ರಾಹುಲ್‌ ಚೌಧರಿ ಎಂಬ ಕಬಡ್ಡಿ ಹುಲಿ!

Team Udayavani, Aug 16, 2017, 10:57 AM IST

11-SPORTS-4.jpg

ರಾಹುಲ್‌ ಚೌಧರಿ!
ಕಬಡ್ಡಿ ಪ್ರೇಮಿಗಳ ಪರಿಚಿತ ಮುಖ. ಕಬಡ್ಡಿ ಕಲಿಯುತ್ತಿರುವ ಎಷ್ಟೋ ಕ್ರೀಡಾಪಟುಗಳಿಗೆ ಸ್ಫೂರ್ತಿಯ ಸೆಲೆ. ಉತ್ತರ ಪ್ರದೇಶದ ಜಾಟ್‌ ಸಮುದಾಯದಲ್ಲಿ ಜನನ. 24ರ ಯುವಕ…

ರಾಹುಲ್‌ ಮೊದಲ ಬಾರಿಗೆ ಕಬಡ್ಡಿ ಆಡಲು ಆರಂಭಿಸಿದ್ದು ಪ್ರಾಥಮಿಕ ಶಾಲಾ ದಿನಗಳಲ್ಲಿ. ರಾಹುಲ್‌ನ ಅಣ್ಣ ಕೂಡ ಕಬಡ್ಡಿ ಆಟಗಾರನಾಗಿದ್ದ. ಹೀಗಾಗಿ ರಾಜ್ಯದ ವಿವಿಧೆಡೆ ನಡೆಯುವ ಕಬಡ್ಡಿ ಟೂರ್ನಿಗಳಿಗೆ ಅಣ್ಣನ ಜತೆ ರಾಹುಲ್‌ ತೆರಳುತ್ತಿದ್ದ. ಅಣ್ಣ ಆಡುವ ತಂಡದಲ್ಲಿ ಯಾರಾದರೂ ಗಾಯಗೊಂಡರೆ ತನಗೂ ಅವಕಾಶ ಸಿಗುತ್ತದೆ ಎನ್ನುವ ಆಶಾಮನೋಭಾವ ರಾಹುಲ್‌ನದ್ದಾಗಿತ್ತು. ಅಂತೂ ಕೆಲವು ಬಾರಿ ತನ್ನ ಅಣ್ಣ ಆಡುವ ತಂಡದಲ್ಲಿ ಅವಕಾಶ ಪಡೆದೇ ಬಿಟ್ಟ. ಇದು ಚೌಧರಿಯ ಜೀವನದ ದಿಕ್ಕನ್ನೇ ಬದಲಿಸಿತು.

ಮಗ ಹಾಳಾಗುತ್ತಾನೆ ಎಂಬ ಭಯ
ರಾಹುಲ್‌ ಚೌಧರಿ ಕಬಡ್ಡಿ ಆಡುವುದು ಅವರ ಕುಟುಂಬದಲ್ಲಿ ಯಾರಿಗೂ ಇಷ್ಟವಿರಲಿಲ್ಲ. ಮಗ ಕಬಡ್ಡಿ ಆಡುತ್ತ ಸಮಯ ಕಳೆಯುತ್ತಾನೆ, ವಿದ್ಯಾಭ್ಯಾಸದ ಕಡೆ ದೃಷ್ಟಿ ಹರಿಸುವುದಿಲ್ಲ, ಇದರಿಂದ ಹಾಳಾಗಿ ಹೋಗುತ್ತಾನೆ ಅನ್ನುವ ಆತಂಕ ರಾಹುಲ್‌ ಅವರ ಅಪ್ಪ, ಅಮ್ಮನದ್ದಾಗಿತ್ತು. ಹೀಗಾಗಿ ತಂದೆ, ತಾಯಿ ಕಣ್ಣು ತಪ್ಪಿಸಿ ಕಬಡ್ಡಿ ಪಂದ್ಯಗಲ್ಲಿ ಆಡಲು ತೆರಳಿದ ದೃಷ್ಟಾಂತವಿದೆ. ಚಿಕ್ಕಪುಟ್ಟ ಗಾಯ ಮಾಡಿಕೊಂಡರೂ ಅದು ಮನೆಯವರಿಗೆ ತಿಳಿಯದಂತೆ ನಿಭಾಯಿಸಿದ ಘಟನೆಗಳೂ ನಡೆದಿವೆ. ಆದರೂ ಚೌಧರಿಗೆ ಕಬಡ್ಡಿ ಮೇಲಿನ ಪ್ರೀತಿ ಬಿಡಲಿಲ್ಲ. ಇಂಥದೊಂದು ಪ್ರೀತಿ, ಛಲವೇ ಇಂದು ಚೌಧರಿಯನ್ನು ಕಬಡ್ಡಿಯಲ್ಲಿ ಘರ್ಜಿಸುವ ಹುಲಿಯಾಗಿ ರೂಪಿಸಿದೆ. ಇಂದು ಅವರ ತಂದೆ, ತಾಯಿ ಮಗನ ಸಾಧನೆಗೆ ಖುಷಿ ಪಡುತ್ತಿದ್ದಾರೆ. ಮಗ ಆಡುತ್ತಿರುವ ಪ್ರೊ  . ಕಬಡ್ಡಿ ಪಂದ್ಯವನ್ನು ತಪ್ಪದೇ ನೋಡುತ್ತಾರೆ!

ಪ್ರೊ ಕಬಡ್ಡಿಯಲ್ಲಿ  ಘರ್ಜನೆ
ಕಬಡ್ಡಿಯ ಎಷ್ಟೋ ಪ್ರತಿಭೆಗಳು ಹೊರ ಬಂದಿರುವುದೇ ಪ್ರೊ ಕಬಡ್ಡಿಯಲ್ಲಿ. ಅದೇ ರೀತಿ ರಾಹುಲ್‌ ಚೌಧರಿ ಎಂಬ ಪ್ರತಿಭೆಯನ್ನು ಪರಿಚಯಿಸಿದ್ದು ಕೂಡ ಪ್ರೊ ಕಬಡ್ಡಿ ಕೂಟ. ಚೌಧರಿ ಎದುರಾಳಿ ಅಂಕಣಕ್ಕೆ ನುಗ್ಗಿ ಹುಲಿಯಂತೆ ಘರ್ಜಿಸುತ್ತಾನೆ. ರಕ್ಷಣಾ ಬಲೆಯಿಂದ ತಪ್ಪಿಸಿಕೊಳ್ಳಲು ಜಿಂಕೆ ಮರಿಯಂತೆ ಜಿಗಿಯುತ್ತಾನೆ. ಎದುರಾಳಿಯನ್ನು ಟಚ್‌ ಮಾಡಿ ಚಿರತೆಯ ವೇಗದಲ್ಲಿ ಪುನಃ ತನ್ನ ಕೋರ್ಟ್‌ಗೆ ಮರಳುತ್ತಾನೆ. ಹೀಗಾಗಿ ಯಾವುದೇ ತಂಡದ ಅಭಿಮಾನಿಯಾಗಿದ್ದರೂ ಚೌಧರಿ ರೈಡಿಂಗ್‌ ಎಂದರೆ ಹಬ್ಬ ಮಾಡುತ್ತಾರೆ. ಪ್ರೇಕ್ಷಕರ ಗ್ಯಾಲರಿಯಲ್ಲಿಯೇ ಕುಣಿದು ಕುಪ್ಪಳಿಸುತ್ತಾರೆ. ಆತ ರೈಡಿಂಗ್‌ಗೆ ಹೋದ ಎಂದರೆ ಎದುರಾಳಿಯಿಂದ ಅಂಕ ಬಂತು ಎಂದೇ ತೀರ್ಮಾನ. ಎಲ್ಲಿಯೂ ಅಪರೂಪಕ್ಕೊಮ್ಮೆ ಮಾತ್ರ ಕ್ಷೇತ್ರ ರಕ್ಷಣೆಯ ಬಲೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ.  ಅಂದಹಾಗೆ ಚೌಧರಿ ಈ ಬಾರಿ ತೆಲುಗು ಟೈಟಾನ್ಸ್‌ ತಂಡದ ಸಾರಥಿ. ತಂಡ ತವರಿನಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿದೆ. ಈ ಆತಂಕವನ್ನು ಹೋಗಲಾಡಿಸಿ ತಂಡವನ್ನು ಮೇಲೆತ್ತಿ ಮುನ್ನಡೆಸುವ ಮಹತ್ವದ ಜವಾಬ್ದಾರಿ ರಾಹುಲ್‌ ಮೇಲಿದೆ.

ರೈಡಿಂಗ್‌ನಲ್ಲಿ  500 ಅಂಕ
ರಾಹುಲ್‌ ಚೌಧರಿ ಕಬಡ್ಡಿಯಲ್ಲಿ ಮೊದಲ ಬಾರಿಗೆ ವೃತ್ತಿ ಜೀವನ ಆರಂಭಿಸಿದ್ದು ರಕ್ಷಣಾ ಆಟಗಾರನಾಗಿ. ಆದರೆ ಅನಂತರ ರೈಡರ್‌ ಆಗಿ ಬದಲಾದರು. ಇದು ಚೌಧರಿಯ ಕೈ ಹಿಡಿದಿದೆ. ಪ್ರೊ ಕಬಡ್ಡಿಯ ಪಂದ್ಯಗಳಲ್ಲಿ ರೈಡಿಂಗ್‌ನಲ್ಲಿ 500 ಅಂಕಗಳ ಗಡಿ ದಾಟಿದ್ದಾರೆ. ಈ ಸಾಧನೆ ಮಾಡಿದ ಮೊದಲ ಮತ್ತು ಏಕೈಕ ಆಟಗಾರ ಎಂಬ ಇತಿಹಾಸ ನಿರ್ಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರದೀಪ್‌ ನರ್ವಾಲ್‌, ಅನೂಪ್‌ ಕುಮಾರ್‌, ದೀಪಕ್‌ ಹೂಡಾ, ಅಜಯ್‌ ಠಾಕೂರ್‌, ಜಸ್ವೀರ್‌ ಸಿಂಗ್‌… ಇವರೆಲ್ಲರಿಗಿಂತ ಚೌಧರಿಯೇ ಒಂದು ಕೈ ಮೇಲಾಗಿ ಕಾಣುತ್ತಾರೆ.

 ಮಂಜು ಮಳಗುಳಿ

ಟಾಪ್ ನ್ಯೂಸ್

Google Map: ಗೂಗಲ್‌ ಮ್ಯಾಪ್‌ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು

Google Map: ಗೂಗಲ್‌ ಮ್ಯಾಪ್‌ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್‌ ಆಟ

Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್‌ ಆಟ

Sam Konstas: ಇದೇ ಪರಿಸ್ಥಿತಿ ಮರುಕಳಿಸಿದರೆ ಸುಮ್ಮನಿರುವೆ

Sam Konstas: ಇದೇ ಪರಿಸ್ಥಿತಿ ಮರುಕಳಿಸಿದರೆ ಸುಮ್ಮನಿರುವೆ

ICC ಚಾಂಪಿಯನ್ಸ್‌ ಟ್ರೋಫಿ ಪಾಕ್‌ ಕ್ರೀಡಾಂಗಣಗಳೇ ಸಜ್ಜಾಗಿಲ್ಲ !

ICC ಚಾಂಪಿಯನ್ಸ್‌ ಟ್ರೋಫಿ ಪಾಕ್‌ ಕ್ರೀಡಾಂಗಣಗಳೇ ಸಜ್ಜಾಗಿಲ್ಲ !

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

ICC Bowling Ranking: ಐಸಿಸಿ ಬೌಲಿಂಗ್‌ ರ್‍ಯಾಂಕಿಂಗ್‌… ಬುಮ್ರಾ ಅಗ್ರಸ್ಥಾನ ಗಟ್ಟಿ

ICC Bowling Ranking: ಐಸಿಸಿ ಬೌಲಿಂಗ್‌ ರ್‍ಯಾಂಕಿಂಗ್‌… ಬುಮ್ರಾ ಅಗ್ರಸ್ಥಾನ ಗಟ್ಟಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Google Map: ಗೂಗಲ್‌ ಮ್ಯಾಪ್‌ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು

Google Map: ಗೂಗಲ್‌ ಮ್ಯಾಪ್‌ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.