ಕಾಗಿಸೊ ರಬಾಡ ನಂ.1 ಏಕದಿನ ಬೌಲರ್
Team Udayavani, May 31, 2017, 11:00 AM IST
ದುಬಾೖ: ದಕ್ಷಿಣ ಆಫ್ರಿಕಾದ ವೇಗಿ ಕಾಗಿಸೊ ರಬಾಡ ಏಕದಿನ ಕ್ರಿಕೆಟಿನ ನಂಬರ್ ವನ್ ಬೌಲರ್ ಎಂಬ ಹೆಗ್ಗಳಿಕೆ ಯೊಂದಿಗೆ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯನ್ನು ಆರಂಭಿಸಲಿದ್ದಾರೆ.
ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ಎದುರಿನ ಅಂತಿಮ ಏಕದಿನ ಪಂದ್ಯದಲ್ಲಿ 39ಕ್ಕೆ 4 ವಿಕೆಟ್ ಹಾರಿಸುವ ಮೂಲಕ ಅವರು ಒಮ್ಮೆಲೇ 4 ಸ್ಥಾನಗಳ ನೆಗೆತ ಕಂಡರು. ತಮ್ಮದೇ ದೇಶದ ಇಮ್ರಾನ್ ತಾಹಿರ್ ಅವರನ್ನು ದ್ವಿತೀಯ ಸ್ಥಾನಕ್ಕೆ ತಳ್ಳಿದರು.22ರ ಹರೆಯದ ರಬಾಡ ಮೊದಲ ಬಾರಿಗೆ ಏಕದಿನದ ಅಗ್ರಮಾನ್ಯ ಬೌಲರ್ ಆಗಿ ಮೂಡಿಬಂದಿರುವುದು ಉಲ್ಲೇ ಖನೀಯ. ಅವರು ಈ ಸ್ಥಾನ ಅಲಂಕ ರಿಸಿದ 2ನೇ ಕಿರಿಯ ಬೌಲರ್ ಕೂಡ ಹೌದು. 1988ರಷ್ಟು ಹಿಂದೆ ಪಾಕಿಸ್ಥಾನದ ಸಕ್ಲೇನ್ ಮುಷ್ತಾಕ್ 21ರ ಹರೆಯದಲ್ಲಿ ನಂ.1 ಎನಿಸಿದ್ದು ದಾಖಲೆ.
ಇಂಗ್ಲೆಂಡ್ ಸರಣಿಯಲ್ಲಿ 7 ವಿಕೆಟ್ ಕಿತ್ತ ರಬಾಡ ಲಾರ್ಡ್ಸ್‌ನಲ್ಲಿ ಪಂದ್ಯಶ್ರೇಷ್ಠರಾಗಿದ್ದರು. ಏಕದಿನ ಬ್ಯಾಟಿಂಗ್ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಅಲ್ಲದೇ ದಕ್ಷಿಣ ಆಫ್ರಿಕಾ ನಂ.1 ಏಕದಿನ ತಂಡವೂ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Asian hockey champions: ದಕ್ಷಿಣ ಕೊರಿಯಾವನ್ನು ಕೆಡವಿದ ಭಾರತ
ATP Rankings; ಸಿನ್ನರ್‌ಗೆ ವರ್ಷಾಂತ್ಯದ ನಂ.1 ರ್‍ಯಾಂಕ್ ಟ್ರೋಫಿ
ICC: ಪಾಕಿಸ್ತಾನದ ಕೈತಪ್ಪಿದ ಚಾಂಪಿಯನ್ಸ್ ಟ್ರೋಫಿ ಆಯೋಜನೆ: ಬದಲಿ ದೇಶದ ಆಯ್ಕೆ
Shami: ಕೊನೆಗೂ ವೃತ್ತಿಪರ ಕ್ರಿಕೆಟ್ ಗೆ ಮರಳಿದ ಮೊಹಮ್ಮದ್ ಶಮಿ
Japan: ಇಂದಿನಿಂದ ಕುಮಮೋಟೊ ಓಪನ್: ಸಿಂಧು, ಲಕ್ಷ್ಯ ಮೇಲೆ ಹೆಚ್ಚಿನ ನಿರೀಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.