ಗುಜರಾತ್‌ಗೆ ಕರ್ನಾಟಕ ಕಡಿವಾಣ
Team Udayavani, Dec 15, 2018, 11:19 AM IST
ಸೂರತ್: ಶುಕ್ರವಾರ ಸೂರತ್‌ನಲ್ಲಿ ಮೊದಲ್ಗೊಂಡ ಎಲೈಟ್ “ಎ’ ಗುಂಪಿನ ರಣಜಿ ಪಂದ್ಯದಲ್ಲಿ ಆತಿಥೇಯ ಗುಜರಾತ್‌ಗೆ ಕರ್ನಾಟಕ ಕಡಿವಾಣ ಹಾಕಿದೆ. ಗುಜರಾತ್ 216ಕ್ಕೆ ಆಲೌಟ್ ಆಗಿದ್ದು, ಜವಾಬು ನೀಡಲಾರಂಭಿಸಿದ ಕರ್ನಾಟಕ 2 ವಿಕೆಟಿಗೆ 45 ರನ್ ಗಳಿಸಿದೆ. ಹಿಂದಿನ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಸೋಲು ಕಂಡಿದ್ದ ರಾಜ್ಯ ತಂಡ ಇನ್ನಿಂಗ್ಸ್ ಮುನ್ನಡೆ ಪಡೆಯಲು ಇನ್ನೂ 172 ರನ್ ಗಳಿಸಬೇಕಿದೆ. 8 ವಿಕೆಟ್ ಇದೆ. ಆರ್. ಸಮರ್ಥ್ (7) ಕ್ರೀಸ್‌ನಲ್ಲಿದ್ದಾರೆ.
ಎಡವಿದ ಮಾಯಾಂಕ್, ನಿಶ್ಚಲ್
ತಂಡಕ್ಕೆ ಮರಳಿದ ಆರಂಭಿಕ ಬ್ಯಾಟ್ಸ್‌ಮನ್ ಮಾಯಾಂಕ್ ಅಗರ್ವಾಲ್ ಮೇಲೆ ಕರ್ನಾಟಕ ಭಾರೀ ಭರವಸೆ ಇರಿಸಿತ್ತು. ಆದರೆ ಅವರು 25 ರನ್ ಮಾಡಿ ನಿರ್ಗಮಿಸಿದರು. ಆಗ ಸ್ಕೋರ್ 38 ರನ್ ಆಗಿತ್ತು. 7 ರನ್ ಆಗುವಷ್ಟರಲ್ಲಿ ನಿಶ್ಚಲ್ ಕೂಡ ಔಟಾದರು. ಕರ್ನಾಟಕ ತಂಡ ಮತ್ತೂಂದು ಆಘಾತ ಅನುಭವಿಸಿತು. ದಿನದಾಟವನ್ನು ಇಲ್ಲಿಗೇ ಕೊನೆಗೊಳಿಸಲಾಯಿತು. ಸೂರತ್‌ನಲ್ಲಿ ಬ್ಯಾಟಿಂಗ್ ಕಠಿನವಾಗಿ ಪರಿಣಮಿಸುವ ಸಾಧ್ಯತೆ ಇದ್ದು, ಶನಿವಾರ ಕರ್ನಾಟಕ ಎಚ್ಚರಿಕೆಯ ಆಟವಾಡಿ ಇನ್ನಿಂಗ್ಸ್ ಮುನ್ನಡೆಗೆ ಪ್ರಯತ್ನಿಸಬೇಕಿದೆ.
ಪ್ರಿಯಾಂಕ್ ಅರ್ಧ ಶತಕ
ಇದಕ್ಕೂ ಮೊದಲು ಇನಿಂಗ್ಸ್ ಆರಂಭಿಸಿದ ಗುಜರಾತ್ ರಾಜ್ಯದ ಬೌಲಿಂಗ್ ದಾಳಿಗೆ ಸಿಲುಕಿ ಒದ್ದಾಟ ನಡೆಸಿತು. ಇನ್ನಿಂಗ್ಸ್ ಆರಂಭಿಸಿದ ಕಥನ್ ಪಟೇಲ್ (13 ರನ್) ಹಾಗೂ ಪ್ರಿಯಾಂಕ್ ಪಾಂಚಾಲ್ ಮೊದಲ ವಿಕೆಟಿಗೆ 48 ರನ್ ಜತೆಯಾಟ ನಡೆಸಿ ಭರವಸೆ ಮೂಡಿಸಿದರು. ಈ ಹಂತದಲ್ಲಿ ದಾಳಿಗಿಳಿದ ಕೆ. ಗೌತಮ್ ಅವರು ಪಟೇಲ್ ವಿಕೆಟ್ ಕಿತ್ತರು. ಭಾರ್ಗವ್ ಮೆರಾಯ್ (4), ರುಜುಲ್ ಭಟ್ (12), ಮನ್‌ಪ್ರೀತ್ ಜುನೇಜ (15), ಅಕ್ಷರ್ ಪಟೇಲ್ (3) ಬೇಗನೇ ವಿಕೆಟ್ ಕಳೆದುಕೊಂಡರು.
ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಕಪ್ತಾನನ ಆಟವಾಡಿದ ಪ್ರಿಯಾಂಕ್ ಪಾಂಚಾಲ್ 47ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡು 74 ರನ್ ಬಾರಿಸಿದರು (135 ಎಸೆತ, 8 ಬೌಂಡರಿ). ಶ್ರೇಯಸ್ ಸ್ಪಿನ್ ಮೋಡಿಗೆ ಸಿಲುಕಿ 7ನೇ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರಿಕೊಂಡರು. ಕೆಳ ಕ್ರಮಾಂಕದಲ್ಲಿ ಪೀಯೂಷ್ ಚಾವ್ಲಾ (34) ಹಾಗೂ ಮೆಹುಲ್ ಪಟೇಲ್ (ಅಜೇಯ 31) ಉತ್ತಮ ಪ್ರದರ್ಶನ ನೀಡಿದ್ದರಿಂದ ಗುಜರಾತ್‌ಗೆ ಇನ್ನೂರರ ಗಡಿ ದಾಟಲು ಸಾಧ್ಯವಾಯಿತು.
ಕರ್ನಾಟಕ ಪರ ವಿನಯ್ ಕುಮಾರ್ (33ಕ್ಕೆ 2), ಪ್ರತೀಕ್ ಜೈನ್ (28ಕ್ಕೆ 2), ರೋನಿತ್ ಮೋರೆ (63ಕ್ಕೆ 2), ಕೆ. ಗೌತಮ್ (58ಕ್ಕೆ 2) ಹಾಗೂ ಶ್ರೇಯಸ್ ಗೋಪಾಲ್ (21ಕ್ಕೆ 2) ಉತ್ತಮ ಪ್ರದರ್ಶನ ನೀಡಿದರು. ಸಂಕ್ಷಿಪ್ತ ಸ್ಕೋರ್: ಗುಜರಾತ್-216 (ಪಾಂಚಾಲ್ 74, ಚಾವ್ಲಾ 34, ಮೆಹುಲ್ ಔಟಾಗದೆ 31, ಗೋಪಾಲ್ 21ಕ್ಕೆ 2, ಪ್ರತೀಕ್ 28ಕ್ಕೆ 2). ಕರ್ನಾಟಕ-2 ವಿಕೆಟಿಗೆ 45.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.