ಕರುಣ್ ನಾಯರ್‌ಗೆ ಕೋವಿಡ್; ಚೇತರಿಕೆಯ ಬಳಿಕ ಹಬ್ಬಿದ ಸುದ್ದಿ
Team Udayavani, Aug 13, 2020, 6:32 PM IST
ಬೆಂಗಳೂರು: ಕರ್ನಾಟಕ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟ್ಸ್‌ಮನ್ ಕರುಣ್ ನಾಯರ್ ಅವರಿಗೆ ಕೋವಿಡ್ ಸೋಂಕು ತಗುಲಿದ್ದು ತಡವಾಗಿ ಸುದ್ದಿಯಾಗಿದೆ. ಆದರೀಗ ಅವರು ಚೇತರಿಸಿಕೊಂಡಿದ್ದು, ಕಿಂಗ್ಸ್ ಇಲೆವೆನ್ ತಂಡೊಂದಿಗೆ ಯುಎಇಗೆ ತೆರಳುವ ನಿರೀಕ್ಷೆಯಲ್ಲಿದ್ದಾರೆ.
ಎರಡು ವಾರಗಳ ಹಿಂದೆಯೇ ಕರುಣ್ ನಾಯರ್ ಅವರಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದಿತ್ತು ಎಂಬುದಾಗಿ ಕ್ರಿಕೆಟ್ ವೆಬ್‌ಸೈಟ್ “ಕ್ರಿಕ್ ಇನ್‌ಫೋ’ ವರದಿ ಮಾಡಿದೆ. ಅನಂತರ ಅವರು 14ಕ್ಕೂ ಹೆಚ್ಚು ದಿನಗಳ ಕಾಲ ಸೆಲ್ಫ್ ಐಸೊಲೇಶನ್‌ಗೆ ಒಳಗಾಗಿದ್ದರು. ಸೋಮವಾರದ ಫಲಿತಾಂಶ ನೆಗೆಟಿವ್ ಬಂದಿದೆ. ಈಗ ಅಭ್ಯಾಸವನ್ನೂ ಆರಂಭಿಸಿದ್ದಾರೆ. ಆದರೆ ನಾಯರ್ ಇನ್ನೂ ಮೂರು ಸಲ ಕೋವಿಡ್-19 ಪರೀಕ್ಷೆಗೆ ಒಳಗಾಗಬೇಕಿದೆ. ಇಲ್ಲಿ ನೆಗೆಟಿವ್ ಫಲಿತಾಂಶ ಕಂಡು ಬಂದರಷ್ಟೇ ಅವರು ಯುಎಇಗೆ ತೆರಳಬಹುದು.
ಒಂದು ದಿನದ ಹಿಂದಷ್ಟೇ ರಾಜಸ್ಥಾನ್ ರಾಯಲ್ಸ್ ತಂಡದ ಫೀಲ್ಡಿಂಗ್ ಕೋಚ್ ದಿಶಾಂತ್ ಯಾಗ್ನಿಕ್ ಅವರಲ್ಲಿ ಕೋವಿಡ್ ಪಾಸಿಟಿವ್ ಕಂಡು ಬಂದಿತ್ತು. ಇದರಿಂದ ಐಪಿಎಲ್ ಕೂಡ ಕೋವಿಡ್ ಆತಂಕದಿಂದ ಪಾರಾಗದು ಎಂಬ ಸೂಚನೆಯೊಂದು ಲಭಿಸಿತ್ತು. ಆದರೆ ಇವರಿಗಿಂತ ಮೊದಲೇ ಕರುಣ್ ನಾಯರ್ ಅವರಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದದ್ದು ಸುದ್ದಿ ಆಗದಿದ್ದುದೊಂದು ಅಚ್ಚರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.