Syed Mushtaq Ali Trophy ಸಿಕ್ಕಿಂ ವಿರುದ್ಧ ಕರ್ನಾಟಕಕ್ಕೆ ಸುಲಭ ಜಯ


Team Udayavani, Nov 30, 2024, 12:40 AM IST

1-kar

ಇಂದೋರ್‌: ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20 ಪಂದ್ಯಾವಳಿಯ ಶುಕ್ರವಾರದ ಮುಖಾಮುಖೀಯಲ್ಲಿ ಕರ್ನಾಟಕ 8 ವಿಕೆಟ್‌ಗಳಿಂದ ಸಿಕ್ಕಿಂ ತಂಡಕ್ಕೆ ಸೋಲುಣಿಸಿದೆ. ಇದು 4 ಪಂದ್ಯಗಳಲ್ಲಿ ಕರ್ನಾಟಕ ಸಾಧಿಸಿದ 2ನೇ ಜಯ.

ಮೊದಲು ಬ್ಯಾಟಿಂಗ್‌ ನಡೆಸಿದ ಸಿಕ್ಕಿಂ 18.2 ಓವರ್‌ಗಳಲ್ಲಿ 82ಕ್ಕೆ ಉರುಳಿದರೆ, ಕರ್ನಾಟಕ ಕೇವಲ 5.4 ಓವರ್‌ಗಳಲ್ಲಿ 2 ವಿಕೆಟಿಗೆ 86 ರನ್‌ ಮಾಡಿತು. ಇದರಿಂದ ತಂಡದ ರನ್‌ರೇಟ್‌ನಲ್ಲಿ ಸಾಕಷ್ಟು ಪ್ರಗತಿ ಯಾಯಿತು. ಆದರೆ ಅಂಕಪಟ್ಟಿಯಲ್ಲಿ ಕರ್ನಾಟಕ 5ರಷ್ಟು ಕೆಳಸ್ಥಾನದಲ್ಲಿದೆ (4 ಅಂಕ, 1.702 ರನ್‌ರೇಟ್‌). ಕರ್ನಾಟಕವಿನ್ನು ತಮಿಳುನಾಡು, ಬರೋಡ ಮತ್ತು ಗುಜರಾತ್‌ನಂಥ ಬಲಿಷ್ಠ ತಂಡಗಳನ್ನು ಎದುರಿಸಬೇಕಿದೆ.
ಶ್ರೇಯಸ್‌ ಗೋಪಾಲ್‌ 5 ವಿಕೆಟ್‌ ಉಡಾಯಿಸಿ ಸಿಕ್ಕಿಂಗೆ ಬಲವಾದ ಆಘಾತವಿಕ್ಕಿದರು. ವಿದ್ಯಾಧರ ಪಾಟೀಲ್‌ 3 ಮತ್ತು ವಿಜಯ್‌ಕುಮಾರ್‌ ವೈಶಾಖ್‌ 2 ವಿಕೆಟ್‌ ಉರು ಳಿಸಿದರು. 18 ರನ್‌ ಮಾಡಿದ ಆಶಿಷ್‌ ಥಾಪಾ ಸಿಕ್ಕಿಂ ಸರದಿಯ ಗರಿಷ್ಠ ಸ್ಕೋರರ್‌.

ನಾಯಕ ಅಗರ್ವಾಲ್‌ 2ನೇ ಎಸೆತದಲ್ಲೇ ಖಾತೆ ತೆರೆಯದೆ ನಿರ್ಗಮಿಸಿದರೆ, ಆರಂಭಿಕನಾಗಿ ಇಳಿದ ಮನೀಷ್‌ ಪಾಂಡೆ ಅಜೇಯ 30 ರನ್‌ ಹೊಡೆದರು. ಕೀಪರ್‌ ಕೃಷ್ಣನ್‌ ಶ್ರೀಜಿತ್‌ 37, ಸ್ಮರಣ್‌ ರವಿಚಂದ್ರನ್‌ ಅಜೇಯ 19 ರನ್‌ ಮಾಡಿದರು.

ಎಲ್ಲ 11 ಆಟಗಾರರಿಂದ ಬೌಲಿಂಗ್‌!
ಮುಂಬಯಿ: ಮಣಿಪುರ ವಿರುದ್ಧದ ಪಂದ್ಯದಲ್ಲಿ ದಿಲ್ಲಿಯ ಎಲ್ಲ 11 ಮಂದಿ ಆಟಗಾರರು ಬೌಲಿಂಗ್‌ ನಡೆಸಿದ್ದು ವಿಶೇಷವಾಗಿತ್ತು. ನಾಯಕ ಆಯುಷ್‌ ಬದೋನಿ ಅವರ ಈ ಅಚ್ಚರಿಯ ನಿರ್ಧಾರದಿಂದಾಗಿ ವಿಕೆಟ್‌ ಕೀಪರ್‌ ಅನುಜ್‌ ರಾವತ್‌ ಕೂಡ ಬೌಲಿಂಗ್‌ ನಡೆಸುವ ಅವಕಾಶ ಪಡೆದರು. ಮೂವರು ತಲಾ 3 ಓವರ್‌, ಮತ್ತೆ ಮೂವರು ತಲಾ 2 ಓವರ್‌, 5 ಮಂದಿ ಒಂದೊಂದು ಓವರ್‌ ಎಸೆದರು. ಇದರಲ್ಲಿ 2 ಓವರ್‌ ಮೇಡನ್‌ ಆಗಿತ್ತು.

ಶಾರ್ದೂಲ್‌ ದುಬಾರಿ ಬೌಲಿಂಗ್‌
ಹೈದರಾಬಾದ್‌: ಮುಂಬಯಿ ಬೌಲರ್‌ ಶಾರ್ದೂಲ್‌ ಠಾಕೂರ್‌ ಈ ಪಂದ್ಯಾವಳಿಯ ಇತಿಹಾಸದ ಅತ್ಯಂತ ದುಬಾರಿ ಬೌಲಿಂಗ್‌ ದಾಖಲೆಯನ್ನು ಸರಿದೂಗಿಸಿದರು. ಕೇರಳ ವಿರುದ್ಧದ ಪಂದ್ಯದಲ್ಲಿ ಅವರ 4 ಓವರ್‌ಗಳಲ್ಲಿ 69 ರನ್‌ ಸೋರಿ ಹೋಯಿತು. ಕೆಲವು ದಿನಗಳ ಹಿಂದೆ ಹರಿಯಾಣ ವಿರುದ್ಧ ಅರುಣಾಚಲ ಪ್ರದೇಶದ ರಮೇಶ್‌ ರಾಹುಲ್‌ ಕೂಡ ಇಷ್ಟೇ ರನ್‌ ನೀಡಿದ್ದರು. ಹಿಂದಿನ ದಾಖಲೆ ಹೈದರಾಬಾದ್‌ನ ಪಗಡಾಲ ನಾಯ್ಡು ಹೆಸರಲ್ಲಿತ್ತು (67ಕ್ಕೆ 1).
ಈ ಪಂದ್ಯವನ್ನು ಕೇರಳ 43 ರನ್ನುಗಳಿಂದ ಜಯಿಸಿತು. ಕೇರಳ 5 ವಿಕೆಟಿಗೆ 254 ರನ್‌ ಪೇರಿಸಿದರೆ, ಮುಂಬಯಿ 9ಕ್ಕೆ 191 ರನ್‌ ಮಾಡಿತು.

ಟಾಪ್ ನ್ಯೂಸ್

Rural-india-utsat

ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ

CKB-Sudhakar

Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್‌

BYv-SMG

ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್‌ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ

CHN-Social

Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು

Priyank-Kharghe

ನಾವು ಬೀದಿಗಿಳಿದರೆ ಬಿಜೆಪಿಯವರು ಮನೆ ಖಾಲಿ ಮಾಡಬೇಕು: ಸಚಿವ ಪ್ರಿಯಾಂಕ್‌

SMG-Meggan

Shivamogga: ಮೆಗ್ಗಾನ್‌ ಆಸ್ಪತ್ರೆಯಲ್ಲಿ ಬಾಣಂತಿ ಸಾವು

letter-Gove

Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Australian Open: ಗಾಯಾಳಾಗಿ ಹೊರಬಿದ್ದ ಡಿಮಿಟ್ರೋವ್‌

Australian Open: ಗಾಯಾಳಾಗಿ ಹೊರಬಿದ್ದ ಡಿಮಿಟ್ರೋವ್‌

Devajit Saikia : ಬಿಸಿಸಿಐ ಕಾಯದರ್ಶಿ; ಸೈಕಿಯಾ ಅರ್ಜಿ

Devajit Saikia : ಬಿಸಿಸಿಐ ಕಾಯದರ್ಶಿ; ಸೈಕಿಯಾ ಅರ್ಜಿ

SA vs Pak, 2nd Test: ರಿಕಲ್ಟನ್‌ ದ್ವಿಶತಕ, ದಕ್ಷಿಣ ಆಫ್ರಿಕಾ ಬೃಹತ್‌ ಮೊತ್ತ

SA vs Pak, 2nd Test: ರಿಕಲ್ಟನ್‌ ದ್ವಿಶತಕ, ದಕ್ಷಿಣ ಆಫ್ರಿಕಾ ಬೃಹತ್‌ ಮೊತ್ತ

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video

Sydney: ಮೈದಾನ ತೊರೆದು ಆಸ್ಪತ್ರೆಗೆ ಹೊರಟ ಬುಮ್ರಾ; ಟೀಂ ಇಂಡಿಯಾ ಪಾಳಯದಲ್ಲಿ ಆತಂಕ| Video

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kejiriwal

Delhi Election: ಆಪ್‌ ಸೋಲಿಸಲು ಬಿಜೆಪಿ ಜತೆ ಕಾಂಗ್ರೆಸ್‌ ಮೈತ್ರಿ: ಕೇಜ್ರಿವಾಲ್‌

Rural-india-utsat

ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ

CKB-Sudhakar

Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್‌

BYv-SMG

ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್‌ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ

CHN-Social

Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.