ಕನ್ನಡಿಗ ಕ್ರಿಕೆಟಿಗ ದ್ರಾವಿಡ್‌ಗೆ 44ನೇ ಹುಟ್ಟುಹಬ್ಬ ಸಂಭ್ರಮ
Team Udayavani, Jan 12, 2017, 3:45 AM IST
ಬೆಂಗಳೂರು: ಖ್ಯಾತ ಮಾಜಿ ಕ್ರಿಕೆಟಿಗ, “ದಿ ವಾಲ್’ ಖ್ಯಾತಿಯ ಕನ್ನಡಿಗ ರಾಹುಲ್ ದ್ರಾವಿಡ್ ಬುಧವಾರ ಸಂಭ್ರಮದಿಂದ 44ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಹಾಲಿ ಮತ್ತು ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಸಾಮಾಜಿಕ ಜಾಲತಾಣ ಟ್ವೀಟರ್‌ನಲ್ಲಿ ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ.
ವೀರೇಂದ್ರ ಸೆಹವಾಗ್, ಗೌತಮ್ ಗಂಭೀರ್, ಮೊಹಮ್ಮದ್ ಕೈಫ್, ಕ್ರೀಡಾ ಸಚಿವ ವಿಜಯ್ ಗೋಯಲ್ ಸೇರಿದಂತೆ ಹಲವರು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. 1973 ಜನವರಿ 11 ರಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನಿಸಿದ ದ್ರಾವಿಡ್ ಅನಂತರ ಬೆಂಗಳೂರಿನಲ್ಲಿ ಶಿಕ್ಷಣ ಪಡೆದಿದ್ದಾರೆ. ಜತೆಗೆ ಕರ್ನಾಟಕ ದಲ್ಲಿಯೇ ಬಾಲ್ಯ ಜೀವನ, ಕ್ರಿಕೆಟ್‌ಗೆ
ಪಾದಾರ್ಪಣೆ ಮಾಡಿದ್ದು, ಕನ್ನಡಿಗ ಎಂದೇ ಗುರುತಿಸಿಕೊಂಡಿದ್ದಾರೆ. ರಾಹುಲ್ ದ್ರಾವಿಡ್ ಭಾರತ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಆಗಿ ಗುರುತಿಸಿ ಕೊಂಡಿದ್ದರು. ನಾಯಕನಾಗಿಯೂ ತಂಡವನ್ನು ಮುನ್ನಡೆಸಿದ್ದಾರೆ. ಸದ್ಯ ಭಾರತ “ಎ’ ತಂಡದ ಕೋಚ್ ಆಗಿದ್ದಾರೆ. ಹಲವಾರು ಬಾರಿ ತಂಡ ಸಂಕಷ್ಟಕ್ಕೆ ಸಿಲುಕಿದಾಗ ಪಾರು ಮಾಡಿದ ಕೀರ್ತಿ ದ್ರಾವಿಡ್‌ಗೆ ಸಲ್ಲುತ್ತದೆ. ಹೀಗಾಗಿ ದ್ರಾವಿಡ್‌ರನ್ನು “ಗೋಡೆ’ ಎಂದೇ ಅಡ್ಡ ಹೆಸರಿನಿಂದ ಕರೆಯಲಾಗುತ್ತಿದೆ. ಇವರು 164 ಟೆಸ್ಟ್ ಮತ್ತು 344 ಏಕದಿನ ಪಂದ್ಯ ಆಡಿದ್ದಾರೆ. ಟೆಸ್ಟ್‌ನಲ್ಲಿ 13288 ರನ್ ಮತ್ತು ಏಕದಿನದಲ್ಲಿ 10889 ರನ್ ಬಾರಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.