ಕಸವನಹಳ್ಳಿ ಕಟ್ಟಡ ಕುಸಿತ ಪ್ರಕರಣ ಮತ್ತೂಬ್ಬ ಕಾರ್ಮಿಕ ಸಾವು
Team Udayavani, Feb 17, 2018, 6:40 AM IST
ಬೆಂಗಳೂರು:ಕಸವನಹಳ್ಳಿಯ ಜಯರಾಮರೆಡ್ಡಿ ಲೇಔಟ್‌ನಲ್ಲಿ ಗುರುವಾರ ಸಂಜೆ ಕುಸಿದ ಕಟ್ಟಡ ಅವಶೇಷಗಳಡಿ ಎಷ್ಟು ಮಂದಿ ಸಿಲುಕಿದ್ದಾರೆ ಎಂಬ ಅಂದಾಜೇ ಸಿಗುತ್ತಿಲ್ಲ. ಆದರೂ 160 ರಕ್ಷಣಾ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಈ ಮಧ್ಯೆ ನಾಲ್ಕೈದು ಗಂಟೆಗಳ ಅವಿರತ ಶ್ರಮದಿಂದ ರಕ್ಷಿಸಲ್ಪಟ್ಟ ಕಾರ್ಮಿಕನೊಬ್ಬ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ. ಈ ಮೂಲಕ ಮೃತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಹಜರತ್ (25) ಮೃತ ಕಾರ್ಮಿಕ. ಶುಕ್ರವಾರ ಬೆಳಗ್ಗೆ 8.30ರ ಸುಮಾರಿಗೆ ಅವಶೇಷಗಳಡಿ ಸಿಲುಕಿದ್ದ ಹಜರತ್‌ನನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹಜರತ್ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆ. ಈ ಮಧ್ಯೆ ಹಜರತ್ ಕುಟುಂಬಸ್ಥರು ವೇಗವಾಗಿ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿಲ್ಲ. ಅಲ್ಲದೇ ಖಾಸಗಿ ವೈದ್ಯರು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಗ್ಲೂಕೋಸ್, ನೀರು ಕುಡಿದಿದ್ದ ಹಜರತ್
ಸತತ 30 ಗಂಟೆಗಳ ಕಾರ್ಯಾಚರಣೆ ವೇಳೆ ಶುಕ್ರವಾರ ನಸುಕಿನ 3.30ರ ಸುಮಾರಿಗೆ ಅವಶೇಷಗಳಡಿ ಸುಭಾಷ್ ಎಂಬಾತ ಸಿಲುಕಿರುವುದು ಗೊತ್ತಾಯಿತು. ಆದರೆ, ಈತ ಹೆಚ್ಚು ಗಾಯಗೊಂಡಿರಲಿಲ್ಲ. ಸುಭಾಷ್ ರಕ್ಷಣೆಗಾಗಿ ಕ್ಷೀಪ್ರವಾಗಿ ಅವಶೇಷಗಳನ್ನು ತೆರವುಗೊಳಿಸಿದಾಗ ಯಾವುದೇ ಅಪಾಯವಿಲ್ಲದೇ ಹೊರಬಂದಿದ್ದಾನೆ. ಈತನ ಮಾಹಿತಿ ಮೇರೆಗೆ ಪಕ್ಕದಲ್ಲೇ ಬಿದ್ದಿದ್ದ ಹಜರತ್‌ಗಾಗಿ ಕಾರ್ಯಾಚರಣೆ ಮುಂದುವರಿಸಲಾಯಿತ್ತು. ಅಲ್ಲದೇ ಆತನ ಸ್ಥಿತಿ ಬಗ್ಗೆ ಸುಭಾಷ್ ವಿವರಿಸಿದ್ದ. ಹೀಗಾಗಿ ಹಜರತ್ ಸಿಲುಕಿರುವ ಜಾಗವನ್ನು ಕೊರೆದು ಸಿಬ್ಬಂದಿ ಕುಡಿಯಲು ನೀರು, ಗ್ಲೂಕೋಸ್ ಕೊಟ್ಟು ನಾವಿದ್ದೇವೆ ಎಂದು ಧೈರ್ಯ ತುಂಬಿದ್ದೇವು. ಹೀಗೆ ಐದು ಗಂಟೆಗಳ ಅವಿರತ ಶ್ರಮದಿಂದ 8.30ರ ಸುಮಾರಿಗೆ ಹಜರತ್‌ನನ್ನು ಹೊರತರಲಾಯಿತು. ಅಷ್ಟರಲ್ಲಿ ಈತನ ಸೊಂಟ ಮತ್ತು ಬೆನ್ನಿನ ಮೇಲೆ ಕಲ್ಲು ಬಿದ್ದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.