ಕಿತ್ತಳೆ ನಗರಿ ನಾಗ್ಪುರವೇ ಕಬಡ್ಡಿಗೆ ಫೇವರಿಟ್
Team Udayavani, Aug 8, 2017, 1:15 PM IST
ನಾಗ್ಪುರ: ಮಹಾರಾಷ್ಟ್ರಕ್ಕೆ ನಾಗ್ಪುರ ಕಬಡ್ಡಿ ತವರೂರು ಎನ್ನುವುದು ಎಷ್ಟೋ ಜನರಿಗೆ ಗೊತ್ತೇ ಇಲ್ಲ. ವಿದರ್ಭ ಪ್ರಾಂತ್ಯದ ಒಟ್ಟು 11 ಜಿಲ್ಲೆಗಳಲ್ಲಿ ನಾಗ್ಪುರವೊಂದೇ ಕಬಡ್ಡಿಗೆ ನೀಡಿದ ಕೊಡುಗೆ ಅಪಾರ.
ಹೌದು, ಕಿತ್ತಳೆ ನಗರಿ ನಾಗ್ಪುರ ರಾಜಕೀಯವಾಗಿ ಎಷ್ಟು ಬಲಿಷ್ಠವೋ ಕಬಡ್ಡಿಯಲ್ಲೂ ಅಷ್ಟೇ ಖ್ಯಾತಿ ಹೊಂದಿದೆ. ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ
ಮಿಂಚಿದ ಅನೇಕ ಪ್ರತಿಭೆಗಳನ್ನು ನೀಡಿದೆ. ಇಲ್ಲಿನ ರಾಜಮನೆತನದ ನಾಗವಂಶಜರು ಕಬಡ್ಡಿಗೆ ನೀಡಿದ ಪ್ರೋತ್ಸಾಹದಿಂದಲೇ ಕಬಡ್ಡಿ ಇಂದು ಗಟ್ಟಿಯಾಗಿ ಬೇರೂರಿದೆ. ಪ್ರಸ್ತುತ ಪ್ರೊಕಬಡ್ಡಿ ಬೆಂಗಳೂರು ತಂಡದ ಚರಣ ನಾಗ್ಪುರದಲ್ಲಿ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ನಾಗ್ಪುರದಲ್ಲಿ ಕಬಡ್ಡಿಗೆ ನೀಡಿದ ಕೊಡುಗೆ, ರಾಜವಂಶಜರ ಪಾಲು, ಕಬಡ್ಡಿ ಬೆಳೆದು ಬಂದ ಹಾದಿ. ಇಲ್ಲಿನ ಕಬಡ್ಡಿ ಸಾಧಕರ ಬಗ್ಗೆ ನಾಗ್ಪುರ ಜಿಲ್ಲಾ ಅಮೆಚೂರು ಕಬಡ್ಡಿ ಸಂಸ್ಥೆ ಕಾರ್ಯದರ್ಶಿ ಸುನೀಲ್ ಚಿಂತಲವಾರ ಮಾಹಿತಿ ನೀಡಿದ್ದಾರೆ. ಅವರ ಜತೆಗೆ ಉದಯವಾಣಿ ನಡೆಸಿದ ಸಂದರ್ಶನದ ಪೂರ್ಣ ಸಾರಾಂಶ ಇಲ್ಲಿದೆ.
ಒಂದೇ ನಗರದಲ್ಲಿ 120 ಕಬಡ್ಡಿ ಕ್ಲಬ್: ಇಲ್ಲಿನ ಕಬಡ್ಡಿ ಜನಪ್ರಿಯತೆ ಎಷ್ಟಿದೆ ಎನ್ನುವುದಕ್ಕೆ ಇದೊಂದು ಪ್ರತ್ಯಕ್ಷ ಸಾಕ್ಷಿ. ಒಂದೇ ನಗರದಲ್ಲಿ ಇಲಾಖೆಗಳು
ಹಾಗೂ ಕ್ಲಬ್ ತಂಡಗಳು ಸೇರಿ ಸುಮಾರು 120 ತಂಡಗಳು ಸಕ್ರಿಯವಾಗಿವೆ. ಮಹಿಳೆಯರ ಸುಮಾರು 20 ತಂಡಗಳ ಪ್ರತಿಭೆ ಗುರುಗಿಸಿ ಬೆಳೆ
ಸುವ ಕಾರ್ಯ ನಡೆಯುತ್ತಿದೆ ಎಂದು ಸುನೀಲ್ ಚಿಂತಲವಾರ ಹೇಳಿದರು.
ಪ್ರೊಕಬಡ್ಡಿಗೂ ವಿಸ್ತರಿಸಿದ ಕೊಡುಗೆ:
ನಾಗಪುರದವರಾದ ಶುಭಂ ಪಾಲ್ಕರ, ಶಶಾಂಕ ವಾಂಖೆಡೆ, ಸಾರಂಗ್ ದೇಶಮುಖ್ ಪ್ರೋಕಬಡ್ಡಿ 5ನೇ ಆವೃತ್ತಿಯಲ್ಲಿ ವಿವಿಧ ತಂಡಗಳನ್ನು
ಪ್ರತಿನಿಧಿಸುತ್ತಿದ್ದಾರೆ. ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾದ ಡಾ| ಅನಿಲ್ ಭೂತೆ ಛತ್ರಪತಿ ಪ್ರಶಸ್ತಿ ಪುರಸ್ಕೃತ ಕಬಡ್ಡಿ ಪಟು. ಅರ್ಜುನ ಪ್ರಶಸ್ತಿ ವಿಜೇತೆ ಅನಿತಾ ದಳವೆ ಭಾರತ ಮಹಿಳಾ ಕಬಡ್ಡಿ ತಂಡವನ್ನು ಪ್ರತಿನಿಧಿಸಿದ್ದಾರೆ. ಶರತ್ ನೇವಾರೆ ಪುರುಷರ ರಾಷ್ಟ್ರೀಯ ತಂಡದ ಪರ ಆಡಿದ್ದಾರೆ. ಇಲ್ಲಿಯವರೇ ಆದ ದೇವಿ ಸರ್ವರೆ ಕೂಡ ಕಬಡ್ಡಿಯಲ್ಲಿ ಅಮೋಘ ಸಾಧನೆ ಮಾಡಿದ್ದಾರೆ ಎನ್ನುವುದು ಸುನೀಲ್ ಅವರ ಮಾತು.
ಸ್ವತಃ ಕಬಡ್ಡಿ ಆಡುತ್ತಿದ್ದ ರಾಜ ಮನೆತನದ ಸಚಿವ:
50 ವರ್ಷಗಳ ಹಿಂದೆಯೇ ಸಚಿವರಾಗಿ ಕಾರ್ಯನಿರ್ವಹಿಸಿದ, ಇಲ್ಲಿನ ನಾಗವಂಶಜ ರಾಜಮನೆತನದ ಭಾವು ಸಾಹೇಬ್ ಸುರ್ವೆ ಒಬ್ಬ ಆದ್ಭುತ ಕಬಡ್ಡಿ ಪಟುವಾಗಿದ್ದರು. ಅವರು ಈ ಭಾಗದಲ್ಲಿ ಕಬಡ್ಡಿ ಬೆಳೆಸಲು ಮಹತ್ವದ ಕೊಡುಗೆ ನೀಡಿದರು. ಹಲವಾರು ಕೂಟಗಳನ್ನು ಆಯೋಜಿಸಿದ್ದರು ಎನ್ನುವ ಇತಿಹಾಸ ನಮ್ಮ ಮುಂದಿದೆ ಎಂದು ಸುನೀಲ್ ತಿಳಿಸಿದರು.
ರಾಜಮನೆತನದಿಂದ ಹಳ್ಳಿ ಹಳ್ಳಿಗಳಲ್ಲಿ ಕೂಟ:
ಇವರಿಗೂ ಮೊದಲಿದ್ದ ರಾಜಮನೆತನದ ಹಲವು ಆಡಳಿತಗಾರರು ಕೂಡ ಕಬಡ್ಡಿಗೆ ಪ್ರೋತ್ಸಾಹ ನೀಡುತ್ತಿದ್ದರು. ನಾಗ್ಪುರದ ಸುತ್ತಮುತ್ತಲಿನ
ಹಳ್ಳಿ ಹಳ್ಳಿಗಳಲ್ಲಿ ಕೂಟವನ್ನು ಆಯೋಜಿಸಿದ್ದರು. ವಿಜೇ ತರಿಗೆ ಅಂದು ದವಸ ಧಾನ್ಯಗಳನ್ನು ಬಹುಮಾನದ ರೂಪದಲ್ಲಿ ನೀಡಲಾಗುತ್ತಿದೆ. ಅಷ್ಟೇ
ಅಲ್ಲ ವಿಜೇತರಿಗೆ ಬೆಳ್ಳಿ ಖಡ್ಗವನ್ನು ನೀಡಲಾಗುತ್ತಿತ್ತು. ಹತ್ತೂರಿನ ಜನ ಒಂದೇ ಕಡೆ ಸೇರಿ ಅದ್ದೂರಿಯಾಗಿ ಕೂಟ ಆಯೋ ಜಿಸುತ್ತಿದ್ದರು. ಸ್ವತಃ ರಾಜ
ಮನೆತನಗಳ ಉಸ್ತುವಾರಿಯಲ್ಲಿ ನಡೆಯುತ್ತಿತ್ತು. ಇದರಿಂದಾಗಿ ಇಲ್ಲಿನ ಮಣ್ಣಿನ ಪ್ರತಿ ಕಣಕಣದಲ್ಲೂ ಕಬಡ್ಡಿ ಇದೆ ಎನ್ನಬಹುದು ಎಂದು ಸುನೀಲ್
ಹೇಳುತ್ತಾರೆ.
70ರ ದಶಕದಲ್ಲಿ ಮಿಂಚಿದ್ದ ರೈಡರ್ ಪ್ಯಾರೆಲಾಲ್:
ಪ್ಯಾರೆಲಾಲ್ ಈ ಒಂದು ಹೆಸರು 1970ರ ದೇಶದ ಕಬಡ್ಡಿಯಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಅವರು ಪವಾರ ಕಾಲಾ ತೂಫಾನ್ (ಕಪ್ಪು ಬಿರುಗಾಳಿ)
ಎಂದೇ ಪ್ರಸಿದ್ಧಿ ಪಡೆದವರು. 70ರ ದಶಕದಲ್ಲಿ ಕಬಡ್ಡಿ ಯಲ್ಲಿ ಕ್ರಾಂತಿ ಎಬ್ಬಿಸಿದರು. ಭಾರತೀಯ ತಂಡ ಪ್ರತಿನಿಧಿಸಿ ಆಮೋಘ ಪ್ರದರ್ಶನ ನೀಡಿದ ರೈಡರ್. ಒಮ್ಮೆ ಟೀಮ್ ಇಂಡಿಯಾದ ಆಟಗಾರರನ್ನೆಲ್ಲ ಅಂಗಣದಲ್ಲಿ ರಕ್ಷಣಾ ಪಡೆಯಲ್ಲಿ ನಿಲ್ಲಿಸಿ, ಎಲ್ಲರನ್ನೂ ಆಲೌಟ್ ಮಾಡಿ ಕಬಡ್ಡಿ ವಲಯದಲ್ಲೇ ವಿಸ್ಮಯ ಮೂಡಿಸಿದ್ದರು. ಅವರ ಪ್ರದರ್ಶನದಿಂದಾಗಿಯೇ ಈ ಭಾಗದಲ್ಲಿ ಅನೇಕ ಯುವಕರು ಕಬಡ್ಡಿಯತ್ತ ಆಕರ್ಷಿತರಾದರು. ಇಂಥ ಅಮೋಘ ಆಟಗಾರ ಪ್ಯಾರೆಲಾಲ್ ಪವಾರ ಕುರಿತು ಹಿರಿಯ ಮರಾಠಿ ಸಾಹಿತಿ ಪು.ಲ.ದೇಶಪಾಂಡೆ “ಕಾಲಾ ತೂಫಾನ್’ ಎಂಬ ಪುಸ್ತಕವನ್ನೇ ಬರೆದರು. ಇದು ಕಬಡ್ಡಿ ಕುರಿತ ಸಾಹಿತ್ಯದಲ್ಲಿ ಹೆಚ್ಚು ಬಿಕರಿಗೊಂಡ ಕೃತಿಯೆನಿಸಿತು.
ಡಿಸೆಂಬರ್‌ನಲ್ಲಿ ಸಚಿವ ಗಡ್ಕರಿ ನೇತೃತ್ವದಲ್ಲಿ ಕಬಡ್ಡಿ ಆಯೋಜನೆ ಹಲವಾರು ಕಬಡ್ಡಿ ಪಟುಗಳು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಕೆಲ ಪ್ರತಿಭಾವಂತ ಪಟುಗಳು ನಿರುದ್ಯೋಗಿಗಳಾಗಿದ್ದಾರೆ. ಕಬಡ್ಡಿ ಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರೋಕಬಡ್ಡಿ ಮಾದರಿಯಲ್ಲಿ 2017ರ ಡಿಸೆಂಬರ್‌ನಲ್ಲಿ ನಾಗಪುರದಲ್ಲಿ ಕಬಡ್ಡಿ ಟೂರ್ನಿ ಆಯೋಜಿಸಲು ನಿರ್ಧರಿಸಲಾಗಿದೆ. ಪ್ರೊ ಕಬಡ್ಡಿಯಿಂದ ಸ್ಫೂರ್ತಿ ಪಡೆದು ಟೂರ್ನಿ ಸಂಘಟಿಸಲಾಗುತ್ತಿದೆ. ಇದರಲ್ಲಿ ವಿದರ್ಭದ 8 ಪುರುಷರ ತಂಡಗಳು ಹಾಗೂ 4 ಮಹಿಳಾ ತಂಡಗಳು ಪಾಲ್ಗೊಳ್ಳಲಿವೆ. ಇದು ಹೊರಾಂಗಣ ಟೂರ್ನಿಯಾಗಿರುವುದು. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತೀನ್ ಗಡ್ಕರಿ ಅಧ್ಯಕ್ಷತೆಯಲ್ಲಿ ಟೂರ್ನಿ ಸಮಿತಿ ರಚನೆ ಮಾಡಲಾಗಿದೆ ಎಂದು ಸುನೀಲ್ ಹೇಳಿದ್ದಾರೆ.
ವಿಶ್ವನಾಥ ಕೋಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress ಸರಕಾರ 2018 ರಲ್ಲಿ ಜಿ.ಟಿ.ದೇವೇಗೌಡರನ್ನು ಬಂಧಿಸಲು ಮುಂದಾಗಿತ್ತು: ರೇವಣ್ಣ ಬಾಂಬ್
Simple Life: ಬದುಕು ನಿರಾಡಂಬರವಾಗಿರಲಿ
Mangaluru: Spam Call ಪತ್ತೆಗೆ ಎಐ ತಂತ್ರಜ್ಞಾನ ಬಳಕೆ… ಏರ್‌ಟೆಲ್ ನಿಂದ ಹೊಸ ವ್ಯವಸ್ಥೆ
BBK11: ಮಂಜುಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು
Tragedy: ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 5ವೈದ್ಯರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.