ಮುಷ್ತಾಕ್ ಅಲಿ ಟ್ರೋಫಿ:ವಿದ್ವತ್ ಕಾವೇರಪ್ಪ 11ಕ್ಕೆ 5 ; ಜೆ & ಕೆ ವಿರುದ್ಧ ಕರ್ನಾಟಕಕ್ಕೆ ಜಯ
Team Udayavani, Oct 16, 2022, 7:27 PM IST
ಮುಲ್ಲನ್‌ಪುರ: ಭಾನುವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಗ್ರೂಪ್ ಸಿ ಪಂದ್ಯದಲ್ಲಿ ವೇಗಿ ವಿದ್ವತ್ ಕಾವೇರಪ್ಪ ಅವರ ಜೀವನಶ್ರೇಷ್ಠ 11ಕ್ಕೆ 5 ವಿಕೆಟ್ ಗಳ ನೆರವಿನಿಂದ ಕರ್ನಾಟಕ ತಂಡ ಜಮ್ಮು ಮತ್ತು ಕಾಶ್ಮೀರ ವಿರುದ್ಧ 34 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 147 ರನ್‌ಗಳ ಮೊತ್ತ ಕಲೆ ಹಾಕಿತು, ಗುರಿ ಬೆನ್ನಟ್ಟಿದ ಜಮ್ಮು ಮತ್ತು ಕಾಶ್ಮೀರವು 18.2 ಓವರ್‌ಗಳಲ್ಲಿ 113 ರನ್‌ಗಳಿಗೆ ಆಲೌಟ್ ಆಯಿತು.
ಜಮ್ಮು ಮತ್ತು ಕಾಶ್ಮೀರ ಪರ ಭಾರತದ ವೇಗಿ ಉಮ್ರಾನ್ ಮಲಿಕ್ ತನ್ನ ನಾಲ್ಕು ಓವರ್‌ಗಳಲ್ಲಿ 37 ರನ್ ನೀಡಿ 1 ವಿಕೆಟ್ ಪಡೆದರೆ, ಅಬಿದ್ ಮುಷ್ತಾಕ್ ಮತ್ತು ರಿತಿಕ್ ಸಿಂಗ್ ತಲಾ ಎರಡು ವಿಕೆಟ್ ಪಡೆದರು.
ಶ್ರೇಯಸ್ ಗೋಪಾಲ್ 38 ಎಸೆತಗಳಲ್ಲಿ 48 ರನ್ ಗಳಿಸಿ ತಂಡಕ್ಕೆ ಆಧಾರವಾಗುವ ವರೆಗೂ ಕರ್ನಾಟಕವೂ ವಿಕೆಟ್ ಕಳೆದುಕೊಳ್ಳುತ್ತಲೇ ಇತ್ತು. ನಂತರ ಮನೋಜ್ ಭಾಂಡಗೆ ಅವರು 23 ಎಸೆತಗಳಲ್ಲಿ 41 ರನ್ ಗಳಿಸಿ ನಾಲ್ಕು ಸಿಕ್ಸರ್ ಮತ್ತು ಎರಡು ಬೌಂಡರಿಗಳನ್ನು ಬಾರಿಸಿ ಆಸರೆಯಾದರು.
ಜಮ್ಮು ಮತ್ತು ಕಾಶ್ಮೀರ ತಂಡವು ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಲೇ ಇತ್ತು, ವಿವ್ರಾಂತ್ ಶರ್ಮಾ ಅವರ 46 ಬಾಲ್ ಗಳಲ್ಲಿ 63 ರನ್ ಕೊಡುಗೆಯ ಹೊರತಾಗಿಯೂ ವಿಫಲವಾಯಿತು.
ಏಳನೇ ಓವರ್‌ನಲ್ಲಿ ಆರು ವಿಕೆಟ್‌ಗೆ 31 ರನ್‌ಗಳಿದ್ದಾಗ, ಅಬಿದ್ ಮುಷ್ತಾಕ್ 26 ಎಸೆತಗಳಲ್ಲಿ 32 ರನ್ ಗಳಿಸಿ ಜಮ್ಮು ಮತ್ತು ಕಾಶ್ಮೀರದ ಮೊತ್ತಕ್ಕೆ ಗೌರವಾನ್ವಿತತೆಯ ತೋರಿಕೆಯನ್ನು ನೀಡಿದರು. ಆದಾಗ್ಯೂ, ಪವರ್‌ಪ್ಲೇಯೊಳಗೆ ವಿಕೆಟ್ ಪತನವಾದ ಕಾರಣ ಮುಷ್ತಾಕ್ ಅವರ ಪ್ರಯತ್ನವು ಗೆಲುವಿನತ್ತ ಸಾಗಲು ಸಾಧ್ಯವಾಗಲಿಲ್ಲ.
ನಾಲ್ಕನೇ ಟಿ20 ಪಂದ್ಯವನ್ನಾಡಿದ ಕಾವೇರಪ್ಪ ಅತ್ಯುತ್ತಮ ಪ್ರದರ್ಶನ ತೋರಿದರು, ವಾಸುಕಿ ಕೌಶಿಕ್ ಮತ್ತು ವಿಜಯ್‌ಕುಮಾರ್ ವೈಶಾಕ್ ತಲಾ ಎರಡು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್ ಗಳು
ಕರ್ನಾಟಕ: 20 ಓವರ್‌ಗಳಲ್ಲಿ 147/7, (ಶ್ರೇಯಸ್ ಗೋಪಾಲ್ 48, ಮನೋಜ್ ಭಾಂಡಗೆ 41) ಕಾಶ್ಮೀರ 18.2 ಓವರ್‌ಗಳಲ್ಲಿ 113 ಆಲೌಟ್ (ವಿವ್ರಾಂತ್ ಶರ್ಮಾ 63; ವಿಧ್ವತ್ ಕಾವೇರಪ್ಪ 5/11)
ಮಹಾರಾಷ್ಟ್ರಕ್ಕೆ ಭರ್ಜರಿ ಜಯ
ಮೊಹಾಲಿಯಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಮಹಾರಾಷ್ಟ್ರ ತಂಡ ಮೇಘಾಲಯವನ್ನು 74 ರನ್‌ಗಳಿಂದ ಸೋಲಿಸಿದೆ. ಮಹಾರಾಷ್ಟ್ರ 20 ಓವರ್‌ಗಳಲ್ಲಿ 144 ಆಲೌಟ್ (ರುತುರಾಜ್ ಗಾಯಕ್‌ವಾಡ್ 38; ಅಭಿಷೇಕ್ ಕುಮಾರ್ 4/37) ಮೇಘಾಲಯ 18.1 ಓವರ್‌ಗಳಲ್ಲಿ 70ಕ್ಕೆ ಆಲೌಟ್ (ಯೋಗೇಶ್ ತಿವಾರಿ 26; ಸತ್ಯಜೀತ್ ಬಚಾವ್ 4/26)
ಸರ್ವಿಸಸ್ ಗೆ ಜಯ
ಸರ್ವಿಸಸ್ 20 ಓವರ್‌ಗಳಲ್ಲಿ 148/8 (ಅನ್ಶುಲ್ ಗುಪ್ತಾ 39; ವೈಶಾಖ್ ಚಂದ್ರನ್ 3/28) ಕೇರಳ 19.4 ಓವರ್‌ಗಳಲ್ಲಿ 136 ಆಲೌಟ್ (ಸಚಿನ್ ಬೇಬಿ 36, ಸಂಜು ಸ್ಯಾಮ್ಸನ್ 30; ನಿತಿನ್ ಯಾದವ್ 3/12, ಅರ್ಜುನ್ ಶರ್ಮಾ 3/36, ಪುಲ್ಕಿತ್ ನಾರಂಗ್ 2 /17, ಪಾರ್ಥ್ ರೇಖಡೆ 2/19).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
ಧ್ಯಾನ್‌ಚಂದ್ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್ ಸಿಂಗ್ ಪ್ರಶ್ನೆ
ICC ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಅವಕಾಶ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Rohit Sharma: ತನುಷ್ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ
Koteshwar: ಬೀಜಾಡಿಯ ಯೋಧ ಅನೂಪ್ ಪೂಜಾರಿ ಮೃತ್ಯು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.