ಗಳ ಅಂತರದ ಸೋಲನ್ನು ಕಂಡಿತ್ತು.
ತಂಡದ ನಾಯಕ ಆಶೀಷ್ ಒಟ್ಟು 11 ವಿಕೆಟ್ ಪಡೆದು, 88 ರನ್ ಗಳಿಸಿದರು. ಜಯರಾಜ್ ಮುತ್ತು ತಂಡದ ಕೋಚ್ ಮತ್ತು ಉದಯ ಕಟಪಾಡಿ ತಂಡದ ಮೇನೇಜರ್ ಆಗಿದ್ದರು.
ತಂಡದಲ್ಲಿ ಆಶೀಷ್ ನಾಯಕ್ (ನಾಯಕ) ನಿಶ್ಚಿತ್ ಪೈ, ಪವನ್ ಮಡಿ ವಾಳ್, ನಿಖೀಲ್ ಐತಾಳ್, ರಿಷಬ್ ನಾಯಕ್, ಅಕ್ಷಯ್ ಕಾಮತ್ (ಎಲ್ಲರೂ ಉಡುಪಿ ಜಿಲ್ಲೆ), ರೋಹನ್ , ಆದಿತ್ಯ ಕೋಟ್ಯಾನ್, ವಿರಾಲ್ ಕೋಟ್ಯಾನ್, ಅಮೃತ್ ಪ್ರವೀಣ್, ಅಡೇನ್ ಮಾರ್ಕ್ ಡಿ’ಸೋಜಾ, ನಿಹಾಂಶ್, ಗಗನ್ ರಾವ್, ಪ್ರಥಮ್ (ಎಲ್ಲರೂ ದ.ಕ. ಜಿಲ್ಲೆ), ಶಾಶ್ವಿತ್ ಸೋಮಣ್ಣ (ಕೊಡಗು) ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.