Karnataka; ರಾಜ್ಯ ಟೆನಿಸ್ ಅಂಕಣಗಳಿಗೆ ಅತ್ಯಾಧುನಿಕ ಸ್ಪರ್ಶ
| 1.4 ಕೋಟಿ ರೂ. ವೆಚ್ಚ ಐಟಿಎಫ್, ಎಟಿಪಿ ಆಯೋಜನೆ ಇನ್ನೂ ಸುಗಮ
Team Udayavani, Sep 27, 2024, 6:50 AM IST
ಬೆಂಗಳೂರು: ಉದ್ಯಾನನಗ ರಿಯ ಕಬ್ಬನ್ ಪಾರ್ಕ್ ರಸ್ತೆಯಲ್ಲಿರುವ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ 4 ಅಂಕಣಗಳು 25 ವರ್ಷಗಳ ಬಳಿಕ ನವೀಕರಿಸಲ್ಪಟ್ಟಿವೆ. ವಿಶೇಷವೆಂದರೆ ಈ ಅಂಕಣಗಳಿಗೆ ಯುಎಸ್ ಓಪನ್ ಟೆನಿಸ್‌ನಲ್ಲಿ ಬಳಸುವ ಅತ್ಯಾಧುನಿಕ ಲೇಕೋಲ್ಡ್ ಸ್ಪರ್ಶ ನೀಡಲಾಗಿದೆ.
1976ರಲ್ಲಿ ಸ್ಥಾಪಿಸಲ್ಪಟ್ಟ ಈ ಅಂಕಣ ಗಳು 48 ವರ್ಷಗಳಷ್ಟು ಹಳೆಯವು. ಅವು ಸ್ಥಾಪನೆಯಾದ ಮೇಲೆ ಕೇವಲ 2ನೇ ಬಾರಿಗೆ 1.4 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಲಾನ್ ಟೆನಿಸ್ ಸಂಸ್ಥೆ ಅದನ್ನು ನವೀಕರಣ ಮಾಡಿದೆ. ಇನ್ನು ಈ ಅಂಕಣಗಳಲ್ಲಿ ಪ್ರತಿಷ್ಠಿತ ಐಟಿಎಫ್ (ಅಂ.ರಾ. ಟೆನಿಸ್ ಒಕ್ಕೂಟ), ಎಟಿಪಿ (ವೃತ್ತಿಪರ ಟೆನಿಸಿಗರ ಸಂಸ್ಥೆ) ಕೂಟಗಳನ್ನು ಇನ್ನಷ್ಟು ಉತ್ತಮವಾಗಿ ನಡೆಸಲು ಸಾಧ್ಯವಿದೆ.
ಅಡಿಪಾಯದಿಂದಲೇ ಹೊಸಸ್ಪರ್ಶ
ಅಂಕಣಗಳ ಅಡಿಪಾಯವನ್ನು 1 ಮೀಟರ್‌ನಷ್ಟು ಕೆಳಗೆ ಅಗೆದು, ಸುಧಾರಿಸಿ ಜೀವ ತುಂಬಲಾಗಿದೆ. ಹೊಸ ಅಂಕಣಗಳ ರೀತಿಯಲ್ಲೇ ಹಳೇ ಅಂಕಣಗಳ ರೂಪವನ್ನು ಬದಲಾಯಿಸ ಲಾಗಿದೆ. ಅಂದಾಜು 1.4 ಕೋಟಿ ರೂ. ಖರ್ಚಿನಲ್ಲಿ 4 ಅಂಕಣಗಳ ಸಹಿತ ಸಂಪೂರ್ಣ ವ್ಯವಸ್ಥೆಗಳು ನವೀಕರಣಗೊಂಡಿವೆ.
ಅಂಕಣಗಳ ಜತೆಗೆ ಕ್ರೀಡಾಂಗಣದ ಆವರಣದಲ್ಲಿನ ಆಟಗಾರರ ಕೊಠಡಿ ಗಳು, ವೀಕ್ಷಕರ ಆಸನಗಳ ಸಹಿತ ಇಲ್ಲಿನ ಎಲ್ಲ ಸೌಲಭ್ಯಗಳಿಗೆ ಹೊಸ ಹೊಳಪು ನೀಡಲಾಗಿದೆ.
ಏನಿದು ಲೇಕೋಲ್ಡ್?
ಅಮೆರಿಕ ಯುಎಸ್ ಓಪನ್ ಸೇರಿದಂತೆ ಪ್ರತಿಷ್ಠಿತ ಟೆನಿಸ್ ಕೂಟಗಳಲ್ಲಿ ಲೇಕೋಲ್ಡ್ ಮಾದರಿಯನ್ನು ಬಳಸಲಾಗುತ್ತದೆ. ಇದನ್ನು ಅಂಕಣದ ಗಟ್ಟಿಯಾದ ಪದರದ (ಕಾಂಕ್ರೀಟ್) ಮೇಲೆ ನಿರ್ಮಿಸಲಾಗುತ್ತದೆ. ಅಂಕಣದ ಬಿರುಸನ್ನು ಕಡಿಮೆಮಾಡಲು ಅಗತ್ಯಬಿದ್ದರೆ ಕುಶನ್ ಹಾಕಲಾಗುತ್ತದೆ. ಈ ಮಾದರಿಯನ್ನು ಪೆನ್ಸಿಲ್ವೇನಿಯಾದ ಅಡ್ವಾನ್ಸ್$x ಪಾಲಿಮರ್ ಟೆಕ್ನಾಲಜಿ ಕಂಪೆನಿ ಸಿದ್ಧಪಡಿಸಿದೆ. ಇಲ್ಲೂ ಕೂಡ ಕುಶನ್ ಬಳಕೆಯಾಗಿದೆ.
ಹೊಸರೂಪ ಸಿಕ್ಕಿದೆ
25 ವರ್ಷಗಳಿಂದ ಅಂಕ ಣಗಳ ನವೀಕರಣ ನಡೆದಿರಲಿಲ್ಲ. ಹೀಗಾಗಿ ಅಂಕಣ ಗಳಿಗೆ ಹೊಸರೂಪ ನೀಡಬೇಕು ಎನ್ನುವ ಉದ್ದೇಶ ದಿಂದಲೇ ಹಿಂದಿನ ನಾಲ್ಕೂ ಅಂಕಣ ಗಳನ್ನು ನವೀಕರಿಸಿದೆವು. 5 ವರ್ಷಗ ಳಿಂದಲೇ ಇದಕ್ಕೆ ರೂಪುರೇಷೆ ಸಿದ್ಧ ಮಾಡಲಾರಂಭಿಸಿದ್ದೆವು. ಈಗ ಅಂಕಣ ಸಂಪೂರ್ಣವಾಗಿ ಅತ್ಯಾಕರ್ಷಕ ರೀತಿಯಲ್ಲಿ ತಯಾರಾಗಿ ನಿಂತಿದೆ.
-ಸುನೀಲ್ ಯಜಮಾನ್,ರಾಜ್ಯ ಟೆನಿಸ್ ಸಂಸ್ಥೆ ಜಂಟಿ ಕಾರ್ಯದರ್ಶಿ
·ಎಸ್. ಸದಾಶಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಆಸ್ಟ್ರೇಲಿಯ ಸೋಲಿಗಿಂತ ತವರಿನ ವೈಟ್‌ವಾಶ್ ಆಘಾತಕಾರಿ: ಯುವಿ
ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್ ಬಹಿಷ್ಕಾರ?
Jasprit Bumrah: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಬುಮ್ರಾ
WTC “ಟೆಸ್ಟ್ ಫೈನಲ್’ಗೂ ಮುನ್ನ ಒಂದು ಟೆಸ್ಟ್ ಆಡಲು ದ. ಆಫ್ರಿಕಾ ಯೋಜನೆ
Team India; ದ್ರಾವಿಡ್ ಇದ್ದಾಗ ಎಲ್ಲ ಸರಿಯಿತ್ತು: ಹರ್ಭಜನ್
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.