ಇಂದಿನಿಂದ ದುಬೈ ಕಬಡ್ಡಿ ಲೀಗ್:ಭಾರತ-ಪಾಕ್ ನಡುವೆ ಉದ್ಘಾಟನಾ ಪಂದ್ಯ
Team Udayavani, Jun 22, 2018, 11:15 AM IST
ದುಬೈ: ಭಾರತ ಸೇರಿದಂತೆ 6 ತಂಡಗಳ ನಡುವಿನ, 9 ದಿನಗಳ ದುಬೈ ಪ್ರೀಮಿಯರ್ ಅಂತಾರಾಷ್ಟ್ರೀಯ ಕಬಡ್ಡಿ ಟೂರ್ನಿ ಶುಕ್ರವಾರದಿಂದ ದುಬೈನಲ್ಲಿ ಆರಂಭವಾಗಲಿದೆ. ಭಾರತ ಮತ್ತು ಪಾಕಿಸ್ತಾನ ಒಂದೇ ಬಣ (“ಎ’) ದಲ್ಲಿದ್ದು ಶುಕ್ರವಾರದ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖೀಯಾಗುತ್ತಿವೆ.
ಭಾಗವಹಿಸುತ್ತಿರುವ ರಾಷ್ಟ್ರಗಳು: ಭಾರತ, ಇರಾನ್, ಪಾಕಿಸ್ತಾನ, ರಿಪಬ್ಲಿಕ್ ಆಫ್ ಕೊರಿಯಾ, ಕೀನ್ಯಾ ಮತ್ತು ಅರ್ಜೆಂಟೀನಾ ತಂಡಗಳು ಪಾಲ್ಗೊಳ್ಳುತ್ತಿವೆ.
ಪ್ರೊಕಬಡ್ಡಿ ಮಾದರಿಯ ನಿಯಮಗಳೇ ಈ ಲೀಗ್‌ಗೂ ಅನ್ವಯವಾಗಲಿದೆ. “ಎ’ ವಿಭಾಗದ ಭಾರತ ಪಾಕ್ ಮತ್ತು ಕೀನ್ಯಾ ತಂಡಗಳಿವೆ. “ಬಿ’ ವಿಭಾಗದಲ್ಲಿ ಇರಾನ್, ರಿಪಬ್ಲಿಕ್ ಆಫ್ ಕೊರಿಯಾ ಮತ್ತು ಅರ್ಜೆಂಟೀನಾ ತಂಡಗಳು ಸ್ಥಾನ ಪಡೆದಿವೆ. ಲೀಗ್ ಹಂತದಲ್ಲಿ ಪ್ರತಿಯೊಂದು ತಂಡ ಉಳಿದೆರಡು ತಂಡಗಳ ವಿರುದ್ಧ 2 ಪಂದ್ಯಗಳನ್ನು ಆಡಲಿದೆ. ಅತ್ಯಧಿಕ ಅಂಕ ಸಂಪಾದಿಸಿದ ಪ್ರತಿ ವಿಭಾಗದ 2 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಜೂ.30ರಂದು ಪ್ರಶಸ್ತಿ ಸಮರ ನಡೆಯಲಿದೆ.
ಭಾರತದ ಪಂದ್ಯಗಳು: ಪಾಕಿಸ್ತಾನ ವಿರುದ್ಧ ಜೂ. 22 (ರಾತ್ರಿ 8.00) ಮತ್ತು ಜೂ. 25 (ರಾತ್ರಿ 9.00), ಕೀನ್ಯಾ ವಿರುದ್ಧ ಜೂ. 23 (ರಾತ್ರಿ 9.00) ಮತ್ತು ಜೂ. 26 (ರಾತ್ರಿ 9.00).
ಭಾರತ ತಂಡ: ಅಜಯ್ ಠಾಕೂರ್ (ನಾಯಕ),ಮಂಜಿತ್ ಚಿಲ್ಲರ್, ಗಿರೀಶ್ ಮಾರುತಿ, ಎರ್ನಾಕ್,ಸುರ್ಜಿತ್, ರಾಜುಲಾಲ್ ಚೌಧರಿ, ಸುರೇಂದರ್ ನಾಡ,ಮೋಹಿತ್ ಚಿಲ್ಲರ್, ದೀಪಕ್ ನಿವಾಸ್ ಹೂಡ, ಸಂದೀಪ್ ನರ್ವಾಲ್, ಪ್ರದೀಪ್ ನರ್ವಾಲ್, ರೋಹಿತ್ ಕುಮಾರ್, ರಿಷಾಂಕ್ ದೇವಾಡಿಗ, ರಾಹುಲ್ ಚೌಧರಿ, ಮೋನು ಗೋಯತ್.
ನೇರ ಪ್ರಸಾರ: ಸ್ಟಾರ್ ಸ್ಫೋರ್ಟ್ಸ್ 2
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.