ದ್ವಿತೀಯ ಸುತ್ತಿಗೆ ಕಶ್ಯಪ್‌ ಪ್ರವೇಶ

Team Udayavani, Nov 14, 2018, 8:43 AM IST

x-53.jpg

ಕೌಲೂನ್‌: ಕಾಮನ್ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತ ಪಾರುಪಳ್ಳಿ ಕಶ್ಯಪ್‌ ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ.  ಪುರುಷರ ಸಿಂಗಲ್‌ನ ಮೊದಲ ಪಂದ್ಯದಲ್ಲಿ ಕಶ್ಯಪ್‌ ಥಾಯ್ಲೆಂಡ್‌ನ‌ ಹು ಜೆನ್‌-ಹೊ ಅವರನ್ನು 21-7, 12-21, 21-18 ಗೇಮ್‌ಗಳಿಂದ ಸೋಲಿ ಸಿದರು. ಮೊದಲ ಗೇಮ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕಶ್ಯಪ್‌ ಅವರು ಜೆನ್‌ ಹೊ ಅವರಿಗೆ ಹೆಚ್ಚಿನ ಅವಕಾಶ ನೀಡದೆ 21-7 ಅಂಕಗಳಿಂದ ಗೆದ್ದರು. 2ನೇ ಗೇಮ್‌ನಲ್ಲಿ ಹಿಡಿತ ಸಾಧಿಸಿಕೊಂಡ ಜೆನ್‌-ಹೊ ಸತತ ಅಂಕಗಳನ್ನು ಗಳಿಸಿ ಕಶ್ಯಪ್‌ಗೆ ಆಘಾತ ನೀಡಿದರು. ನಿರ್ಣಾಯಕ ಗೇಮ್‌ನಲ್ಲಿ ಎಚ್ಚರಿಕೆಯ ಆಟವಾಡಿದ ಕಶ್ಯಪ್‌ 3 ಅಂಕಗಳ ಅಂತರದಿಂದ ಜಯಿಸಿ ಮುಂದಿನ ಸುತ್ತಿಗೆ ಕಾಲಿಟ್ಟರು. 

ಮಿಶ್ರ ಜೋಡಿಗೆ ಜಯ
ಮಿಶ್ರ ಡಬಲ್ಸ್‌ ವಿಭಾಗದ ಆರಂಭಿಕ ಪಂದ್ಯದಲ್ಲಿ ಭಾರತದ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ- ಅಶ್ವಿ‌ನಿ ಪೊನ್ನಪ್ಪ ಜೋಡಿ ಥಾಯ್ಲೆಂಡ್‌ನ‌ ವಾಂಗ್‌ ಚಿನ್‌ ಲಿನ್‌-ಲೀ ಚೈನ್‌ ಸಿನ್‌ ವಿರುದ್ಧ 21-16, 19-21, 21-14 ಗೇಮ್‌ಗಳ ಅಂತರದಿಂದ ಜಯಿಸಿದೆ. ಆರಂಭಿಕ ಗೇಮ್‌ನಲ್ಲಿ  ಅತ್ಯುತ್ತಮ ಆಟವಾಡಿದ ಭಾರತದ ಜೋಡಿ 2ನೇ ಗೇಮ್‌ನಲ್ಲಿ ಮುಗ್ಗರಿಸಿತು. ಆದರೆ ಅಂತಿಮ ಗೇಮ್‌ ಅನ್ನು 7 ಅಂಕಗಳ ಅಂತರದಿಂದ ತಮ್ಮದಾಗಿಸಿಕೊಂಡು ದ್ವಿತೀಯ ಸುತ್ತಿಗೆ ಲಗ್ಗೆಯಿಟ್ಟರು. 

ಇಂದು ಸೈನಾ, ಸಿಂಧುಗೆ ಸವಾಲು
ವನಿತಾ ಸಿಂಗಲ್ಸ್‌ ವಿಭಾಗದ ಪಂದ್ಯಗಳು ಬುಧವಾರ ಆರಂಭವಾಗಲಿದ್ದು, ಭಾರತದ ತಾರಾ ಶಟ್ಲರ್‌ಗಳಾದ ಸೈನಾ ನೆಹ್ವಾಲ್‌, ಪಿ.ವಿ. ಸಿಂಧು ಭಾಗವಹಿಸಲಿದ್ದಾರೆ. ಸತತ ಟೂರ್ನಿಗಳಲ್ಲಿ ಮುಗ್ಗರಿಸುತ್ತಿರುವ ಸಿಂಧುಗೆ ಮತ್ತೂಮ್ಮೆ ಸವಾಲು ಎದುರಾಗಿದೆ. ಆರಂಭಿಕ ಪಂದ್ಯದಲ್ಲಿ ಸಿಂಧು ಥಾಯ್ಲೆಂಡ್‌ನ‌ ನಿತ್‌ಚಾವೊನ್‌ ಜಿಂಡಾಪೊಲ್‌ ಅವರನ್ನು ಎದುರಿಸಲಿದ್ದಾರೆ. ಸೈನಾ ನೆಹ್ವಾಲ್‌ ಜಪಾನ್‌ನ ಅಕಾನೆ ಯಮಗುಚಿ ಅವರ ವಿರುದ್ಧ ಆಡಲಿದ್ದಾರೆ. ವನಿತಾ ಡಬಲ್ಸ್‌ ವಿಭಾಗದಲ್ಲಿ ಅಶ್ವಿ‌ನಿ ಪೊನ್ನಪ್ಪ- ಸಿಕ್ಕಿ ಎನ್‌. ರೆಡ್ಡಿ ಮೊದಲ ಪಂದ್ಯ ಆಡಲಿದ್ದಾರೆ. 

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಪಾರುಪಳ್ಳಿ ಕಶ್ಯಪ್‌ ತನ್ನ 2ನೇ ಪಂದ್ಯದಲ್ಲಿ ಇಂಡೋನೇಶ್ಯದ ಆ್ಯಂತೋನಿ ಸಿನಿಸುಖ ಗಿಟ್ಟಿಂಗ್‌ ಅವರನ್ನು ಎದುರಿಸಿದರೆ, ಕೆ. ಶ್ರೀಕಾಂತ್‌ ಆರಂಭಿಕ ಪಂದ್ಯದಲ್ಲಿ ಆತಿಥೇಯ ನಾಡಿನ ವಾಂಗ್‌ ವಿಂಗ್‌ ಕಿ ವಿನ್ಸೆಂಟ್‌ ಅವರ ವಿರುದ್ಧ ಆಡಲಿದ್ದಾರೆ. ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಸಾಯಿ ಪ್ರಣೀತ್‌. ಬಿ ಹಾಗೂ ಸಮೀರ್‌ ವರ್ಮ ಕೂಡ ಈ ಕೂಟದಲ್ಲಿ ಆಡುತ್ತಿದ್ದಾರೆ.

ಟಾಪ್ ನ್ಯೂಸ್

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-prathvi

Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

1-crick

Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ

1-eqeeqwe

Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ

KLR

Australia vs India: ಬ್ರಿಸ್ಬೇನ್‌ ಟೆಸ್ಟ್‌ನಲ್ಲಿ ಫಾಲೋಆನ್‌ ತೂಗುಗತ್ತಿಯಿಂದ ಪಾರಾದ ಭಾರತ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.